ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯಿಗೆ ಬಿತ್ತು ಲಡ್ಡು! ಅಮೆರಿಕ ಕನಸು ಕಂಡವರಿಗೆ 'ಲಾಟರಿ ಭಾಗ್ಯ'!

|
Google Oneindia Kannada News

ಟ್ರಂಪ್ ಮನೆಗೆ ಹೋಗಿ ಆಗಿದೆ, ಬೈಡನ್ ಸರ್ಕಾರ ಅಧಿಕಾರಕ್ಕೆ ಬಂದಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಜೋ ಬೈಡನ್ ಹಲವು ಸಿಹಿ ಸುದ್ದಿಗಳನ್ನ ನೀಡುತ್ತಿದ್ದು, ಇದೀಗ H1B ವೀಸಾ ವಿಚಾರದಲ್ಲಿ ಬಹುದೊಡ್ಡ ತೀರ್ಮಾನ ಕೈಗೊಂಡಿದ್ದಾರೆ. ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ H1B ವೀಸಾ ಬಯಸಿದ್ದವರಿಗೆ ಸಿಹಿ ಸುದ್ದಿ ನೀಡಿದೆ. ಲಾಟರಿ ಮೂಲಕ 85 ಸಾವಿರ H1B ವೀಸಾ ಹಂಚಿಕೆಗೆ ಮುಂದಾಗಿದೆ.

ಅಗತ್ಯಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಲಾಟರಿ ಮೊರೆ ಹೋಗಿರುವ ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ, ಸಾವಿರಾರು ಜನರ ಕನಸು ನನಸಾಗಿಸುತ್ತಿದೆ. ಟ್ರಂಪ್ ಸರ್ಕಾರ ಈ ವಿಚಾರದಲ್ಲಿ ಸಾಕಷ್ಟು ಎಡವಟ್ಟು ಮಾಡಿಕೊಂಡಿತ್ತು.

ಟ್ರಂಪ್ ಕಾಲದ ಗ್ರೀನ್ ಕಾರ್ಡ್ ನಿಷೇಧ ಹಿಂಪಡೆದ ಬೈಡನ್ಟ್ರಂಪ್ ಕಾಲದ ಗ್ರೀನ್ ಕಾರ್ಡ್ ನಿಷೇಧ ಹಿಂಪಡೆದ ಬೈಡನ್

ಟ್ರಂಪ್ ಕೈಗೊಂಡ ನಿರ್ಧಾರದಿಂದ ಭಾರತ ಮೂಲದ ಅಮೆರಿಕನ್ನರು ಸಿಕ್ಕಾಪಟ್ಟೆ ತೊಂದರೆ ಅನುಭವಿಸಿದ್ದರು. ಟ್ರಂಪ್ ನಿರ್ಧಾರ ಜಗತ್ತಿನೆದುರು ಅಮೆರಿಕವನ್ನು ವಿಲನ್ ಮಾಡಿತ್ತು. ಆದರೆ ಜೋ ಬೈಡನ್ ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ H1B ವೀಸಾ ಹಂಚಿಕೆ ಬಗ್ಗೆ ಭರವಸೆ ನೀಡಿದ್ದರು. ಈಗ ಅದನ್ನ ಜೋ ಬೈಡನ್ ಈಡೇರಿಸಿದ್ದಾರೆ.

ಅಮೆರಿಕ ಕನಸು ಇದೀಗ ನನಸು..!

ಅಮೆರಿಕ ಕನಸು ಇದೀಗ ನನಸು..!

ಟ್ರಂಪ್ ಆಡಳಿತದಲ್ಲಿ ಕೋಟಿ ಕೋಟಿ ವಲಸಿಗರಿಗೆ ಅಮೆರಿಕ ಎಂಬ ದೈತ್ಯ ದೇಶ ಪ್ರವೇಶ ಕನಸು ಮರೀಚಿಕೆ ಆಗಿತ್ತು. ಆದರೆ ಈಗ ಅಂಧಕಾರ ತೊಲಗಲಿದ್ದು, ಅಮೆರಿಕ ಎಂಬ ಪವರ್‌ಫುಲ್ ದೇಶಕ್ಕೆ ವಲಸೆ ಹೋಗಲು ಇಚ್ಛಿಸಿರುವ ಟ್ಯಾಲೆಂಟ್‌ಗಳಿಗೆ ಅವಕಾಶ ಕಲ್ಪಿಸಲಿದ್ದಾರೆ. ಟ್ರಂಪ್ ಕೈಗೊಂಡ ಪ್ರಮುಖ 6 ವಲಸೆ ನೀತಿಗಳಲ್ಲಿ ಬೈಡನ್ ಬದಲಾವಣೆ ತಂದಿದ್ದಾರೆ. ಇದರಿಂದ ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ ಹಲವು ಉದ್ಯೋಗಿಗಳಿಗೆ ಇದು ಸದಾವಕಾಶ. H1B ವೀಸಾ ಪಡೆಯುವವರಲ್ಲಿ ಹೆಚ್ಚಿನವರು ಭಾರತ ಮೂಲದವರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಟ್ಯಾಲೆಂಟ್ಸ್ ಬಾಯಿಗೆ ಲಡ್ಡು..!

ಟ್ಯಾಲೆಂಟ್ಸ್ ಬಾಯಿಗೆ ಲಡ್ಡು..!

ಹೌದು ಹತ್ತಾರು ವರ್ಷಗಳಿಂದಲೂ ಅಮೆರಿಕ ಜಗತ್ತಿನ ಕೌಶಲ್ಯಯುಕ್ತ ಕೆಲಸಗಾರರಿಗೆ ಸ್ವರ್ಗವಿದ್ದಂತೆ. ಅಲ್ಲಿನ ಸಂಬಳ ಹಾಗೂ ಸವಲತ್ತು ಬಡ ರಾಷ್ಟ್ರಗಳ ಜನರಿಗೆ ಅಗತ್ಯವಾಗಿತ್ತು. ಆದರೆ ಸ್ಥಳೀಯರಿಗೆ ಮಾತ್ರ ಉದ್ಯೋಗ ಎಂಬ ನಿಲುವಿನಿಂದ ಟ್ರಂಪ್ ಈ ರೀತಿಯ ಟ್ಯಾಲೆಂಟ್ಸ್‌ಗೂ ನಿಷೇಧ ಹೇರಿದ್ದರು. ಪರಿಣಾಮ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದರು. ಇನ್ನೂ ಹಲವರು ಅಮೆರಿಕದ ಆಸೆ ಬಿಟ್ಟುಬಿಟ್ಟರು. ಆದರೆ ಬೈಡನ್ ಈ ನೀತಿಯನ್ನು ಹಿಂಪಡೆದು, H1B ವೀಸಾ ವಿಚಾರದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದಾರೆ.

‘ಗ್ರೀನ್‌ ಕಾರ್ಡ್‌’ ಜಾಕ್‌ಪಾಟ್..!

‘ಗ್ರೀನ್‌ ಕಾರ್ಡ್‌’ ಜಾಕ್‌ಪಾಟ್..!

ಹಾಗೇ ನೂತನ ಪೌರತ್ವ ನೀತಿಯಲ್ಲಿ ಕುಟುಂಬ ಆಧಾರಿತ ವಲಸೆ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ ಬೈಡನ್. ಟ್ರಂಪ್‌ ಆಡಳಿತದಲ್ಲಿ 'ಗ್ರೀನ್‌ ಕಾರ್ಡ್‌' ಹೊಂದಿರುವ ಜನರಿಗೂ ಅಮೆರಿಕದ ಪೌರತ್ವ ನೀಡುವ ಕಾರ್ಯ ನಿಂತುಹೋಗಿತ್ತು. ಆದರೆ ಅದನ್ನು ಬೈಡನ್ ಮತ್ತೆ ಆರಂಭಿಸಿದ್ದಾರೆ. ಗ್ರೀನ್‌ ಕಾರ್ಡ್‌ ಇರುವವರಿಗೆ ಉದ್ಯೋಗ ಆಧಾರಿತ ವೀಸಾ ನೀಡಲಾಗುತ್ತಿದ್ದು, ಇವರು ಶಾಶ್ವತ ಪೌರತ್ವ ಪಡೆಯಬಹುದು. ಇದರಲ್ಲೂ ಕೂಡ ಭಾರತ ಮೂಲದವರೇ ಮೇಲುಗೈ ಸಾಧಿಸಿದ್ದಾರೆ. ಹಾಗೇ ಏಷ್ಯಾ ಮೂಲದ ಕೋಟ್ಯಂತರ ಜನರು ಅಮೆರಿಕದಲ್ಲಿ ವಾಸ ಮಾಡುತ್ತಿದ್ದಾರೆ.

‘ಗೋಡೆ’ ಮುರಿದ ಜೋ ಬೈಡನ್..!

‘ಗೋಡೆ’ ಮುರಿದ ಜೋ ಬೈಡನ್..!

ಅಮೆರಿಕದ ನೆರೆ ರಾಷ್ಟ್ರ ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ವಿವಾದಾತ್ಮಕ ಯೋಜನೆಯೊಂದನ್ನ ಕೈಗೊಂಡಿದ್ದರು. ಅಕ್ರಮ ವಲಸಿಗರನ್ನು ತಡೆಯುವ ನೆಪದಲ್ಲಿ ಗಡಿಯಲ್ಲಿ ಗೋಡೆ ಕಟ್ಟಲು ಮುಂದಾಗಿದ್ದರು. ಗೋಡೆ ವಿಷಯ ಅದೆಷ್ಟು ನಗೆಪಾಟಲಿಗೆ ಈಡಾಗಿತ್ತು ಎಂದರೆ, ಇಷ್ಟು ಅಗಾಧ ಗಾತ್ರದ ಗೋಡೆಗಳನ್ನೂ ಅಕ್ರಮ ವಲಸಿಗರು ದಾಟಿ ಬಂದಿದ್ದರು. ಅಷ್ಟೇ ಅಲ್ಲ ಕಾಮಗಾರಿ ಕೂಡ ಕಳಪೆಯಾಗಿದೆ ಎಂಬುದು ಹಲವು ಸಂದರ್ಭದಲ್ಲಿ ಪ್ರೂವ್ ಆಗಿತ್ತು. ಸಾವಿರಾರು ಕೋಟಿ ಡಾಲರ್ ಸುರಿದು ಯೋಜನೆ ಕೈಗೊಂಡಿದ್ದರೂ, ಅದು ಫ್ಲಾಪ್ ಆಗುವ ಜೊತೆಗೆ ಅಮೆರಿಕ ಮತ್ತು ಮೆಕ್ಸಿಕೋ ಸಂಬಂಧಕ್ಕೆ ಹುಳಿ ಹಿಂಡಿತ್ತು. ವಿವಾದಾತ್ಮಕ ಯೋಜನೆ ಬಗ್ಗೆ ಬೈಡನ್ ಈ ಹಿಂದೆ ಹಲವು ಸಂದರ್ಭಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಕ್ಕೆ ಬಂದ ಬಳಿಕ ಬೈಡನ್ ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ.

English summary
US Citizenship and Immigration Services announced that it has completed the lottery and had selected H1B registrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X