ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನಕ್ಕೆ ಅಮೆರಿಕದ ನೆರವು, ಆದರೆ ತಾಲಿಬಾನ್ ಸರ್ಕಾರಕ್ಕಲ್ಲ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 04: ಅಫ್ಘಾನಿಸ್ತಾನಕ್ಕೆ ಅಮೆರಿಕ ನೆರವು ನೀಡಲಿದೆ ಆದರೆ ತಾಲಿಬಾನ್ ಸರ್ಕಾರಕ್ಕಲ್ಲ ಎಂದು ಅಮೆರಿಕ ಹೇಳಿದೆ. ಅಮೆರಿಕವು ಮಾನವೀಯತೆ ಆಧಾರದ ಮೇಲೆ ಅಫ್ಘಾನಿಸ್ತಾನದ ನಾಗರಿಕರಿಗೋಸ್ಕರ ನೆರವು ನೀಡಲು ಮುಂದಾಗಿದೆ.

ಯುಎಸ್ ಕಾಂಗ್ರೆಸ್ ಅಫ್ಘಾನಿಸ್ತಾನಕ್ಕೆ ನೆರವು ನೀಡಲಿದ್ದು, ಯುಎನ್ ಸೇರಿದಂತೆ ಹಲವು ಏಜೆನ್ಸಿಗಳಿಗೆ ಹಣಕಾಸು ಒದಗಿಸುವ ಸಾಧ್ಯತೆ ಇದೆ. ಆದರೆ ನೇರವಾಗಿ ತಾಲಿಬಾನ್ ಸರ್ಕಾರಕ್ಕೆ ಹಣ ನೀಡುವ ಯಾವುದೇ ಉದ್ದೇಶ ಅಮೆರಿಕಕ್ಕಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

2001ರಿಂದಲೂ ಅಮೆರಿಕ ಅಫ್ಘಾನಿಸ್ತಾನಕ್ಕೆ ನೆರವು ನೀಡುತ್ತಲೇ ಬಂದಿದೆ. ಭದ್ರತೆ, ಆಡಳಿತ ಹಾಗೂ ಮಾನವೀಯ ಅಗತ್ಯಗಳಿಗಾಗಿ ಸರಿಸುಮಾರು 130 ಬಿಲಿಯನ್ ಡಾಲರ್ ಅನ್ನು ಮೀಸಲಿಟ್ಟಿದೆ.

Afghanistan

ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಯುದ್ಧವನ್ನು ಮುಂಬರುವ ವರ್ಷಗಳಲ್ಲಿ ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ಅಲ್ಲದೇ ಹೆಚ್ಚಿನವರು ಇದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಎಂದೇ ಬಣ್ಣಿಸಲಿದ್ದಾರೆ. 'ಸ್ಮಶಾನಗಳ ಸಾಮ್ರಾಜ್ಯ'ವೆಂದೇ ಕುಖ್ಯಾತಿ ಪಡೆದಿರುವ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸರಿಪಡಿಸುವಲ್ಲಿ, ಶಾಂತಿ ಸ್ಥಾಪಿಸುವಲ್ಲಿ ಅಮೆರಿಕ ನಾಯಕತ್ವದ ವೈಫಲ್ಯ ಹಾಗೂ ಅಸಮರ್ಥ ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಸಹಕಾರದ ವೈಫಲ್ಯ ಎಂದೇ ಪರಿಗಣಿಸಲಾಗುತ್ತದೆ.

ವಿಯೆಟ್ನಾಂನಲ್ಲಿ ಅಮೆರಿಕದ ಸೋಲು ಅಥವಾ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಸೋಲು ಶೀತಲ ಸಮರಕ್ಕೆ ಸಂಬಂಧಿಸಿದ ಘಟನೆಗಳಾಗಿದ್ದವು. ಯಾವಾಗೆಲ್ಲ ಸಾಂಪ್ರದಾಯಿಕ ಸಂಘರ್ಷದ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಪರಸ್ಪರ ವಿರುದ್ಧವಾಗಿದ್ದವೋ ಅಫ್ಘಾನಿಸ್ತಾನದಲ್ಲಿ ಅಮೆರಿಕದ ವೈಫಲ್ಯ ವಾಸ್ತವ ಶರಣಾಗತಿಯಾಗಿದೆ.

ಕಳೆದ ಏಳು-ಎಂಟು ವರ್ಷಗಳಲ್ಲಿ, ರಾಷ್ಟ್ರೀಯ ಏಕತೆ ಸರ್ಕಾರ ಇಲ್ಲಿ ತಾವು ತಾಲಿಬಾನ್ ವಿರೋಧಿ ಪಡೆಗಳನ್ನು ಬಲಪಡಿಸಲು ಸಮರ್ಥವಾಗಿದ್ದೇವೆ ಎಂದು ಬಿಂಬಿಸಿ, ತಾವು ಆಡಳಿತ ನಡೆಸಲು ಸಮರ್ಥರೆಂದು ತೋರಿಸುವ ಯತ್ನ ನಡೆಸಿದ್ದಾರೆ. 'ಅಫಘಾನ್ ನೇತೃತ್ವದ ಮತ್ತು ಅಫಘಾನ್ ಒಡೆತನವೇ ಪರಿಹಾರ' ಎಂಬುವುದು ಕೊನರಯ ಕೌಂಟರ್ ಎಂದು ತಜ್ಞರೇ ಉಲ್ಲೇಖಿಸುತ್ತಿದ್ದರು.

ಆದರೀಗ ಇವುಗಳಲ್ಲಿ ಯಾವುದೂ ಕಾರ್ಯ ನಿರ್ವಹಿಸಿಲ್ಲ ಎಂಬಂತೆ ಕಂಡು ಬರುತ್ತಿದೆ. ಹೀಗಿದ್ದರೂಉಲ್ಬಣಗೊಳ್ಳುತ್ತಿರುವ ಯುದ್ಧದಲ್ಲಿ ಯಾವ ಅಭಿಪ್ರಾಯ ಕೊಟ್ಟರೂ ಅದು ಬಹಳ ಅವಸರದಿಂದ ಕೊಟ್ಟ ಹೇಳಿಕೆಯಾಘುತ್ತದೆ ಎಂಬುವುದೂ ಅನೇಕರ ಅಭಿಪ್ರಾಯವಾಗಿದೆ.

ಅಫಘಾನ್ ನ್ಯಾಷನಲ್ ಆರ್ಮಿ (ಎಎನ್ಎ) ಮತ್ತು ನ್ಯಾಷನಲ್ ಪೋಲಿಸ್ ಒಟ್ಟಾಗಿ 3,00,000ಕ್ಕೂ ಅಧಿಕವಿದ್ದಾರೆ. ಶಕ್ತಿಶಾಲಿಯಾಗಿರುವ ಈ ಪಡೆ ಸಾಹಸ ಕಾರ್ಯಗಳಲ್ಲಿ ಯಾರಿಗೂ ಕಮ್ಮಿ ಇಲ್ಲ.

ಇವು ಕಳೆದ ಕೆಲ ವರ್ಷಗಳಲ್ಲಿ ತಾಲಿಬಾನ್‌ನ ಕೆಲ ವಿಭಿನ್ನ ಆಕ್ರಮಣಗಳನ್ನು ಎದುರಿಸಿ ಸುಮಾರು 8,000 ಮಂದಿ ಉಗ್ರರನ್ನು ಸದೆಬಡಿದಿದ್ದಾರೆ. ಇದು ಅಫ್ಘಾನಿಸ್ತಾನದೊಳಗೆ ಅಮೆರಿಕ ಯುಎಸ್ ಒದಗಿಸಿದ ವಾಯು ಬೆಂಬಲದ ಹೊರತಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾಡಿದ ಸಾಹಸ ಎಂಬುವುದು ಉಲ್ಲೇಖನೀಯ.

English summary
The US Congress is likely to finance UN and other agencies providing humanitarian assistance for Afghanistan but there is virtually no chance it will directly fund a new Taliban-led government, congressional aides said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X