ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಭೀಕರ ಬರಗಾಲ! ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ!

|
Google Oneindia Kannada News

ಪ್ರಕೃತಿಯ ಮೇಲೆ ದೌರ್ಜನ್ಯ ಎಸಗಿದ್ದರ ಫಲವನ್ನು ಮನುಷ್ಯ ನಿಧಾನವಾಗಿ ಅನುಭವಿಸುತ್ತಿದ್ದಾನೆ. ಅದರಲ್ಲೂ ಅಮೆರಿಕ ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಹೋಗಿದೆ. ಇನ್ನು ಈಗ ತಾನೆ ಕೊರೊನಾ ಕೊಟ್ಟಿರುವ ಏಟಿನಿಂದ ಹೊರಬರುತ್ತಿರುವ ಅಮೆರಿಕನ್ನರಿಗೆ, ಮಳೆಯಾಗದ ಪರಿಣಾಮ ಭೀಕರ ಬರಗಾಲ ಮತ್ತೊಂದು ಶಾಕ್ ನೀಡಿದೆ. ಕೊಲೊರಾಡೋ ನದಿಗೆ ಅಡ್ಡಲಾಗಿ ನೆವಾಡಾ ಮತ್ತು ಅರಿಜೋನ ಗಡಿಯಲ್ಲಿ ನಿರ್ಮಿಸಿರುವ ಹೂವರ್ ಡ್ಯಾಂನ ನೀರಿನ ಮಟ್ಟ ಭಾರಿ ಕುಸಿತ ಕಂಡಿದೆ.

ಡ್ಯಾಂ ನೀರು ಇಷ್ಟು ಕುಸಿತ ಕಂಡಿರುವುದು ಇದೇ ಮೊದಲು ಎನ್ನುತ್ತಾರೆ ಇಲ್ಲಿನ ತಜ್ಞರು. ಹೀಗೆ ಡ್ಯಾಂನಲ್ಲಿ ನೀರಿಗೆ ಬರ ಎದುರಾಗಿರುವ ಪರಿಣಾಮ ಸುಮಾರು 25 ಮಿಲಿಯನ್ ಅಂದ್ರೆ 2 ಕೋಟಿ 50 ಲಕ್ಷ ಅಮೆರಿಕನ್ನರಿಗೆ ಭಾರಿ ತೊಂದರೆ ಆಗಲಿದೆ. ಈ ತಿಂಗಳ ಆರಂಭದಲ್ಲೇ ಅಮೆರಿಕ ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಆದರೆ ಮತ್ತೆ 10-20 ದಿನದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.

ಕೊರೊನಾ ಮುಗೀತು, ಬರಗಾಲ ಶುರುವಾಯ್ತು! ಜನರಿಗೆ ಜೀವಜಲ ಸಿಗಲ್ವಾ?ಕೊರೊನಾ ಮುಗೀತು, ಬರಗಾಲ ಶುರುವಾಯ್ತು! ಜನರಿಗೆ ಜೀವಜಲ ಸಿಗಲ್ವಾ?

ಈಗ ಇರುವ ನೀರು ಕೂಡ ಸದ್ಯದಲ್ಲೇ ಖಾಲಿಯಾಗುವ ಆತಂಕ ಎದುರಾಗಿದೆ. ಇಷ್ಟುದಿನ ಮನಸೋಯಿಚ್ಛೆ ನೀರು ಖರ್ಚು ಮಾಡಿದ್ದವರು, ಈಗ ಹನಿ ಹನಿ ನೀರಿಗೂ ಲೆಕ್ಕ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಕೃಷಿಗೆ ನೀರು ಬೀಡುತ್ತಿಲ್ಲ..!

ಕೃಷಿಗೆ ನೀರು ಬೀಡುತ್ತಿಲ್ಲ..!

ಈಗಿನ ಪರಿಸ್ಥಿತಿ ನೋಡಿದ್ರೆ ಮುಂದೆ ಅಮೆರಿಕದ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿಗೂ ಬರ ಎದುರಾಗಿ, ಜನರು ನರಳುವ ಭೀತಿ ಕಾಡುತ್ತಿದೆ. ಹೀಗಾಗಿ ಕೃಷಿಗೆ ಕೊಡುತ್ತಿದ್ದ ನೀರು ನಿಲ್ಲಿಸಿದೆ ಸರ್ಕಾರ. ಇದರ ಪರಿಣಾಮ ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಅಮೆರಿಕ ರೈತರ ಪರಿಸ್ಥಿತಿ. ಸದ್ಯದಲ್ಲೇ ಮಳೆಯಾಗುವ ಲಕ್ಷಣಗಳು ಕೂಡ ಇಲ್ಲ. ಹೀಗಾಗಿ ನೀರಿನ ಕೊರತೆ ಮತ್ತಷ್ಟು ಹೆಚ್ಚಲಿದೆ, ಸಮಸ್ಯೆ ಬಗೆಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂಬ ಎಚ್ಚರಿಕೆ ನೀಡಲಾಗಿದೆ. ಹೂವರ್ ಡ್ಯಾಂ ನೀರಿನ ಮಟ್ಟ ಬರೋಬ್ಬರಿ 35 ಅಡಿಗೆ ಕುಸಿತ ಕಂಡಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಯುತ್ತಾ ಸಾಗಿದೆ.

1400 ವರ್ಷದಲ್ಲೇ ಭೀಕರ ಬರಗಾಲ

1400 ವರ್ಷದಲ್ಲೇ ಭೀಕರ ಬರಗಾಲ

ಕಳೆದ 20 ವರ್ಷಗಳಿಂದಲೂ ಕ್ಯಾಲಿಫೋರ್ನಿಯಾದ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಇಳಿಕೆ ಕಾಣುತ್ತಿದೆ. ಆದರೆ ಈ ಬಾರಿ 1400 ವರ್ಷದಲ್ಲೇ ಕಾಣದಷ್ಟು ಬರಗಾಲ ಎದುರಾಗಿದೆ. ಕೃಷಿ ಭೂಮಿ ಒಣಗಿ ನಿಂತಿದ್ದರೂ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ಇದನ್ನ ಬಿಡಿ ಮುಂದಿನ ದಿನಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಜನರಿಗೆ ಕುಡಿಯುವ ನೀರು ಸಿಗೋದೆ ಅನುಮಾನವಾಗಿದೆ. ಹೀಗಾಗಿ ಬೈಡನ್ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಈಗ ನಿರ್ಲಕ್ಷ್ಯ ಮಾಡಿದ್ರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ.

ಕೃಷಿಕರ ಬದುಕು ಬೀದಿಗೆ

ಕೃಷಿಕರ ಬದುಕು ಬೀದಿಗೆ

ನೀವು ಕೇಳಿರಬಹುದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬೆಳೆಯುವ ಬಾದಾಮಿಗೆ ಭಾರಿ ಡಿಮ್ಯಾಂಡ್ ಇದೆ. ಈ ಬಾದಾಮಿ ಬೆಳೆಗೆ ತನ್ನದೇ ಮಾನ್ಯತೆ ಹಾಗೂ ವೈಶಿಷ್ಟ್ಯತೆ ಕೂಡ ಇದೆ. ಅದರಲ್ಲೂ ಕ್ಯಾಲಿಫೋರ್ನಿಯಾ ರಾಜ್ಯದ ಬಾದಾಮಿ ಬೆಳೆಗಾರರು, ತಮ್ಮ ತಮ್ಮಲ್ಲಿ ಸಾಕಷ್ಟು ನಿಯಮ ಹಾಕಿಕೊಂಡಿದ್ದಾರೆ. ಬಾದಾಮಿ ಬೆಳೆಯಲು ಇದೇ ನೀರನ್ನು ಬಳಸಬೇಕು, ಕುಡಿಯುವ ನೀರನ್ನೇ ಉಪಯೋಗಿಸಬೇಕು. ಗುಣಮಟ್ಟ ಕೆಡದಂತೆ ಕಾಪಾಡಿಕೊಂಡು ಬರಬೇಕು. ಹೀಗೆ ಹಲವು ನಿಯಮ ಹಾಕಿಕೊಂಡು ಉತ್ತಮವಾಗಿ 'ಬಾದಾಮಿ' ಬೆಳೆಯುತ್ತಾರೆ. ಹೀಗಾಗಿಯೇ ಕ್ಯಾಲಿಫೋರ್ನಿಯಾ ಬಾದಾಮಿಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಇದೆ. ಆದ್ರೆ ಈ ಬಾರಿ ಎದುರಾದ ಬರಗಾಲ ಸುಮಾರು ಅರ್ಧಲಕ್ಷ ಕೋಟಿ ಅಂದರೆ 50 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಉಂಟುಮಾಡಿದೆ.

ಕುಡಿವ ನೀರಿಗೂ ಪರದಾಟ

ಕುಡಿವ ನೀರಿಗೂ ಪರದಾಟ

ಅಮೆರಿಕ ಹೆಸರಿಗೆ ಮಾತ್ರ ಶ್ರೀಮಂತ ರಾಷ್ಟ್ರ, ಆದರೆ ದೊಡ್ಡ ದೊಡ್ಡ ನಗರಗಳನ್ನ ಬಿಟ್ಟು ಸಣ್ಣಪುಟ್ಟ ಪ್ರದೇಶಗಳ ಪಾಡು ಹೇಳತೀರದು. ಕುಡಿಯುವ ನೀರಿನ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಜನವಸತಿ ಪ್ರದೇಶಕ್ಕೆ ಸಪ್ಲೈ ಆಗುವ ನೀರಲ್ಲಿ ಹಾವು, ಕಪ್ಪೆ ಹೀಗೆ ನಾನಾ ಅತಿಥಿಗಳ ಹೆಣ ಮನೆ ಕೊಳಾಯಿ ಮೂಲಕ ಬಂದು ಬೀಳುತ್ತಿದೆ. ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಿದುಳು ತಿನ್ನುವ ಅಮೀಬಾ ಸೇರಿದಂತೆ ಹಲವು ಕಂಟಕಗಳು ಅಮೆರಿಕದ ನಿವಾಸಿಗಳನ್ನ ಕಾಡುತ್ತಿದೆ. ಹಾಳಾಗಿ ಹೋಗಲಿ ಅದೇ ಕೊಳಕು ನೀರನ್ನ ಬಳಸೋಣ ಅಂದ್ರೂ, ಈಗ ಅದಕ್ಕೂ ಕಲ್ಲು ಹಾಕಿದ್ದಾನೆ ಮಳೆರಾಯ.

ರಸ್ತೆ, ನೀರಿಗೆ 1.7 ಟ್ರಿಲಿಯನ್..!

ರಸ್ತೆ, ನೀರಿಗೆ 1.7 ಟ್ರಿಲಿಯನ್..!

ಮೂಲ ಸೌಕರ್ಯ ಅಂದ್ರೆ ಮನುಷ್ಯ ಬದುಕಲು ಅತ್ಯಗತ್ಯವಾಗಿರುವ ಕುಡಿಯುವ ನೀರು, ಉತ್ತಮ ರಸ್ತೆಗಳ ನಿರ್ಮಾಣ ಹೀಗೆ ಹಲವು ವಿಭಾಗಗಳಿಗೆ ಬಜೆಟ್‌ನಲ್ಲಿ ಹೆಚ್ಚು ಹಣ ನೀಡಲು ಜೋ ಬೈಡನ್ ನಿರ್ಧರಿಸಿದ್ದಾರೆ. ಬೈಡನ್ ಲೆಕ್ಕಾಚಾರದ ಪ್ರಕಾರ ಮೂಲ ಸೌಕರ್ಯ ಕ್ಷೇತ್ರಕ್ಕೆ 1.7 ಟ್ರಿಲಿಯನ್ ಡಾಲರ್‌ಗೆ ಫಿಕ್ಸ್ ಆಗಿದೆ. ಈ ಮೂಲಕ ಇಡೀ ಅಮೆರಿಕದ ಇತಿಹಾಸದಲ್ಲೇ ಮೂಲ ಸೌಕರ್ಯ ಮತ್ತೊಮ್ಮೆ ಅತ್ಯುನ್ನತ ಮಟ್ಟಕ್ಕೆ ಏರಿಸೋಕೆ ತಯಾರಿ ನಡೆಸಿದ್ದಾರೆ ಬೈಡನ್. ಆದರೆ ಇದೀಗ ಬರಗಾಲ ಎದುರಾಗಿದ್ದು, ಇದನ್ನೆಲ್ಲಾ ಸರಿಯಾಗಿ ನಿಭಾಯಿಸಿ, ಅಮೆರಿಕನ್ನರ ದಾಹ ತೀರಿಸಬೇಕಾದ ಜವಾಬ್ದಾರಿ ಬೈಡನ್ ಮೇಲಿದೆ.

English summary
United States Hoover Dam Reservoir water now fallen to a record low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X