ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಜೈಲು ಸೇರಬೇಕು ಎಂಬುದು ನನ್ನಾಸೆ ಎಂದ ಅಮೆರಿಕ ಸ್ಪೀಕರ್

|
Google Oneindia Kannada News

ವಾಷಿಂಗ್ಟನ್, ಜೂನ್ 07: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೈಲು ಸೇರುವುದನ್ನು ನೋಡಬೇಕು ಎಂಬುದು ನನ್ನಾಸೆ ಎಂದು ಯುಎಸ್ ಹೌಸ್ ಆಫ್ ರೆಪ್ರಸಂಟೇಟಿವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಪದಚ್ಯುತಿಯಾದರೆ ಮುಗಿದಿಲ್ಲ, ಅವರು ಮಾಡಿದ ತಪ್ಪುಗಳಿಗೆ ಅವರಿಗೆ ಜೈಲಿನಲ್ಲಿ ಶಿಕ್ಷೆಯಾಗಬೇಕು. ಅದನ್ನು ನಾನು ನೋಡಬೇಕು ಎಂದು ನ್ಯಾನ್ಸಿ ಪೆಲೋಸಿ ಹೇಳಿದರು.

ಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯ

ಡೆಮಾಕ್ರಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಯುಎಸ್ ಪ್ರತಿನಿಧಿ ಸಭೆಯ ಮೊಟ್ಟ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಗುರುವಾರ ಡೆಮಾಕ್ರೆಟಿಕ್ ಪಕ್ಷದ ನಾಯಕರ ನಡುವೆ ನಡೆದ ಗೌಪ್ಯ ಸಭೆಯಲ್ಲಿ ನ್ಯಾನ್ಸಿ ಡೊನಾಲ್ಡ್ ಟ್ರಂಪ್ ಅವರನ್ನು ಜೈಲಿನಲ್ಲಿ ನೋಡಬೇಕು ಎಂದಿರುವುದನ್ನು 'ಪೊಲಿಟಿಕೋ' ವರದಿ ಮಾಡಿದೆ.

US house speaker says, Donald Trump should be sent to jail

2020 ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಯಾವುದೇ ಕಾರಣಕ್ಕೂ ಮತ್ತೆ ಅಧಿಕಾರಕ್ಕೆ ಬರಬಾರದು, ಅವರು ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾಗುವುದು ಮಾತ್ರವಲ್ಲ, ಜೈಲು ಸೇರಬೇಕು. 2016 ರ ಅಮೆರಿಕ ಚುನಾವಣೆಯಲ್ಲಿ ರಷ್ಯಾ ಮೂಗುತೂರಿಸದ್ದರ ಬಗೆಗಿನ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸುಸವಂತೆ ಮಾಡಿದ್ದು, ಟ್ರಂಪ್ ಮಾಡಿದ ಮಹಾನ್ ಅಪರಾಧ, ಜೊತೆಗೆ ಅವರ ಹೆಸರಿನಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳಿವೆ. ಅವೆಲ್ಲವೂ ಇತ್ಯರ್ಥವಾಗಿ ಅವರು ಜೈಲು ಸೇರಬೇಕು ಎಂದು ನಾನ್ಸಿ ಹೇಳಿದರು.

'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್, "ನ್ಯಾನ್ಸಿ ಓರ್ವ ಅಶ್ಲೀಲ, ದುರಹಂಕಾರದ ವ್ಯಕ್ತಿ. ಆಕೆಯನ್ನು ಪ್ರತಿಭಾನ್ವಿತೆ ಎಂದು ನಾನು ಎಂದೂ ತಿಳಿದಿಲ್ಲ. ಆಕೆಗೆ 'ಡೀಲ್' ಮಾಡುವುದಕ್ಕೆ ಬರುವುದಿಲ್ಲ" ಎಂದಿದ್ದಾರೆ.

English summary
US house speaker Nansy Pelosi told, She wants US president Donald Trump to be prisoned. She also told, she doesn't want to see Trump again as president in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X