ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಗಡಿ ಹಂಚಿಕೆ ಬಗ್ಗೆ ಗೊತ್ತಿರದ ಟ್ರಂಪ್ ಮಧ್ಯಸ್ಥಿಕೆ ಮಾತಾಡಿದ್ದೇಕೆ?

|
Google Oneindia Kannada News

ವಾಷಿಂಗ್ಟನ್, ಮೇ 27: ಭಾರತ ಮತ್ತು ಚೀನಾ ಗಡಿ ವಿವಾದಕ್ಕೆ ಅಮೆರಿಕ ಮಧ್ಯಪ್ರವೇಶಿಸಿದೆ. ಉಭಯ ರಾಷ್ಟ್ರಗಳ ನಡುವಿನ ಗಡಿ ಹಂಚಿಕೆಯ ವಿವಾದ ಕುರಿತು ಮಧ್ಯಸ್ಥಿಕೆ ವಹಿಸಲು ನಾವು ಸಿದ್ಧ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Recommended Video

ಅಮೇರಿಕಾದ ಶ್ವೇತ ಭವನದ ಎದುರು ಶಾಂತಿ ಸ್ತೋತ್ರ ಪಠಿಸಿದ ಅರ್ಚಕರು | USA | Oneindia Kannada

ಕೊರೊನಾ ವೈರಸ್‌ ವಿಚಾರದಲ್ಲಿ ಚೀನಾ ವಿರುದ್ಧ ಕೆಂಡಕಾರುತ್ತಿರುವ ಡೊನಾಲ್ಡ್ ಟ್ರಂಪ್, ಈಗ ಭಾರತ-ಚೀನಾ ಗಡಿ ವಿಚಾರದಲ್ಲಿ ಸಂಧಾನದ ಮಾತುಕತೆಗೆ ನಾವು ಮಧ್ಯಸ್ಥಿಕೆ ವಹಿಸುತ್ತೇವೆ ಎಂದಿರುವುದು ಈಗ ಮಹತ್ವ ಪಡೆದುಕೊಂಡಿದೆ.

ಗಡಿ ವಿವಾದ: ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಅಮೇರಿಕಾಗಡಿ ವಿವಾದ: ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಅಮೇರಿಕಾ

ಚೀನಾ ಮತ್ತು ಭಾರತದ ಗಡಿಗೆ ಸಂಬಂಧಿಸಿದಂತೆ ಟ್ರಂಪ್ ಹೇಳಿದ್ದ ಹಳೆಯ ವಿಷಯವೊಂದು ಸದ್ದು ಮಾಡ್ತಿದೆ. ಈ ಹಿಂದೆ 'ಚೀನಾ ಮತ್ತು ಭಾರತದ ನಡುವೆ ಗಡಿ ಹಂಚಿಕೆಯಾಗಿರುವುದು ನನಗೆ ಗೊತ್ತೇ ಇಲ್ಲ' ಎಂದು ಟ್ರಂಪ್ ಹೇಳಿದ್ದರು ಎಂಬ ವಿಷಯವನ್ನು ಅಮೆರಿಕ ಪತ್ರಕರ್ತೆಯೊಬ್ಬರು ವರದಿ ಮಾಡಿದ್ದರು.

 US Journalists Philip Rucker reports in Her Book Trump didnt know India-China shared border

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಔಪಚಾರಿಕ ಮಾತುಕತೆ ನಡೆಸಿದ ಸಂದರ್ಭದಲ್ಲಿ ''ಭಾರತ ಮತ್ತು ಚೀನಾ ಗಡಿ ಹಂಚಿಕೊಂಡಿಲ್ಲ'' ಎಂದು ಹೇಳಿದ್ದರಂತೆ. ಈ ಮಾತು ಕೇಳಿ ಮೋದಿ ಅಚ್ಚರಿಗೊಳಗಾದರಂತೆ.

ಈ ವಿಷಯವನ್ನು ಅಮೆರಿಕ ಪತ್ರಕರ್ತೆ ಫಿಲಿಪ್‌ ರುಕ್ಕರ್‌ ಹಾಗೂ ಕ್ಯಾರೊಲ್‌ ಡಿ ಲಿಯಾನಿಂಗ್‌ ಅವರು ಬರೆದ 'ಎ ವೆರಿ ಸ್ಟೇಬಲ್‌ ಜೀನಿಯಸ್‌' ಪುಸ್ತಕರಲ್ಲಿ ಬರೆದಿದ್ದಾರಂತೆ. 'ಚೀನಾ ಜೊತೆ ಭಾರತ ಗಡಿ ಹಂಚಿಕೊಂಡಿಲ್ಲ' ಎಂದು ಟ್ರಂಪ್ ಹೇಳಿದ ಬಳಿಕ ಮೋದಿ ಟ್ರಂಪ್ ಅವರನ್ನು ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಿಶ್ಲೇಷಿಸಿದ್ದಾರೆ. ಟ್ರಂಪ್ ಭೇಟಿ ಬಳಿಕ ಸಭೆಯಿಂದ ಹೊರಬಂದ ಮೋದಿ ''ಈ ವ್ಯಕ್ತಿಗೆ ಗಂಭೀರತೆ ಇಲ್ಲ'' ಎಂದು ತಿಳಿದರು ಎಂಬ ವಿಷಯನ್ನು ಟ್ರಂಪ್ ಆಪ್ತರು ಹೇಳಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆಯಂತೆ.

ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿಗೆ ಕೋಪ ತರಿಸಿದ್ದ ಟ್ರಂಪ್ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿಗೆ ಕೋಪ ತರಿಸಿದ್ದ ಟ್ರಂಪ್

ಚೀನಾ ಮತ್ತು ಭಾರತದ ಗಡಿಯ ಬಗ್ಗೆ ಸ್ಪಷ್ಟ ಚಿತ್ರಣ ತಿಳಿಯದ ಟ್ರಂಪ್ ಈಗ ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ ಅಂದ್ರೆ ಈ ಹೇಳಿಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎನ್ನುವುದು ತಿಳಿಯುತ್ತಿಲ್ಲ.

ಮತ್ತೊಂದೆಡೆ ಯುಎಸ್‌ನಲ್ಲಿ ಕೊರೊನಾ ಸೋಂಕು ರುದ್ರನರ್ತನ ಮಾಡ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ರಾಷ್ಟ್ರವೇ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದೆ. ಆದರೆ, ಟ್ರಂಪ್ ಮಾತ್ರ ಭಾರತ-ಚೀನಾ ಗಡಿ ವಿಚಾರಕ್ಕೆ ಮಧ್ಯಸ್ಥಿಕೆ ವಹಿಸ್ತಾರಂತೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

English summary
'Donald Trump didn't know India-China shared border' US Journalists Philip Rucker reports in 'A Very Stable Genius' book. but, trump saying now ''we ready to mediate border dispute between India and China''.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X