ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಮತಿಯಿಲ್ಲದೆ ಸಮರಾಭ್ಯಾಸ: ಭಾರತ-ಅಮೆರಿಕ ಬಿಕ್ಕಟ್ಟು

|
Google Oneindia Kannada News

ನವದೆಹಲಿ, ಏಪ್ರಿಲ್ 10: ಭಾರತದ ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿನ ವಿಶಿಷ್ಟ ಆರ್ಥಿಕ ವಲಯದ (ಇಇಝೆಡ್) ಒಳಗೆ ತನ್ನ ಯುದ್ಧನೌಕೆ ಪ್ರವೇಶಿಸಿ ಸಮರಾಭ್ಯಾಸ ನಡೆಸಿದ್ದರ ಬಗ್ಗೆ ಅಮೆರಿಕದ ಸೆವೆಂತ್ ಫ್ಲೀಟ್ ಅಸಹಜ ಹೇಳಿಕೆ ಬಿಡುಗಡೆ ಮಾಡಿದ ಬಳಿಕ ನೌಕಾಪಡೆಯು ತನ್ನ ಜಲಸಂಚಾರದ ಸ್ವಾತಂತ್ರ್ಯವನ್ನು ಪ್ರತಿಪಾದಿಸಲು ನೂತನ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಅಳವಡಿಸಿಕೊಂಡಿದೆ.

ಅಮೆರಿಕದ ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ನೌಕೆಯು ಭಾರತದ ಜಲಪ್ರದೇಶದಲ್ಲಿ ಯಾವುದೇ ಅನುಮತಿ ಪಡೆಯದೆಯೇ ಫ್ರೀಡಂ ಆಫ್ ನೇವಿಗೇಷನ್ ಅಭ್ಯಾಸ ನಡೆಸಿದ್ದರ ಬಗ್ಗೆ ಬಹಿರಂಗ ಹೇಳಿಕೆ ನೀಡಿತ್ತು. ಇದು ಭಾರತಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಭಾರತದ ಅನುಮತಿ ಇಲ್ಲದೆ ಇಇಝೆಡ್‌ನಲ್ಲಿ ಸಮರಾಭ್ಯಾಸ ನಡೆಸಿದ ಅಮೆರಿಕ ನೌಕಾಪಡೆಭಾರತದ ಅನುಮತಿ ಇಲ್ಲದೆ ಇಇಝೆಡ್‌ನಲ್ಲಿ ಸಮರಾಭ್ಯಾಸ ನಡೆಸಿದ ಅಮೆರಿಕ ನೌಕಾಪಡೆ

ಒಂದೆಡೆ ಚೀನಾದ ಉಪಟಳವನ್ನು ಎದುರಿಸಲು ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿ 'ಕ್ವಾಡ್' ಒಕ್ಕೂಟ ರಚನೆ ಮಾಡಿಕೊಂಡಿದ್ದು, ಅದರ ಅನ್ವಯ ನೌಕಾ ಸಮರಾಭ್ಯಾಸ ನಿಕಟ ಸಹಕಾರವನ್ನು ಎರಡೂ ದೇಶಗಳು ಬೆಳೆಸಿಕೊಂಡಿವೆ. ಹೀಗಾಗಿ ಈ ಘಟನೆ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಸೃಷ್ಟಿಸುವುದಿಲ್ಲ ಎನ್ನಲಾಗಿದೆ.

US Navy Adopts New SOP On Freedom Of Navigation After Exercise In Indias Lakshadweep

ಫ್ರೀಡಂ ಆಫ್ ನೇವಿಗೇಷನ್ ಕಾರ್ಯಾಚರಣೆಯು ತಟಸ್ಥವಾಗಿದ್ದು, ದಕ್ಷಿಣ ಚೀನಾ ಸಮುದ್ರ ಅಥವಾ ಇತರೆ ಯಾವುದೇ ಕಡಲಿನ ಪ್ರದೇಶದಲ್ಲಿ ಅದನ್ನು ಅಮೆರಿಕ ನೌಕಾಪಡೆ ನಡೆಸಬಹುದಾಗಿತ್ತು ಎಂದು ಅಮೆರಿಕ ಹೇಳಿದೆ. ತನ್ನ ಜಲಸಂಚಾರದ ಸ್ವಾತಂತ್ರ್ಯವನ್ನು ಅದು ಒತ್ತಿ ಹೇಳಿದೆ.

ಆದರೆ ಅಮೆರಿಕದ ಫೊನೊಪ್ ಕಾರ್ಯಾಚರಣೆಯು ಹಿಂದೆಯೂ ನಡೆದಿದ್ದು, ಅಮೆರಿಕದ ನೌಕಾಪಡೆಯ ಹಡಗುಗಳ ಚಲನೆಯನ್ನು ಆಗಲೂ ಪ್ರಶ್ನಿಸಿರಲಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ. ಇಂತಹ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡುವುದು ಅದರ ವಾರ್ಷಿಕ ವರದಿಯ ಭಾಗವಾಗಿದೆ ಎನ್ನಲಾಗಿದೆ. ಆದರೆ ಈ ಬಾರಿ ಕಾರ್ಯಾಚರಣೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಅಮೆರಿಕ ಹೇಳಿಕೆ ಬಿಡುಗಡೆ ಮಾಡಿರುವುದು ಗೊಂದಲ ಮೂಡಿಸಿದೆ.

ಸೆವೆಂಟ್ ಫ್ಲೀಟ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ಕಾರ್ಯಾಚರಣೆ ಬಗ್ಗೆ ಭಾರತಕ್ಕೆ ತಿಳಿದೇ ಇಲ್ಲ ಎಂಬ ಹೇಳಿಕೆಯು ಭಾರತ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಹೀಗಾಗಿ ಇದು ಗಮನಕ್ಕೆ ಬಂದ ಬಳಿಕ ಅಧಿಕಾರಿಗಳು ಅಮೆರಿಕದ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ಬಗ್ಗೆ ಮಾತುಕತೆ ನಡೆದಿದೆ. 'ಈಗಾಲೇ ಹಾನಿಯಾಗಿದೆ. ಇದು ಕ್ವಾಡ್ ಮತ್ತು ನಮ್ಮ ಸಹಕಾರಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ ಈ ವಿಚಾರವಾಗಿ ರಾಜತಾಂತ್ರಿಕರು ತಮ್ಮ ಕೆಲಸ ಮಾಡುವಂತೆ ಸೂಚಿಸಲಾಗಿದೆ' ಎಂದು ದೆಹಲಿ ಮೂಲಗಳು ತಿಳಿಸಿವೆ.

English summary
US Navy has adopted a new SOP on its Freedom of Navigation after its unusual public statement regarding its warship entering India's EEZ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X