ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳಿಗೆ ಅಮೆರಿಕ ವೀಸಾ ನಿರ್ಬಂಧ

|
Google Oneindia Kannada News

ವಾಷಿಂಗ್ಟನ್, ಜೂನ್ 27: ಚೀನಾ ಕಮ್ಯುನಿಸ್ಟ್ ಪಕ್ಷದ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳ ವಿರುದ್ಧ ವೀಸಾ ನಿರ್ಬಂಧಕ್ಕೆ ಅಮೆರಿಕ ನಿರ್ಧರಿಸಿದೆ.

ಹಾಂಗ್‌ಕಾಂಗ್‌ನ ಸಾರ್ವಭೌಮತ್ವವನ್ನು ಕಸಿದುಕೊಳ್ಳುತ್ತಿರುವ ಚೀನಾದ ಕ್ರಮ ವಿರೋಧಿಸಿ ಅಮೆರಿಕ ಈ ನಿರ್ಧಾರಕ್ಕೆ ಮುಂದಾಗಿದೆ.

ಚೀನಾ-ಬ್ರಿಟಿಷ್ ಒಪ್ಪಂದಕ್ಕೆ ವಿರುದ್ಧವಾಗಿ ಹಾಂಗ್‌ಕಾಂಗ್ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡಲಾಗುತ್ತಿದೆ. ಇದರಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಪಾತ್ರ ಮಹತ್ವದ್ದಾಗಿದೆ.

Mike

ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದಂತೆ, ಈಗ ಚೀನಾದ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಲ ಕೂಡಿ ಬಂದಿದೆ.

ಚೀನಾ ಸೇನೆ ವಿರುದ್ಧ ತೊಡೆತಟ್ಟಲು ಸಜ್ಜಾಗುತ್ತಿರುವ ಅಮೆರಿಕ ಸೇನೆಚೀನಾ ಸೇನೆ ವಿರುದ್ಧ ತೊಡೆತಟ್ಟಲು ಸಜ್ಜಾಗುತ್ತಿರುವ ಅಮೆರಿಕ ಸೇನೆ

ಚೀನಾದಲ್ಲಿ ಹಾಂಗ್‌ಕಾಂಗ್ ಪ್ರತಿಭಟನಾಕಾರರ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ. ಈ ಬಗ್ಗೆ ಚೀನಾಕ್ಕೆ ಅಮೆರಿಕ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ, ಚೀನಾ ಕ್ಯಾರೆ ಅಂದಿರಲಿಲ್ಲ. ಈ ವೀಸಾ ನಿರ್ಬಂಧದಿಂದ ಚೀನಾದ ಯಾವುದೇ ಪದಾಧಿಕಾರಿಗಳು ಅಮೆರಿಕಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ.

ಇದರಿಂದ ಚೀನಾ ಹಾಗೂ ಅಮೆರಕ ಶೀತಲ ಸಮರ ಇನ್ನೊಂದು ರೂಪ ಪಡೆದುಕೊಂಡಂತಾಗಿದೆ.ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಚೀನಾದ ಕ್ರಮ ವಿರೋಧಿಸಿ ಹಾಂಗ್‌ಕಾಂಗ್‌ನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನಾಕಾರರ ವಿರುದ್ಧ ಚೀನಾ ನಡೆದುಕೊಳ್ಳುತ್ತಿರುವ ರೀತಿಗೆ ವಿಶ್ವದೆಲ್ಲೆಡೆ ತೀವ್ರ ವಿರೋಧವ್ಯಕ್ತವಾಗಿದೆ. ವಿಪರ್ಯಾಸವೆಂದರೆ ಐರೋಪ್ಯ ರಾಷ್ಟ್ರಗಳು ಹಾಗೂ ಅಮೆರಿಕ ಧ್ವನಿ ಎತ್ತಿರುವ ರೀತಿಯಲ್ಲಿ ವಿಶ್ವ ಸಂಸ್ಥೆ ಮಾತನಾಡದಿರುವುದು ವಿಶೇಷ.

English summary
The US State Department has imposed its first wave of visa restrictions against Chinese Communist Party officials in retaliation for Beijing policies in Hongkong,secretary of state Mike Pompeo announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X