ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ವಿರುದ್ಧ ಭಾರಿ ದೊಡ್ಡ ಪ್ರಕರಣ ದಾಖಲಿಸಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 21: ಆನ್‌ಲೈನ್ ಸರ್ಚ್‌ಗಳು ಮತ್ತು ಜಾಹೀರಾತು ಮಾರುಕಟ್ಟೆಗಳನ್ನು ಅಕ್ರಮವಾಗಿ ನಿಯಂತ್ರಿಸಿದ ಮತ್ತು ಪ್ರಾಬಲ್ಯ ಮೆರೆದ ಆರೋಪದಲ್ಲಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಗೂಗಲ್ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆಯು ಬಹುದೊಡ್ಡ ಆಂಟಿಟ್ರಸ್ಟ್ ಪ್ರಕರಣಗಳನ್ನು ಹೂಡಿದೆ. ಗೂಗಲ್ ವಿರುದ್ಧದ ದಾವೆಯಲ್ಲಿ 11 ಅಮೆರಿಕದ ರಾಜ್ಯಗಳು ಕೂಡ ನ್ಯಾಯಾಂಗ ಇಲಾಖೆಯೊಂದಿಗೆ ಸೇರಿಕೊಂಡಿವೆ.

ಅಂತರ್ಜಾಲ ಕ್ಷೇತ್ರದಲ್ಲಿ ತನಗೆ ಮುಂದೆಯೂ ಪ್ರತಿಸ್ಪರ್ಧಿಗಳು ಯಾರೂ ಇಲ್ಲದಂತೆ ನೋಡಿಕೊಳ್ಳುವ ಉದ್ದೇಶದಿಂದ ತನ್ನ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಗೂಗಲ್ ಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸುತ್ತಿರುವುದಾಗಿ ಡೆಪ್ಯುಟಿ ಅಟಾರ್ನಿ ಜನರಲ್ ಜೆಫ್ ರೋಸೆನ್ ಹೇಳಿದ್ದಾರೆ. ಗೂಗಲ್‌ನ ಜಾಹೀರಾತು ಉದ್ಯಮವನ್ನು ಇದು ಗುರಿಯಾಗಿರಿಸಿಕೊಂಡಿಲ್ಲ. ಆದರೆ ತನ್ನ ಸರ್ಚ್ ಎಂಜಿನ್ ಮೂಲಕ ಸರ್ಚ್ ಮತ್ತು ಜಾಹೀರಾತಿನ ತನ್ನ ಪಾತ್ರವನ್ನು ಮಹತ್ವವಾಗಿ ತೋರಿಸಿಕೊಳ್ಳುವ ಮೂಲಕ ಜನರನ್ನು ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಗಿದೆ.

ಹುಡುಕಾಟದ ಸಂಗಾತಿಗೆ ಇಂದು 22ನೇ ವರ್ಷದ ಹುಟ್ಟುಹಬ್ಬ, ನೀವು ವಿಶ್ ಮಾಡಿ!ಹುಡುಕಾಟದ ಸಂಗಾತಿಗೆ ಇಂದು 22ನೇ ವರ್ಷದ ಹುಟ್ಟುಹಬ್ಬ, ನೀವು ವಿಶ್ ಮಾಡಿ!

ಗೂಗಲ್ ವಿರುದ್ಧದ ಆಂಟಿಟ್ರಸ್ಟ್ ಪ್ರಕರಣವು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಂಗ ಇಲಾಖೆಯ ಜತೆಗೇ ವಿವಿಧ ಅಟಾರ್ನಿ ಜನರಲ್‌ಗಳು ಪ್ರತ್ಯೇಕವಾಗಿ ಗೂಗಲ್ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಮೊದಲ ಪ್ರಕರಣ ಮೈಕ್ರೋಸಾಫ್ಟ್ ವಿರುದ್ಧ ಅಮೆರಿಕ ಜರುಗಿಸಿತ್ತು. ಅದು ಕೊನೆಗೂ 2001ರಲ್ಲಿ ಬಗೆಹರಿದಿತ್ತು.

US Govt Sues Google In Antitrust Case For Illegally Protecting Monopoly

ಯುಪಿಐ ಪಾವತಿ: ಅಮೇಜಾನ್, ಗೂಗಲ್, ಫೇಸ್‌ಬುಕ್, ಕೇಂದ್ರ ಸರ್ಕಾರಕ್ಕೆ ನೋಟಿಸ್ಯುಪಿಐ ಪಾವತಿ: ಅಮೇಜಾನ್, ಗೂಗಲ್, ಫೇಸ್‌ಬುಕ್, ಕೇಂದ್ರ ಸರ್ಕಾರಕ್ಕೆ ನೋಟಿಸ್

ನ್ಯಾಯಾಂಗ ಇಲಾಖೆಯ ದೂರಿಗೆ ಪ್ರತಿಕ್ರಿಯಿಸಿರುವ ಗೂಗಲ್ ಎಲ್ಲ ಆರೋಪಗಳನ್ನು ತಳ್ಳಿಹಾಕಿದೆ. 'ನ್ಯಾಯಾಂಗ ಇಲಾಖೆ ಇಂದು ಹೂಡಿರುವ ದಾವೆ ಬಹಳ ಪೇಲವವಾಗಿದೆ. ಜನರು ಗೂಗಲ್‌ಅನ್ನು ಏಕೆ ಬಳಸುತ್ತಾರೆ ಎಂದರೆ ಅವರು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ವಿನಾ ಅವರನ್ನು ಬಲವಂತ ಮಾಡುತ್ತಿದ್ದೇವೆ ಅಥವಾ ಅವರಿಗೆ ಪರ್ಯಾಯ ಆಯ್ಕೆ ಇದೆ ಎಂದಲ್ಲ' ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

English summary
US Department of Justice has sued Google in antitrust case for allegedly abusing its monopoly powers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X