ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಹಂತದ ಪ್ರಯೋಗದಲ್ಲಿ ಕೋವಿಡ್ ಲಸಿಕೆ ಯಶಸ್ವಿ: ಶುಭ ಸುದ್ದಿ ನೀಡಿದ ಮಾಡೆರ್ನಾ ಕಂಪೆನಿ

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 27: ಅಮೆರಿಕದ ಮಾಡೆರ್ನಾ ಇಂಕ್. ಜೈವಿಕ ತಂತ್ರಜ್ಞಾನ ಕಂಪೆನಿ ಪ್ರಯೋಗಿಸಿರುವ ಲಸಿಕೆಯಲ್ಲಿ ಗಮನಾರ್ಹ ಸಂಗತಿ ಬೆಳಕಿಗೆ ಬಂದಿದೆ. ವಯಸ್ಕ ವ್ಯಕ್ತಿಗಳ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಅದರ ಆರಂಭದ ಪ್ರಯೋಗಗಳಲ್ಲಿ ಕಂಡುಬಂದಿದೆ. ಇದು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Recommended Video

Fixed Deposit ಮೇಲಿನ ಬಡ್ಡಿ ದರ ಇಳಿಕೆ ಮಾಡಿದ HDFC Bank | Oneindia Kannada

ಮಾಡೆರ್ನಾದ ಕೊಡೊನಾ ವೈರಸ್ ಲಸಿಕೆಯು ತನ್ನ ಮೊದಲ ಹಂತದ ಪ್ರಯೋಗದಲ್ಲಿ, ದೇಹದ ಸಂರಕ್ಷಣಾ ಪ್ರತಿಕ್ರಿಯೆಯ ಅತ್ಯಂತ ಪ್ರಮುಖ ಅಂಶವಾದ ಪ್ರತಿಕಾಯಗಳ ಉತ್ಪಾದನೆಯಲ್ಲಿ ನಿರಂತರ ಉನ್ನತ ಮಟ್ಟದ ಸ್ಥಿರತೆಯನ್ನು ಸೃಷ್ಟಿಸಿದೆ. ವಯಸ್ಕರಲ್ಲಿ ಈ ಫಲಿತಾಂಶ ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ವಿಶೇಷವೆಂದರೆ ಯುವ ವಯಸ್ಕರಿಗಿಂತಲೂ 55 ವರ್ಷಕ್ಕಿಂತ ಹೆಚ್ಚಿನ ವಯಸ್ಕರಲ್ಲಿ ಆಂಟಿಬಾಡಿಗಳ ಮಟ್ಟದ ಉತ್ಪಾದನೆ ಹೆಚ್ಚಾಗಿದೆ.

ಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿ

ಮಾಡೆರ್ನಾ ಲಸಿಕೆಯು ಅಮೆರಿಕದಲ್ಲಿ ಈಗ ಅಂತಿಮ ಮತ್ತು ದೊಡ್ಡ ಪ್ರಮಾಣದ ಪ್ರಯೋಗದಲ್ಲಿದೆ. ಶೀಘ್ರದಲ್ಲಿಯೇ ಅದರ ಫಲಿತಾಂಶಗಳು ಹೊರಬೀಳುವ ನಿರೀಕ್ಷೆಯಿದೆ. ಮುಂದೆ ಓದಿ...

ವಯಸ್ಕರಲ್ಲಿ ಪರಿಣಾಮಕಾರಿ

ವಯಸ್ಕರಲ್ಲಿ ಪರಿಣಾಮಕಾರಿ

ಮಾಡೆರ್ನಾದ ಆರಂಭದ ಹಂತದ ಪ್ರಯೋಗದಲ್ಲಿ ಈ ಫಲಿತಾಂಶಗಳು ಸಿಕ್ಕಿವೆ. ಹೆಚ್ಚು ವಯಸ್ಸಾದ 20 ಜನರ ಮೇಲಿನ ಲಸಿಕೆ ಪ್ರಯೋಗದ ವಿವರಗಳನ್ನು ಸಹ ಅದು ಒಳಗೊಂಡಿದೆ. ಮಾಡೆರ್ನಾ ಕಂಪೆನಿಯು ಈ ಡೇಟಾಗಳನ್ನು ಅಮೆರಿಕದ ಪ್ರತಿರಕ್ಷಣಾ ವಿಭಾಗದದ ರೋಗ ನಿಯಂತ್ರಣ ಮತ್ತು ತಡೆ ಸಲಹಾ ಸಮಿತಿಗೆ ಬುಧವಾರ ಸಲ್ಲಿಕೆ ಮಾಡಿದೆ. ಈ ಲಸಿಕೆ ಪ್ರಯೋಗದಲ್ಲಿ ಕಂಡುಕೊಂಡಿರುವ ಅಂಶಗಳು ಮಹತ್ವದ್ದಾಗಿವೆ. ಏಕೆಂದರೆ ಸಾಮಾನ್ಯವಾಗಿ ಲಸಿಕೆಗಳು ಯುವಜನರಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆಯೇ ವಿನಾ, ವಯಸ್ಕರಲ್ಲಿ ಅಷ್ಟಾಗಿ ಸ್ಪಂದಿಸುವುದಿಲ್ಲ.

ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಳ

ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಳ

ಈ ಲಸಿಕೆಯ ಪ್ರಾಯೋಗಿಕ ಬಳಕೆಯ ಡೋಸ್‌ಗಳು ಅಂತಿಮ ಹಂತದ ಪ್ರಯೋಗಕ್ಕೆ ಸಿದ್ಧವಾಗಿವೆ. ವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರತಿರಕ್ಷಣಾ ಮಟ್ಟಕ್ಕಿಂತಲೂ ಈ ಡೋಸ್‌ಗಳು ಅಧಿಕ ಮಟ್ಟದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ಪಾದಿಸುತ್ತವೆ ಎಂದು ಕಂಪೆನಿ ಹೇಳಿದೆ.

ಬೆಂಗಳೂರಲ್ಲಿ ಮಾಸ್ಕ್ ಧರಿಸುವ ನಿಯಮದಲ್ಲಿ ಬದಲಾವಣೆಬೆಂಗಳೂರಲ್ಲಿ ಮಾಸ್ಕ್ ಧರಿಸುವ ನಿಯಮದಲ್ಲಿ ಬದಲಾವಣೆ

ಅಡ್ಡಪರಿಣಾಮಗಳೂ ಇವೆ

ಅಡ್ಡಪರಿಣಾಮಗಳೂ ಇವೆ

ಅಂತಿಮ ಹಂತದ ಲಸಿಕೆ ಪ್ರಯೋಗದಲ್ಲಿ 100 ಮೈಕ್ರೋಗ್ರಾಮ್ ಡೋಸ್‌ಗಳನ್ನು ನೀಡಲಾಗುತ್ತಿದ್ದು, ಲಸಿಕೆಯಿಂದ ಶೀತ, ಆಯಾಸ, ಜ್ವರ, ತಲೆನೋವು, ಸ್ನಾಯು ನೋವು ಮುಂತಾದ ವಿವಿಧ ಸಣ್ಣಪ್ರಮಾಣದ ಅಡ್ಡಪರಿಣಾಮಗಳು ಉಂಟಾಗಿವೆ. ಆದರೆ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಕಂಪೆನಿ ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಇಷ್ಟೇ ಶುಲ್ಕ ಫಿಕ್ಸ್!ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಇಷ್ಟೇ ಶುಲ್ಕ ಫಿಕ್ಸ್!

ವಯಸ್ಕ ರೋಗಿಗಳಿಗೆ ಅತಿ ಮುಖ್ಯ

ವಯಸ್ಕ ರೋಗಿಗಳಿಗೆ ಅತಿ ಮುಖ್ಯ

ಇದೇ ಪ್ರಯೋಗದಲ್ಲಿ ಯುವ ವಯಸ್ಕರಲ್ಲಿ ಕಂಡುಬರುವುದಕ್ಕಿಂತಲೂ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ತಟಸ್ಥಗೊಳಿಸಬಲ್ಲ ಪ್ರತಿರಕ್ಷಣೆಗಳನ್ನು ಲಸಿಕೆ ಉತ್ಪಾದಿಸುತ್ತದೆ ಎಂದು ಕಂಪೆನಿಯು ತನ್ನ ಮೊದಲ ವಿವರಗಳಲ್ಲಿ ತಿಳಿಸಿದೆ. ಕೋವಿಡ್ 19ರಿಂದ ತೀವ್ರವಾಗಿ ಬಳಲುತ್ತಿರುವ ವಯಸ್ಕ ರೋಗಿಗಳು ಚೇತರಿಸಿಕೊಳ್ಳಲು ಅವರ ದೇಹದಲ್ಲಿ ಆಂಟಿಬಾಡಿಗಳ ಪ್ರಮಾಣದಲ್ಲಿ ಹೆಚ್ಚಳ ಅಗತ್ಯವಾಗಿದೆ.

English summary
US Moderna Biotechnology Company said, its Covid-19 vaccine has produces antibodies in trial of older people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X