ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಯುಎಸ್

|
Google Oneindia Kannada News

ವಾಶಿಂಗ್ಟನ್, ಅಕ್ಟೋಬರ್ 26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವ ಯುನೈಟೆಡ್ ಸ್ಟೇಟ್ಸ್ ಸರ್ಕಾರ ಭಾರತ ಸೇರಿದಂತೆ ಕೆಲವು ದೇಶಗಳ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ.

ನವೆಂಬರ್ 8ರಿಂದ ಭಾರತ ಸೇರಿದಂತೆ ಕಲವೇ ಕೆಲವು ರಾಷ್ಟ್ರಗಳಿಗೆ ಪ್ರಯಾಣ ನಿರ್ಬಂಧವನ್ನು ತೆಗೆದು ಹಾಕುವುದಾಗಿ ಘೋಷಿಸಿದೆ. ಇದರ ಹೊರತಾಗಿ ಮಾರಣಾಂತಿಕ ಕೊರೊನಾವೈರಸ್ ಸೋಂಕು ಹರಡುವಿಕೆ ಅಪಾಯ ಹೆಚ್ಚಾಗಿರುವ ಹಿನ್ನೆಲೆ ಹೆಚ್ಚಿನ ವಿದೇಶಿ ರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಹಲವಾರು ಹೊಸ ನಿಯಮಗಳನ್ನು ವಿಧಿಸಲಾಗಿದೆ. ಜೊ ಬಿಡೆನ್ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳದ ಹಾಗೂ ವಲಸೆ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧವನ್ನು ಮುಂದುವರಿಸಲಾಗಿದೆ.

"ಯುಎಸ್‌ಗೆ ವಿದೇಶಿ ರಾಷ್ಟ್ರೀಯ ವಿಮಾನ ಪ್ರಯಾಣಿಕರು ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಸಿಕೊಂಡಿರಬೇಕು ಹಾಗೂ ಯುಎಸ್‌ಗೆ ವಿಮಾನವನ್ನು ಹತ್ತುವ ಮೊದಲು ಲಸಿಕೆ ಪಡೆದಿರುವ ಬಗ್ಗೆ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ನವೆಂಬರ್ 8 ರಂದು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಲಸಿಕೆ ನೀತಿ ಜಾರಿಗೆ ಬರಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ತಿಳಿಸಿದ್ದಾರೆ.

US Govt Releases Fresh Guidelines For International Travel


ಯಾರು ಯುಎಸ್ ವಿಮಾನ ಏರಲು ಅರ್ಹರು?

* ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿರುವ ಕೊವಿಡ್-19 ಲಸಿಕೆಯನ್ನು ಪಡೆದುಕೊಂಡ ವಿದೇಶಿ ಪ್ರಜೆಗಳಿಗೆ ಮಾತ್ರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ವಿಮಾನವನ್ನು ಏರುವುದಕ್ಕೆ ಅನುಮತಿ ನೀಡಲಾಗುವುದು ಎಂದು ನೂತನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

* ಎರಡು ವರ್ಷದೊಳಗಿನ ಮಕ್ಕಳಿಗೆ ಕೊವಿಡ್-19 ಸೋಂಕು ಪರೀಕ್ಷೆ ಅಗತ್ಯವಿಲ್ಲ.

* ಯುಎಸ್ ಪ್ರಯಾಣ ಬೆಳೆಸಲು ಬಯಸುವ ಎಲ್ಲಾ ವಿಮಾನ ಪ್ರಯಾಣಿಕರು - 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು - ಅವರು ಲಸಿಕೆ ಪಡೆದುಕೊಂಡಿರುವ ಕುರಿತು ದಾಖಲೆ ಅಥವಾ 90 ದಿನಗಳ ಹಿಂದೆ ಕೊನೆಯದಾಗಿ COVID-19 ನಿಂದ ಚೇತರಿಸಿಕೊಂಡಿರುವ ದಿನಾಂಕದ ದಾಖಲಾತಿಗಳನ್ನು ಸಲ್ಲಿಸಬೇಕು. ಇದರ ಜೊತೆಗೆ 24 ಗಂಟೆಗಳ ಹಿಂದಿನ ಕೊವಿಡ್-19 ನೆಗೆಟಿವ್ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

* ವಿಮಾನ ಪ್ರಯಾಣಿಕರು ತಾವು ಪ್ರಸ್ತುತಪಡಿಸುವ ಮಾಹಿತಿಯು ನಿಜವೆಂದು ದೃಢೀಕರಣದ ರೂಪದಲ್ಲಿ ಸಲ್ಲಿಸಬೇಕು. ಪ್ರಯಾಣಿಕರು ಯುನೈಟೆಡ್ ಸ್ಟೇಟ್ಸ್‌ ವಿಮಾನಗಳನ್ನು ಏರುವ ಮೊದಲು ಮಾನ್ಯವಾದ ಸಂಪರ್ಕ ಮಾಹಿತಿಯನ್ನು ಒದಗಿಸುವುದು.

* ಕೊರೊನಾವೈರಸ್ ಲಸಿಕೆಗಳ ಲಭ್ಯತೆಯ ಕೊರತೆಯಿಂದಾಗಿ ಶೇ.10ಕ್ಕಿಂತ ಲಸಿಕೆ ಜನರಿಗೆ ಲಸಿಕೆ ನೀಡಿರುವುದು ಅಥವಾ 18 ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ ನೀಡುವ ಬಗ್ಗೆ ಸಿಡಿಸಿ ನಿರ್ಧಾರ ತೆಗೆದುಕೊಳ್ಳಲಿದೆ.

* ಕೊವಿಡ್-19 ಲಸಿಕೆ ವಿತರಣೆ ಕುರಿತು ಆದೇಶದ ಹೊರತಾಗಿ ಯುಎಸ್ ಯುನೈಟೆಡ್ ಸ್ಟೇಟ್ಸ್‌ಗೆ ಆಗಮಿಸುವ ಎಲ್ಲಾ ವಿಮಾನ ಪ್ರಯಾಣಿಕರಿಗೆ ಕೊರೊನಾವೈರಸ್ ಪರೀಕ್ಷೆಗೆ ಒಳಪಡಿಸಬೇಕು. ಇಲ್ಲಿ ಯಾವುದೇ ದೇಶದ ಪೌರತ್ವವೂ ಲೆಕ್ಕಕ್ಕೇ ಬರುವುದಿಲ್ಲ.

* ಎರಡೂ ಡೋಸ್ ಲಸಿಕೆ ಪಡೆದುಕೊಂಡ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರವೇಶಿಸಬಹುದು. ಪ್ರಯಾಣ ಆರಂಭಿಸುವುದಕ್ಕೂ ಮೂರು ದಿನ ಮೊದಲು ಕೊವಿಡ್-19 ಸೋಂಕಿನ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು.

* ಆದಾಗ್ಯೂ, ಲಸಿಕೆ ಹಾಕದ US ನಾಗರಿಕರು ಮತ್ತು ಕಾನೂನುಬದ್ಧ ಖಾಯಂ ನಿವಾಸಿಗಳು ಸೇರಿದಂತೆ, ಲಸಿಕೆ ಪಡೆದುಕೊಳ್ಳದೇ ವಿಮಾನ ಪ್ರಯಾಣ ಮಾಡಿರುವ ಪ್ರಯಾಣಿಕರಿಗೆ ಒಂದು ದಿನದೊಳಗೆ ಕೊವಿಡ್-19 ಸೋಂಕು ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ನಿಯಮಗಳು ಹೇಳುತ್ತವೆ.

ನೀವು ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದೀರಾ?:

* ಕೊವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ಎರಡು ವಾರಗಳ (14 ದಿನ) ನಂತರ ಸಂಪೂರ್ಣ ಲಸಿಕೆ ಪಡೆದುಕೊಂಡವರು ಎಂದು ಪರಿಗಣಿಸಲಾಗುತ್ತದೆ.

* ಮೊದಲ ಡೋಸ್ ಪಡೆದ 14 ದಿನಗಳ ನಂತರದಲ್ಲಿ ನೀವು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿರುವ ಬಗ್ಗೆ ದೃಢಪಡಿಸಿಕೊಳ್ಳಲಾಗುವುದು

* U.S. ಮೂಲದ AstraZeneca ಅಥವಾ Novavax COVID-19 ಲಸಿಕೆ ಪ್ರಯೋಗಗಳಲ್ಲಿ ನೀವು ಸಕ್ರಿಯ (ಪ್ಲೇಸ್ಬೊ ಅಲ್ಲ) COVID-19 ಲಸಿಕೆಯ ಸಂಪೂರ್ಣ ಸರಣಿಯನ್ನು ಸ್ವೀಕರಿಸಿದ 14 ದಿನಗಳ ನಂತರ; ಅಥವಾ

* ಕೊವಿಡ್-19 ಲಸಿಕೆಯ ಎರಡು ಡೋಸ್ ಸಂಯೋಜನೆಯನ್ನು 17 ದಿನಗಳ ಅಂತರದಲ್ಲಿ ನೀಡಲಾಗುತ್ತಿದ್ದು, 14 ದಿನಗಳ ನಂತರದಲ್ಲಿ ಲಸಿಕೆ ಪಡೆದುಕೊಂಡಿರುವ ಬಗ್ಗೆ ಪರಿಗಣಿಸಲಾಗುತ್ತದೆ

English summary
Unitedt States Govt Releases Fresh Guidelines For International Travel: Here Read More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X