ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಗಗನನೌಕೆಗೆ ಕಲ್ಪನಾ ಚಾವ್ಲಾ ಹೆಸರು ನಾಮಕರಣ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 10: ಅಮೆರಿಕದ ಗಗನನೌಕೆಯೊಂದಕ್ಕೆ ಭಾರತದ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರು ನಾಮಕರಣ ಮಾಡಲಾಗಿದೆ.

ಅಮೆರಿಕ ಪ್ರತಿಷ್ಠಿತ , ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿ ನಾರ್ಥ್ ರಾಪ್ ಗ್ರುಮ್ಯಾನ್ , ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಲ್ಪನಾ ಚಾವ್ಲಾಗೆ ಅಮೆರಿಕ ಈ ಗೌರವ ನೀಡಿದೆ.

ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ: ಶಿವನ್ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ: ಶಿವನ್

ಎನ್‌ಜಿ-14 ಸಿಗ್ನಸ್ ಎಂಬ ಎಂಬ ಗಗನನೌಕೆಗೆ ಚಾವ್ಲಾ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ವರ್ಜೀನಿಯಾದಲ್ಲಿನಾಸಾಕ್ಕೆ ಸೇರಿದ ವಾಲಪ್ಸ್ ಫ್ಲೈಟ್ ಫೆಸಿಲಿಟಿಯಿಂದ ಸೆಪ್ಟೆಂಬರ್ 29 ರಂದು ಈ ಗಗನನೌಕೆಯನ್ನು ಉಡಾವಣೆ ಮಾಡಲಾಗುತ್ತಿದೆ.

US NG-14 Cygnus Spacecraft Named After Late Indian-American Astronaut Kalpana Chawla

ಈ ಗಗನನೌಕೆಯು ಬಾಹ್ಯಾಕಾಶ ಅನ್ವೇಷಣೆ, ಸಂಶೋಧನೆಗೆ ಅಗತ್ಯವಿರುವ ಒಟ್ಟು 3629 ಕೆಜಿ ತೂಕದ ಸಾಮಗ್ರಿಗಳನ್ನು ಈ ಗಗನನೌಕೆ ಹೊತ್ತೊಯ್ಯಲಿದೆ.

1962ರ ಮಾರ್ಚ್ 17ರಂದು ಹರ್ಯಾಣದ ಕರ್ನಾಲ್‌ನಲ್ಲಿ ಕಲ್ಪನಾ ಚಾವ್ಲಾ ಜನಿಸಿದ್ದರು. ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು.

1984ರಲ್ಲಿ ಅಮೆರಿಕಕ್ಕೆ ಹೋಗಿ, ಯೂನಿವರ್ಸಿಟಿ ಆಫ್ ಟೆಕ್ಸಾಸ್‌ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1988ರಲ್ಲಿ ಕೊಲರಾಡೋ ಯುನಿವರ್ಸಿಟಿಯಿಂದ ಇದೇ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದರು.

English summary
An American commercial cargo spacecraft bound for the International Space Station has been named after fallen NASA astronaut Kalpana Chawla, the first India-born woman to enter space, for her key contributions to human spaceflight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X