• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಕಠಿಣ ಪ್ರತೀಕಾರದ ಕ್ರಮ: ಸೌದಿ ಜನರ ಮೇಲೆ ನಿರ್ಬಂಧ, ವೀಸಾ ನಿಷೇಧ

|

ವಾಷಿಂಗ್ಟನ್, ಫೆಬ್ರವರಿ 27: ಪತ್ರಕರ್ತ ಜಮಾಲ್ ಖಶೋಗ್ಗಿ ಕೊಲೆಗೆ ಸಂಬಂಧಿಸಿದಂತೆ ಅಮೆರಿಕದ ಜೋ ಬೈಡನ್ ಸರ್ಕಾರವು ಸೌದಿ ಅರೇಬಿಯಾದ ನಾಗರಿಕರನ್ನು ಗುರಿಯನ್ನಾಗಿರಿಸಿ ನಿರ್ಬಂಧಗಳು ಹಾಗೂ ವೀಸಾ ನಿಷೇಧದ ಕ್ರಮಗಳನ್ನು ಪ್ರಕಟಿಸಿದೆ. ಆದರೆ ಈ ಪ್ರಕರಣದಲ್ಲಿ ಪ್ರಮುಖ ಆರೋಪಕ್ಕೆ ಗುರಿಯಾಗಿರುವ ಸೌದಿ ರಾಜಕುಮಾರ್ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಯಾವುದೇ ನಿರ್ಬಂಧ ವಿಧಿಸಿಲ್ಲ.

ತನ್ನ ಅರಬ್ ಮಿತ್ರ ಹಾಗೂ ಪ್ರಮುಖ ತೈಲ ಪೂರೈಕೆದಾರ ದೇಶದ ಮಾನವ ಹಕ್ಕುಗಳ ಉಲ್ಲಂಘನೆ ಕೃತ್ಯಗಳಿಗೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ ಎಂದು ಚುನಾವಣಾ ಪ್ರಚಾರದ ವೇಳೆ ಬೈಡನ್ ತಂಡ ಆರೋಪಿಸುತ್ತಾ ಬಂದಿತ್ತು. ಜತೆಗೆ ಸೌದಿ ಜತೆಗಿನ ಸಂಬಂಧವನ್ನು ಮರು ಜೋಡಣೆ ಮಾಡುವ ಬಗ್ಗೆ ಭರವಸೆ ನೀಡಿತ್ತು. ಅದರ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸೌದಿ ರಾಜಕುಮಾರನ ಆದೇಶದಂತೆಯೇ ಖಶೋಗ್ಗಿ ಕೊಲೆ: ಅಮೆರಿಕ ವರದಿ ಆರೋಪ

ಯೆಮನ್‌ನಲ್ಲಿ ನಡೆಯುತ್ತಿರುವ ಸಮರ ಹಾಗೂ ಸೌದಿ ಕಾನ್ಸುಲೇಟ್‌ನಲ್ಲಿ ಖಶೋಗ್ಗಿ ಹತ್ಯೆ ಬಳಿಕ ಸೌದಿ ಜತೆಗಿನ ಅಮೆರಿಕ ಸಂಬಂಧ ಹಳಸಿದೆ. ಮಧ್ಯಪ್ರಾಚ್ಯದೊಂದಿಗಿನ ಮೂಲ ಸಂಬಂಧವನ್ನು ಕಡಿದುಕೊಳ್ಳದೆ ಸೌದಿ ಜತೆಗಿನ ಬಾಂಧವ್ಯವನ್ನು ಮರು ರೂಪಿಸುವ ಗುರಿಯನ್ನು ಅಮೆರಿಕ ಹೊಂದಿದೆ ಎನ್ನಲಾಗಿದೆ.

ಅಮೆರಿಕ ಆರೋಪ

ಅಮೆರಿಕ ಆರೋಪ

ಸೌದಿ ಗುಪ್ತಚರದ ಮಾಜಿ ಉಪ ಮುಖ್ಯಸ್ಥ ಅಹ್ಮದ್ ಅಲ್ ಅಸಿರಿ, ಸೌದಿ ರಾಯಲ್ ಗಾರ್ಡ್‌ನ ತ್ವರಿತ ಕಾರ್ಯಪಡೆ ಅಥವಾ ಆರ್‌ಐಎಫ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ಹಾಗೂ ಇಲಾಖೆಗಳ ಮೇಲೆ ಅಮೆರಿಕದ ಖಜಾನೆ ಇಲಾಖೆ ನಿರ್ಬಂಧ ವಿಧಿಸಿದೆ. ಖಶೋಗ್ಗಿ ಹತ್ಯೆಯಲ್ಲಿ ಆರ್‌ಐಎಫ್ ಪ್ರಮುಖ ಭಾಗಿಯಾಗಿದೆ ಎಂದು ಅಮೆರಿಕದ ಗುಪ್ತಚರ ವರದಿ ಆರೋಪಿಸಿದೆ.

ಸೌದಿ ಜನರ ಸಂಪತ್ತು ಮುಟ್ಟುಗೋಲು

ಸೌದಿ ಜನರ ಸಂಪತ್ತು ಮುಟ್ಟುಗೋಲು

ಅಮೆರಿಕದ ಹೊಸ ಕ್ರಮವು ಸೌದಿಯ ವ್ಯಕ್ತಿಗಳು ಅಮೆರಿಕದಲ್ಲಿ ಹೊಂದಿರುವ ಸಂಪತ್ತನ್ನು ಮುಟ್ಟುಗೋಲು ಹಾಕಲು ಸೂಚಿಸಲಾಗಿದೆ. ಜತೆಗೆ ಅಮೆರಿಕನ್ನರು ಅವರೊಂದಿಗೆ ವ್ಯವಹಾರ ನಡೆಸದಂತೆ ನಿರ್ಬಂಧಿಸಿದೆ. ಜಮಾಲ್ ಖಶೋಗ್ಗಿ ಅವರ ಹತ್ಯೆಯಲ್ಲಿ ಭಾಗಿಯಾದವರು ಅದರ ಹೊಣೆ ಹೊರಬೇಕು ಎಂದು ಖಜಾನೆ ಇಲಾಖೆ ಹೇಳಿದೆ.

ಪತ್ರಕರ್ತ ಖಶೋಗ್ಗಿ ಹತ್ಯೆ ವರದಿ ಬಗ್ಗೆ ಬೈಡನ್-ಸೌದಿ ರಾಜ ಸಲ್ಮಾನ್ ಮಾತುಕತೆ ಸಾಧ್ಯತೆ

76 ಮಂದಿಗೆ ಮೇಲೆ ನಿರ್ಬಂಧ

76 ಮಂದಿಗೆ ಮೇಲೆ ನಿರ್ಬಂಧ

ಈಗಾಗಲೇ ಸೌದಿಯ 76 ನಾಗರಿಕರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಪತ್ರಕರ್ತರು ಹಾಗೂ ತಮ್ಮ ಟೀಕಾಕಾರರು ಮತ್ತು ಅವರ ಕುಟುಂಬದವರನ್ನು ಬೆದರಿಸುವ, ಕಿರುಕುಳ ನೀಡುವ, ಹಾನಿ ಮಾಡುವ ಅಥವಾ ದಬ್ಬಾಳಿಕೆ ನಡೆಸುವ ದೇಶಗಳ ಮೇಲೆ ಈ ನಿರ್ಬಂಧಗಳು ಅನ್ವಯವಾಗಲಿವೆ. ಈ ನಿಯಮಕ್ಕೆ 'ಖಶೋಗ್ಗಿ ನಿಷೇಧ' ಅಥವಾ 'ಖಶೋಗ್ಗಿ ಕಾನೂನು' ಎಂದು ಹೆಸರು ನೀಡಲಾಗಿದೆ.

ಅಮೆರಿಕದ ಮಣ್ಣಿಗೆ ಬರಲು ಬಿಡೊಲ್ಲ

ಅಮೆರಿಕದ ಮಣ್ಣಿಗೆ ಬರಲು ಬಿಡೊಲ್ಲ

'ಯಾವುದೇ ವಿದೇಶಿ ಸರ್ಕಾರದ ಪರವಾಗಿ ಭಿನ್ನಮತೀಯರನ್ನು ಗುರಿಯನ್ನಾಗಿಸಿ ದಾಳಿ ನಡೆಸುವವರನ್ನು ನಮ್ಮ ಗಡಿಯೊಳಗಿನ ಸುರಕ್ಷತೆಗಾಗಿ ಅಮೆರಿಕದ ಮಣ್ಣಿಗೆ ತಲುಪಲು ಅವಕಾಶ ನೀಡಬಾರದು. ಅಂತಹ ದಾಳಿಕೋರರ ಕುಟುಂಬದ ಸದಸ್ಯರಿಗೆ ಆಯ್ಕೆಯಾಧಾರದಲ್ಲಿ ವೀಸಾ ನಿಷೇಧ ಅನ್ವಯವಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ತಿಳಿಸಿದ್ದಾರೆ.

English summary
US has announced sanctions and visa bans targetting Saudi Arabian citizens over journalist Jamal Khashoggi's murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X