ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ವಲಸಿಗರಿಗೆ ಸಂಕಷ್ಟ; ಕೋರ್ಟ್ ತೀರ್ಪಿಗೆ ತಲೆಬಾಗಿದ ಬೈಡನ್ ಸರಕಾರ

|
Google Oneindia Kannada News

ವಾಷಿಂಗ್ಟನ್, ಜೂನ್ 28: ಅಮೆರಿಕದಲ್ಲಿ ಸಾರ್ವಜನಿಕರಿಗೆ ಹಾನಿ ಮಾಡುವ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ವಲಸಿಗರನ್ನು ಮಾತ್ರ ದೇಶದಿಂದ ಹೊರಹಾಕಬೇಕೆಂದು ಇತ್ತೀಚೆಗೆ ತಾನು ಹೊರಡಿಸಿದ್ದ ನಿರ್ದೇಶನವನ್ನು ಬೈಡನ್ ಸರಕಾರ ಹಿಂಪಡೆದುಕೊಂಡಿದೆ.

ಟೆಕ್ಸಾಸ್‌ನ ನ್ಯಾಯಾಲಯವೊಂದು ಈ ನಿರ್ದೇಶನವನ್ನು ಅಮಾನ್ಯ ಮಾಡಿದ ಹಿನ್ನೆಲೆಯಲ್ಲಿ ಬೈಡನ್ ಸರಕಾರ ಈ ಕ್ರಮ ಕೈಗೊಂಡಿದೆ. ಇದರೊಂದಿಗೆ ಅಮೆರಿಕದಲ್ಲಿ ಎಲ್ಲಾ ಅಕ್ರಮ ವಲಸಿಗರನ್ನೂ ಹೊರಹಾಕುವ ಕಾರ್ಯ ನಡೆಯಲಿದೆ.

US: ಮಿಸೌರಿಯಲ್ಲಿ 243 ಪ್ರಯಾಣಿಕರಿದ್ದ ರೈಲು ಟ್ರಕ್‌ಗೆ ಡಿಕ್ಕಿ: 46 ಸಾವುUS: ಮಿಸೌರಿಯಲ್ಲಿ 243 ಪ್ರಯಾಣಿಕರಿದ್ದ ರೈಲು ಟ್ರಕ್‌ಗೆ ಡಿಕ್ಕಿ: 46 ಸಾವು

ನ್ಯಾಯಾಲಯದ ತೀರ್ಪನ್ನು ನಾವು ಒಪ್ಪದಿದ್ದರೂ ಅದರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿರುವ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ (ಅಮೆರಿಕ ಆಂತರಿಕ ವ್ಯವಹಾರಗಳ ಸಚಿವಾಲಯ), ತಾನು ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಹಾಕುವುದಾಗಿಯೂ ಸ್ಪಷ್ಟಪಡಿಸಿದೆ.

ಬೈಡನ್ ಸರಕಾರ ತನ್ನ ನಿರ್ದೇಶನವನ್ನು ವಾಪಸ್ ಪಡೆದುಕೊಂಡಿರುವುದು ಅಮೆರಿಕದ ವಲಸಿಗ ಸಮುದಾಯಗಳಿಗೆ ಚಳಿ ತರಿಸಿದೆ. ಅಕ್ರಮವಾಗಿ ನೆಲಸಿರುವವರ ಜೊತೆ ಇತರರೂ ಭಯದ ಸ್ಥಿತಿಯಲ್ಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

 ಏನಿದು ಪ್ರಕರಣ?

ಏನಿದು ಪ್ರಕರಣ?

ಹಿಂದೆ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ಎಲ್ಲಾ ವಲಸಿಗರನ್ನು ಗುರುತಿಸಿ ಹೊರಹಾಕಲು ಸರಕಾರ ನಿರ್ಧರಿಸಿತ್ತು. ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೇರೆ ನಡೆ ಇಟ್ಟಿತು. ರಾಷ್ಟ್ರೀಯ ಭದ್ರತೆಗೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವಾಗಿರುವ ವಲಸಿಗರು ಅಥವಾ ಇತ್ತೀಚೆಗೆ ಅಮೆರಿಕಕ್ಕೆ ಅಕ್ರಮವಾಗಿ ಬಂದಿರುವ ಜನರನ್ನು ಮಾತ್ರ ಗುರುತಿಸಿ ಹೊರಕಳುಹಿಸಬೇಕೆಂದು ನಿರ್ದೇಶನ ನೀಡಲಾಗಿತ್ತು.

ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಕಾರ್ಯದರ್ಶಿ ನೀಡಿದ ಈ ನಿರ್ದೇಶನವನ್ನು ಪ್ರಶ್ನಿಸಿ ಟೆಕ್ಸಾಸ್ ಮತ್ತು ಲೂಸಿಯಾನದ ರಿಪಬ್ಲಿಕನ್ ಪಕ್ಷದ ಸರಕಾರಗಳು ನ್ಯಾಯಾಲಯದ ಮೊರೆಹೋಗಿದ್ದವು. ಜೂನ್ ೧೦ರಂದು ನೀಡಿದ ತೀರ್ಪಿನಲ್ಲಿ ಟೆಕ್ಸಾಸ್‌ನ ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ಡ್ರ್ಯೂ ಟಿಪ್ಟನ್ ಅವರು ಬೈಡನ್ ಸರಕಾರದ ನಿರ್ದೇಶನವನ್ನು ಅಮಾನ್ಯಗೊಳಿಸಿತು.

 ಹೊಸ ಮಸೂದೆಗೆ ಜೋ ಬೈಡೆನ್ ಸಹಿ: ಅಮೆರಿಕದಲ್ಲಿ ಗನ್ ಬಳಕೆಗೆ ಬೀಳುತ್ತಾ ಕಡಿವಾಣ ಹೊಸ ಮಸೂದೆಗೆ ಜೋ ಬೈಡೆನ್ ಸಹಿ: ಅಮೆರಿಕದಲ್ಲಿ ಗನ್ ಬಳಕೆಗೆ ಬೀಳುತ್ತಾ ಕಡಿವಾಣ

 ಭಯದಲ್ಲಿ ವಲಸಿಗರು

ಭಯದಲ್ಲಿ ವಲಸಿಗರು

ಬೈಡನ್ ಸರಕಾರ ಈ ತೀರ್ಪನ್ನು ಒಲ್ಲದ ಮನಸಿನಿಂದ ಒಪ್ಪಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಮೇಲ್ಮನವಿ ಹೋಗುವುದಾಗಿಯೂ ತಿಳಿಸಿದೆ. ಆದರೂ ವಲಸಿಗರಲ್ಲಿ ಮತ್ತೆ ಭಯ ಶುರುವಾಗಿದೆ. ಅಕ್ರಮವಾಗಿ ನೆಲಸಿರುವವರ ಜೊತೆ ಇತರ ವಲಸಿಗ ಸಮುದಾಯಗಳಿಗೂ ಬಂಧನದ ಭೀತಿ ಎದುರಾಗಿದೆ ಎನ್ನುತ್ತಾರೆ ಕಾರ್ನೆಲ್ ಯೂನಿವರ್ಸಿಟಿಯ ಒಬ್ಬ ಪ್ರೊಫೆಸರ್.

 ಟ್ರಂಪ್ ಇದ್ದಾಗ ವಲಸಿಗರ ಪರದಾಟ

ಟ್ರಂಪ್ ಇದ್ದಾಗ ವಲಸಿಗರ ಪರದಾಟ

ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದರು. ವಲಸೆ ಅಧಿಕಾರಿಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದರು. ಆಗ ಅಕ್ರಮವಾಗಿ ನೆಲಸಿದ್ದ ವಲಸಿಗರು ಅಧಿಕಾರಿಗಳ ಕಣ್ತಪ್ಪಿಸಲು ಬೇರೆ ಬೇರೆ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದುದು ಕಂಡುಬಂದಿತ್ತು. ಕಾರಿನಲ್ಲಿ ಹೋದರೆ ನಿಲ್ಲಿಸಿ ಅಧಿಕಾರಿಗಳು ದಾಖಲೆಗಳನ್ನು ಕೇಳಬಹುದು ಎಂದು ಇವರು ಕಾರಿನಲ್ಲೇ ಹೋಗುವುದನ್ನು ನಿಲ್ಲಿಸಿದ್ದರು.

ಅಷ್ಟೇ ಅಲ್ಲ, ವಲಸೆ ಅಧಿಕಾರಿಗಳ ವ್ಯಾಪ್ತಿಗೆ ಬರದ ಚರ್ಚ್ ಮತ್ತಿತರ ಸ್ಥಳಗಳಲ್ಲಿ ಈ ಅಕ್ರಮ ವಲಸಿಗರು ಆಶ್ರಯ ಪಡೆಯುತ್ತಿದ್ದರು ಎಂದು ಹೇಳಲಾಗುತ್ತದೆ.

 ಮುಂದೇನು?

ಮುಂದೇನು?

ಈಗ ಅಮೆರಿಕದಲ್ಲಿ ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ವಾಪಸ್ ಕಳುಹಿಸಲು ಸಿಬ್ಬಂದಿ ಕೊರತೆ ಇದೆ. ಹೀಗಾಗಿ, ವಿವಿಧ ರಾಜ್ಯಗಳಲ್ಲಿ ಮತ್ತು ನಗರಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತಗಳೇ ಕಾರ್ಯತಂತ್ರ ರೂಪಿಸುವ ಹೊಣೆ ಹೊರಬಹುದು. ಸಿಬ್ಬಂದಿ ಕೊರತೆ ಇರುವುದರಿಂದ ಯಾವ ವಲಸಿಗರನ್ನು ಮೊದಲು ಗುರುತಿಸಬೇಕೆಂದು ಆದ್ಯತೆಗಳ ಪಟ್ಟಿ ತಯಾರಿಸಿ ಅದರಂತೆ ನಡೆಯಬಹುದು. ಅದರಂತೆ, ಮೊದಲಿಗೆ ಸಮಾಜಘಾತಕ ಶಕ್ತಿಗಳ ಮೇಲೆ ಗಮನ ನೆಡಬಹುದು ಎಂಬ ಅಭಿಪ್ರಾಯವಿದೆ.

ಅಮೆರಿಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 74 ಸಾವಿರಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿತ್ತು. 59 ಸಾವಿರಕ್ಕೂ ಹೆಚ್ಚು ಮಂದಿಯನ್ನು ಗಡೀಪಾರು ಮಾಡಲಾಗಿತ್ತು. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ, 1 ಲಕ್ಷಕ್ಕೂ ಹೆಚ್ಚು ಮಂದಿಯ ಬಂಧನ ಹಾಗು 1.86 ಲಕ್ಷ ಮಂದಿಯ ಗಡೀಪಾರು ಆಗಿತ್ತು.

ಅಮೆರಿಕದಲ್ಲಿರುವ ವಲಸಿಗ ಸಮುದಾಯದಲ್ಲಿ ಅನೇಕ ಭಾರತೀಯರೂ ಇದ್ದಾರೆ. ಅಕ್ರಮವಾಗಿ ವಲಸೆ ಹೋಗಿ ನೆಲಸಿರುವ ನೂರಾರು ಭಾರತೀಯರನ್ನು ಬಂಧಿಸಿದ ಘಟನೆಗಳೂ ನಡೆದಿವೆ.

(ಒನ್ಇಂಡಿಯಾ ಸುದ್ದಿ)

English summary
Biden govt has taken back its directive to focus on arrest and deportation of immigrants who are threat to society and nation. Now all immigrants are in fear of arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X