ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ಕೋಟಿ ಕೊರೊನಾ ಲಸಿಕೆಯನ್ನು ಮುಂಚಿತವಾಗಿ ಆರ್ಡರ್ ಮಾಡಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 13: ಅಮೆರಿಕವು 30 ಕೋಟಿ ಜನಸಂಖ್ಯೆಗೆ ಅನುಗುಣವಾಗಿ 80 ಕೋಟಿ ಕೊರೊನಾ ಲಸಿಕೆಯನ್ನು ಆರ್ಡರ್ ಮಾಡಿದೆ.

Recommended Video

MLA Akhanda Srinivasamurtyಯನ್ನು ತರಾಟೆಗೆ ತೆಗೆದುಕೊಂಡ ಜನ | Oneindia Kannada

ಅಮೆರಿಕವು ಮಾಡೆರ್ನಾ ಜೊತೆ 1.525 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ. ಇದು ಅಮೆರಿಕ ಮೂಲದ ಬಯೋಟೆಕ್ ಕಂಪನಿಯಾಗಿದೆ. ಇದೀಗ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ 10 ಕೋಟಿಯಷ್ಟಿದೆ.

ಭಾರತದಲ್ಲಿ ಕೊರೊನಾ ಲಸಿಕೆ ಪೂರೈಕೆ ಹೇಗೆ?: ಇಲ್ಲಿದೆ ಮಾಹಿತಿಭಾರತದಲ್ಲಿ ಕೊರೊನಾ ಲಸಿಕೆ ಪೂರೈಕೆ ಹೇಗೆ?: ಇಲ್ಲಿದೆ ಮಾಹಿತಿ

ಅಮೆರಿಕ ಸರ್ಕಾರವು ಲಸಿಕೆಯನ್ನು ತರಿಸಿಕೊಳ್ಳಲು ಮುಂಚಿತವಾಗಿಯೇ ಆರ್ಡರ್ ಮಾಡಿದೆ. ಒಟ್ಟು ಐದು ಕಂಪನಿಗಳ ಜೊತೆಗೆ ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಮಾಡೆರ್ನಾ ಜೊತೆ ಮಾಡಿಕೊಳ್ಳುತ್ತಿರುವ ಎರಡನೇ ಒಪ್ಪಂದ ಇದಾಗಿದೆ.

US Has Pre-Ordered 800 Million Corona Vaccine Doses

ಆದರೆ ಯಾವಾಗ ಆ ಲಸಿಕೆ ಅಮೆರಿಕಕ್ಕೆ ಲಭ್ಯವಾಗಲಿದೆ ಎನ್ನುವ ಕುರಿತು ಮಾಹಿತಿ ಇಲ್ಲ. ಒಪ್ಪಂದದಲ್ಲಿ ಹೆಚ್ಚುವರಿಯಾಗಿ 400 ಮಿಲಿಯನ್ ಅಂದರೆ 40 ಕೋಟಿ ಡೋಸ್‌ಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ಮಾಡೆರ್ನಾ ಲಸಿಕೆಯು ಅಂತಿಮ ಹಂತದ ಪ್ರಯೋಗದಲ್ಲಿದೆ 2021ರಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಜನವರಿ 2021ರೊಳಗೆ 30 ಕೋಟಿ ಲಸಿಕೆಗಳು ಬೇಕು ಎಂದು ಬೇಡಿಕೆ ಇಟ್ಟಿದೆ.

300 ಮಿಲಿಯನ್ ಅಂದರೆ 30 ಕೋಟಿ ಲಸಿಕೆಯನ್ನು ಒದಗಿಸುವಂತೆ ಆಕ್ಸ್‌ಫರ್ಡ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 100 ಮಿಲಿಯನ್ ಲಸಿಕೆ ನೀಡುವಂತೆ ನೋವಾವ್ಯಾಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಜಾನ್ಸನ್ ಆಂಡ್ ಜಾನ್ಸನ್ ಜೊತೆ 100 ಮಿಲಿಯನ್ ಡೋಸ್, ಪಿಫೈಜರ್ ಆಂಡ್ ಬಯೋಎನ್‌ಟೆಕ್ ಜೊತೆಯೂ 100 ಮಿಲಿಯನ್ ಡೋಸ್ ಒಪ್ಪಂದ ಮಾಡಿಕೊಂಡಿದೆ.

English summary
The United States government has entered into a US$ 1.525 billion deal with Moderna, a US-based biotech company, for securing the supply of 100 million doses of the novel Coronavirus vaccine that the company is developing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X