ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಪದಗ್ರಹಣಕ್ಕೂ ಮುನ್ನ ಭದ್ರತಾ ಅಧಿಕಾರಿ ರಾಜೀನಾಮೆ

|
Google Oneindia Kannada News

ವಾಷಿಂಗ್ಟನ್, ಜನವರಿ 12: ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಹಂಗಾಮಿ ಕಾರ್ಯದರ್ಶಿ ಚಡ್ ವೋಲ್ಫ್ ರಾಜೀನಾಮೆ ನೀಡಿದ್ದಾರೆ. ಇದರಿಂದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಮುಂದಿನ ವಾರ ಪದಗ್ರಹಣ ನಡೆಸುವ ಸಂದರ್ಭದಲ್ಲಿ ಹಿಂಸಾಚಾರಗಳು ಹೆಚ್ಚುವ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಜನವರಿ 20ರಂದು ನಡೆಯುವ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭದ್ರತೆ ಉಸ್ತುವಾರಿಯನ್ನು ವೋಲ್ಫ್ ಹೊತ್ತಿದ್ದರು. ಈಗ ಅವರು ಮಧ್ಯರಾತ್ರಿ ಅಧಿಕಾರ ತ್ಯಜಿಸುತ್ತಿರುವುದು ಗೊಂದಲ ಮೂಡಿಸಿದೆ. ಕಳೆದ ವಾರ ಅಮೆರಿಕದ ಸಂಸತ್ ಕಟ್ಟಡ ಕ್ಯಾಪಿಟಲ್ ಹಿಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಘಟನೆ ಬಳಿಕ ರಾಜೀನಾಮೆ ನೀಡುತ್ತಿರುವ ಮೂರನೇ ಅಧಿಕಾರಿಯಾಗಿದ್ದಾರೆ.

ಡೊನಾಲ್ಡ್‌ ಟ್ರಂಪ್ ಅಧಿಕಾರ ಈಗಾಗಲೇ ಮುಕ್ತಾಯ? ರಾಜೀನಾಮೆ ನೀಡಿರುವ ಸಾಧ್ಯತೆ!ಡೊನಾಲ್ಡ್‌ ಟ್ರಂಪ್ ಅಧಿಕಾರ ಈಗಾಗಲೇ ಮುಕ್ತಾಯ? ರಾಜೀನಾಮೆ ನೀಡಿರುವ ಸಾಧ್ಯತೆ!

ಡೊನಾಲ್ಡ್ ಟ್ರಂಪ್ ಅವರಗೆ ನಿಕಟರಾಗಿದ್ದ ವೋಲ್ಫ್, ಸಂಸತ್ ಕಟ್ಟಡದಲ್ಲಿ ನಡೆದ ಹಿಂಸಾಕೃತ್ಯವು ದುರಂತ ಮತ್ತು ಬೇಸರ ತರುವಂತಹದ್ದು ಎಂದು ಟೀಕಿಸಿದ್ದರು. ಆದರೆ ಅವರ ರಾಜೀನಾಮೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.

 US Homeland Security Chief Chad Wolf Resign Ahead Of Joe Biden Inauguration

ಇಬ್ಬರ ಅಮಾನತು:

ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಒಬ್ಬರನ್ನು ಬಂಧಿಸಲಾಗಿದೆ. ಈ ಮೂವರು ಪೊಲೀಸರು ಸಂಸತ್ ಕಟ್ಟಡದ ಮೇಲಿನ ದಾಳಿಯನ್ನು ತಡೆಯುವ ಬದಲು ಟ್ರಂಪ್ ಬೆಂಬಲಿಗರೊಂದಿಗೆ ಮಾತನಾಡಿ ಅವರಿಗೆ ಸಹಕಾರ ನೀಡಿದ್ದರು ಎಂದು ಆರೋಪಿಸಲಾಗಿದೆ.

ಕ್ಯಾಪಿಟಲ್ ಪೊಲೀಸ್ ಅಧಿಕಾರಿಗಳು ಗಲಭೆಕೋರ ಗುಂಪಿನವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ದರು. ಜತೆಗೆ ಗಲಭೆಕೋರರು ಅಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸಲು ಸಹಕಾರ ನೀಡಿದ್ದರು. ಇದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

English summary
The acting secretary of US Homeland Security Chad Wolf resigned ahead of President-elect Joe Biden's inauguration ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X