ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ 1 ಲಕ್ಷ ರೂಪಾಯಿ, ಶಿಕ್ಷಕರಿಗೂ ಸಹಾಯ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆ

|
Google Oneindia Kannada News

ಕೊರೊನಾ.. ಕೊರೊನಾ.. ಕೊರೊನಾ.. ಹೀಗೆ ಬರೋಬ್ಬರಿ 1 ವರ್ಷದಿಂದ ಇಡೀ ಜಗತ್ತು ಕೊರೊನಾ ಜಪ ಮಾಡುತ್ತಿದೆ. ಅದರಲ್ಲೂ ಅಮೆರಿಕದ ಜನರ ಕಿವಿಗೆ ಕೊರೊನಾ ಎಂಬ ಪದ ಬಿದ್ದರೆ ಸಾಕು ಗಾಬರಿಪಡುತ್ತಾರೆ. ಊಹೆಗೂ ನಿಲುಕದಷ್ಟು ಅಮೆರಿಕನ್ನರು ದಿಢೀರನೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹೀಗೆ ಕೊರೊನಾ ಕಂಟಕದಿಂದ ಪಾರಾಗಲು ಅಮೆರಿಕ ಸರ್ಕಾರ ಬೃಹತ್ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಸುಮಾರು 1.9 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ ಘೋಷಿಸಿದೆ.

ಬೈಡನ್ ಸರ್ಕಾರದ ಮಹತ್ವಕಾಂಕ್ಷೆ ಪ್ಯಾಕೇಜ್‌ ಸಂಸತ್‌ನಲ್ಲಿ ಪಾಸ್ ಕೂಡ ಆಗಿದೆ. ಈ ಮೂಲಕ ಅಮೆರಿಕದಲ್ಲಿ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಸಿಗಲಿದೆ. ಅಮೆರಿಕನ್ ಕಾಂಗ್ರೆಸ್‌ನಲ್ಲಿ ಬೈಡನ್‌ರ ಮಹತ್ವಕಾಂಕ್ಷಿ ಯೋಜನೆಗೆ 220-211ರ ಅಂತರದಲ್ಲಿ ಜಯಸಿಕ್ಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ಯಾಕೇಜ್ ಮೊತ್ತ ಅಮೆರಿಕದ ಬಡವರ ಕೈಸೇರುವ ನಿರೀಕ್ಷೆ ಇದೆ. ಕೆಲಸ ಕಳೆದುಕೊಂಡು ನರಳಾಡುತ್ತಿರುವ ಅಮೆರಿಕದ ಬಡ ಕುಟುಂಬಗಳಿಗೆ ಸರ್ಕಾರದ ಸಹಾಯ ಒಂದಷ್ಟು ಚೇತರಿಕೆ ನೀಡುವ ನಿರೀಕ್ಷೆ ಇದೆ.

 ಅಮೆರಿಕ ಮುನ್ನಡೆಸುತ್ತಿರುವವರೇ ಭಾರತ ಮೂಲದ ಅಮೆರಿಕನ್ನರು ಎಂದ ಬೈಡನ್ ಅಮೆರಿಕ ಮುನ್ನಡೆಸುತ್ತಿರುವವರೇ ಭಾರತ ಮೂಲದ ಅಮೆರಿಕನ್ನರು ಎಂದ ಬೈಡನ್

ಶಿಕ್ಷಕರಿಗೂ ಸಿಗಲಿದೆ ಸಹಾಯ..!

ಶಿಕ್ಷಕರಿಗೂ ಸಿಗಲಿದೆ ಸಹಾಯ..!

ಬಡವರಿಗೆ 1400 ಡಾಲರ್ ಅಂದರೆ ಸುಮಾರು 1 ಲಕ್ಷ ರೂಪಾಯಿ ಕೊಡುವುದಷ್ಟೇ 1.9 ಟ್ರಿಲಿಯನ್ ಡಾಲರ್ ಪ್ಯಾಕೇಜ್‌ನ ಉದ್ದೇಶವಲ್ಲ. ಈ ಪ್ಯಾಕೇಜ್ ಮೊತ್ತದಲ್ಲಿ ಅಮೆರಿಕದ ಶಾಲೆಗಳ ಅಭಿವೃದ್ಧಿಗೂ ಗಮನ ನೀಡಲಾಗಿದೆ. ಲಾಕ್‌ಡೌನ್ ಹಿನ್ನೆಲೆ ಬಳಲಿರುವ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ 130 ಬಿಲಿಯನ್ ಡಾಲರ್ ಮೊತ್ತವನ್ನು ಬೈಡನ್ ಸರ್ಕಾರ ವಿನಿಯೋಗ ಮಾಡಲಿದೆ. ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕರಿಗೆ ಇದರಿಂದ ಒಂದಷ್ಟು ರಿಲೀಫ್ ಸಿಗಬಹುದು. ಹಾಗೇ ಶಾಲೆಗಳ ಪುನಾರಂಭಕ್ಕೆ ಸಿದ್ಧತೆ ಕೂಡ ಆರಂಭವಾಗಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಬಹುಮುಖ್ಯ ಯೋಜನೆಯಾಗಿದೆ.

ಕೊರೊನಾ ಕೂಪದಲ್ಲಿ ಅಮೆರಿಕ

ಕೊರೊನಾ ಕೂಪದಲ್ಲಿ ಅಮೆರಿಕ

ಬೈಡನ್ ಅಧಿಕಾರ ಸ್ವೀಕರಿಸಿ ಸುಮಾರು 2 ತಿಂಗಳಾಗಿದೆ ಅಷ್ಟೇ. ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕ ಅರ್ಥ ವ್ಯವಸ್ಥೆಗೆ ಮಾಡಿದ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿಲ್ಲ, ಮುಳ್ಳಿನ ಹಾದಿಯಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

10 ಲಕ್ಷ ರೂಪಾಯಿ ಕರೆಂಟ್ ಬಿಲ್, ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ ಖಾಲಿ..!10 ಲಕ್ಷ ರೂಪಾಯಿ ಕರೆಂಟ್ ಬಿಲ್, ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ ಖಾಲಿ..!

3 ಕೋಟಿ ಕೊರೊನಾ ಸೋಂಕಿತರು..!

3 ಕೋಟಿ ಕೊರೊನಾ ಸೋಂಕಿತರು..!

ಅಮೆರಿಕದ ಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಿದೆ. ಜಗತ್ತಿನಾದ್ಯಂತ 11 ಕೋಟಿ 87 ಲಕ್ಷ ಸೋಂಕಿತರು ಪತ್ತೆಯಾಗಿದ್ರೆ, ಕೇವಲ ಅಮೆರಿಕದಲ್ಲೇ ಈ ಸಂಖ್ಯೆ 3 ಕೋಟಿಗೆ ಸಮೀಪದಲ್ಲಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಜೊತೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಭಯ ಹುಟ್ಟಿಸುತ್ತಿದೆ. ಸುಮಾರು 86 ಲಕ್ಷ ಆಕ್ಟಿವ್ ಕೇಸ್‌ಗಳು ಅಮೆರಿಕದ ಆಸ್ಪತ್ರೆಗಳನ್ನ ತುಂಬುವಂತೆ ಮಾಡಿದೆ. ಇಷ್ಟೇ ಆಗಿದ್ದರೆ ಪರಿಸ್ಥಿತಿ ನಿಭಾಯಿಸಬಹುದಿತ್ತೋ ಏನೋ, ಆದರೆ ಈವರೆಗೂ 5 ಲಕ್ಷ 42 ಸಾವಿರ ಅಮೆರಿಕನ್ನರು ಡೆಡ್ಲಿ ಕೊರೊನಾಗೆ ಉಸಿರು ಚೆಲ್ಲಿದ್ದಾರೆ. ಇದು ಪರಿಸ್ಥಿತಿಯ ಭಯಾನಕತೆಯನ್ನು ಬಿಡಿಸಿಡುತ್ತಿದೆ.

ನಂ. 2 ಆಗತ್ತಾ ಅಮೆರಿಕ..?

ನಂ. 2 ಆಗತ್ತಾ ಅಮೆರಿಕ..?

ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಅಮೆರಿಕದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿರುವುದು ಖಚಿತವಾಗುತ್ತಿದೆ. ಹೀಗಾಗಿ ಅಮೆರಿಕದ ಪರಮ ಶತ್ರು ಚೀನಾ ಅಮೆರಿಕದ ನಂಬರ್ 1 ಸ್ಥಾನವನ್ನ ಆಕ್ರಮಿಸಲು ತುದಿಗಾಗಲಲ್ಲಿ ನಿಂತಿದೆ. ಇದು ಕೂಡ ಅಮೆರಿಕದ ನಾಯಕರನ್ನ ಹಾಗೂ ಉದ್ಯಮಿಗಳನ್ನ ಕಂಗೆಡಿಸಿದೆ. ಹಾಗೇ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಗತ್ತು ಆರ್ಥಿಕ ಹಿಂಜರಿತ ಕಾಣುತ್ತಿದ್ದರೆ ಚೀನಾದ ಜಿಡಿಪಿ ಮಾತ್ರ ಗಮನಾರ್ಹ ಬೆಳವಣಿಗೆ ಕಾಣುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಅಮೆರಿಕದ ನಂಬರ್ 1 ಸ್ಥಾನ ಅಲುಗಾಡಿಸುವ ಜೊತೆಗೆ, ಜಗತ್ತಿನಲ್ಲಿ ಹೊಸ ಆರ್ಥಿಕ ಶಕ್ತಿಯ ಉಗಮಕ್ಕೂ ಕಾರಣವಾಗುತ್ತಿದೆ.

ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್

English summary
American House of Representatives passed 1.9 trillion dollar package bill, which will be helpful for American economy in pandemic situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X