• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

|

ವಾಷಿಂಗ್ಟನ್, ಸೆ. 17: ಅಮೆರಿಕದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು ಈವರೆಗೆ ಸುಮಾರು 68 ಲಕ್ಷ ಅಮೆರಿಕನ್ನರಿಗೆ ಕೊರೊನಾ ಕನ್ಫರ್ಮ್ ಆಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ವಿಚಾರದಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಮೇಲೆ ಜನರಿಗೆ ನಂಬಿಕೆ ಇಲ್ಲವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಜನರ ನಂಬಿಕೆ ಗಳಿಸಲು ಲಸಿಕೆ ಹಂಚುವ ಕಾರ್ಯಕ್ಕೆ ಟ್ರಂಪ್ ಸರ್ಕಾರ ಮುಂದಾಗಿರುವ ಸುದ್ದಿ ಬಂದಿದೆ.

ಚುನಾವಣೆ ಸಮೀಪವಾಗುತ್ತಿದ್ದಂತೆ ಟ್ರಂಪ್‌ಗೆ ಏಟಿನ ಮೇಲೆ ಏಟು ಬೀಳುತ್ತಲೇ ಇದೆ. ಈಗಾಗಲೇ ಟ್ರಂಪ್‌ಗೆ ತಮ್ಮ ಸ್ವಂತ ದೇಶದಲ್ಲೇ ಮುಖಭಂಗವಾಗಿದೆ. ಕೊರೊನಾ ವೈರಸ್, ಕ್ಯಾಲಿಫೋರ್ನಿಯ ಕಾಡ್ಗಿಚ್ಚು, ಜನಾಂಗೀಯ ಸಂಘರ್ಷ ಸೇರಿದಂತೆ ಹಲವು ವಿಚಾರದಲ್ಲಿ ಟ್ರಂಪ್ ಎಡವಿದ್ದಾರೆ ಎಂಬ ನಿಲುವು ವ್ಯಕ್ತವಾಗುತ್ತಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಈ ನಡುವೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು​ ಅಮೆರಿಕನ್ನರಿಗೆ ಕೋವಿಡ್​-19 ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಅಧಿಕೃತವಾಗಿ ಲಸಿಕೆ ಬಿಡುಗಡೆಯಾಗುವುದನ್ನು ಕಾಯುತ್ತಿರುವುದಾಗಿ ಟ್ರಂಪ್ ಕಚೇರಿ ಹೇಳಿದೆ.

ಚುನಾವಣೆ ಸಂದರ್ಭದಲ್ಲಿ ಕಾಡುತ್ತಿರುವ ಕೊರೊನಾ

ಚುನಾವಣೆ ಸಂದರ್ಭದಲ್ಲಿ ಕಾಡುತ್ತಿರುವ ಕೊರೊನಾ

ಮಾಸ್ಕ್ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ತನಕ ಟ್ರಂಪ್ ಮೇಲಿಂದ ಮೇಲೆ ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಮೊದಲಿಗೆ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಬಳಿಕ ತಾವೇ ಮಾಸ್ಕ್ ತೊಟ್ಟು ಹೊರಗೆ ಕಾಣಿಸಿಕೊಂಡಿದ್ದರು. ಹಾಗೇ ಕೊರೊನಾ ವೈರಸ್ ಸಾಯಲು ದೇಹಕ್ಕೆ ಸೋಂಕು ನಿವಾರಕ ರಾಸಾಯನಿಕಗಳನ್ನು ಚುಚ್ಚಿ ಎಂದಿದ್ದರು. ಸಾಲದು ಎಂಬಂತೆ ನೆರಳಾತೀತ ಕಿರಣಗಳನ್ನು ದೇಹಕ್ಕೆ ಹಾಯಿಸಿದರೆ ಮನುಷ್ಯನ ದೇಹದಲ್ಲಿರುವ ಕೊರೊನಾ ಸಾಯುತ್ತದೆ ಅಂತಾ ಹೇಳಿಕೆ ಕೊಟ್ಟಿದ್ದರು. ಆದರೆ ಇದೆಲ್ಲಾ ಮನುಷ್ಯನನ್ನೇ ಸಾಯಿಸುತ್ತದೆ ಎಂಬುದನ್ನೇ ಟ್ರಂಪ್ ಮರೆತಂತೆ ಮಾತನಾಡಿದ್ದರು. ಇಂತಹ ವಿಚಿತ್ರ ಹೇಳಿಕೆಗಳಿಂದ ಟ್ರಂಪ್ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಜನವರಿ ವೇಳೆಗೆ ಲಸಿಕೆ ಖಚಿತ

ಜನವರಿ ವೇಳೆಗೆ ಲಸಿಕೆ ಖಚಿತ

ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಲಸಿಕೆ ಕೊನೆ ಹಂತದ ಮಾನ್ಯತೆ ಪರೀಕ್ಷೆಗೆ ಒಳಪಡಲಿದೆ ಆದರೆ ಮುಂದಿನ ವರ್ಷ ಜನವರಿ ಆರಂಭದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ವೈರಸ್ ಸಲಹೆಗಾರ ಸ್ಕಾಟ್ ಅಟ್ಲಾಸ್ ಹೇಳಿದ್ದಾರೆ. ಮುಂದಿನ ಜನವರಿ ವೇಳೆಗೆ ಅಮೆರಿಕಾದ ಎಲ್ಲರಿಗೂ ಉಚಿತ ಲಸಿಕೆ ಸಿಗಲಿದೆ ಎಂದು ಶ್ವೇತಭವನ ಖಚಿತಪಡಿಸಿದೆ. ಕೊರೊನಾ ವೈರಸ್​ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಟ್ರಂಪ್​ ಸರ್ಕಾರದ ಲಸಿಕೆ ವಿತರಣೆ ಕಾರ್ಯಕ್ರಮದ ರೂಪುರೇಷೆಯನ್ನು ಅಮೆರಿಕಾದ ಆರೋಗ್ಯ ಮತ್ತು ರಕ್ಷಣಾ ಇಲಾಖೆ ಜಂಟಿಯಾಗಿ ಬಿಡುಗಡೆಗೊಳಿಸಿವೆ.

ಪ್ರತಿ ಮನೆ ಮನೆಗೂ ಲಸಿಕೆ ವಿತರಣೆ

ಪ್ರತಿ ಮನೆ ಮನೆಗೂ ಲಸಿಕೆ ವಿತರಣೆ

ಪ್ರತಿ ಮನೆ ಮನೆಗೂ ಲಸಿಕೆ ವಿತರಣೆ ಮಾಡಲಾಗುವುದು. ಲಸಿಕೆ ಉಚಿತವಾಗಿ ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೋವಿಡ್​-19 ಲಸಿಕೆ ಪೂರೈಸುವ ಔಷಧ ಕಂಪನಿಗಳ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಲಸಿಕೆ ತೆಗೆದುಕೊಳ್ಳುವ ಜನರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಟ್ರಂಪ್​ ಸರ್ಕಾರ ಹೇಳಿದೆ.

  Modi ಹುಟ್ಟಿದ ಹಬ್ಬಕ್ಕೆ ಯಾರೆಲ್ಲಾ ಶುಭಾಶಯ ಕೋರಿದ್ದಾರೆ ನೋಡಿ | Oneindia Kannada
  ಅಮೆರಿಕದಲ್ಲೇ ಹೆಚ್ಚು ಸೋಂಕಿತರು

  ಅಮೆರಿಕದಲ್ಲೇ ಹೆಚ್ಚು ಸೋಂಕಿತರು

  ಅಮೆರಿಕಾದ ಜಾನ್​ ಹಾಪ್​ಕಿನ್ಸ್​ ವಿಶ್ವವಿದ್ಯಾಲಯ, ವರ್ಲ್ಡ್ ಮೀಟರ್ ಅಂಕಿ ಅಂಶ ಪ್ರಕಾರ ಈ ಸಮಯಕ್ಕೆ ಕೊರೊನಾ ಪೀಡಿತರ ಸಂಖ್ಯೆ 6,828,301ಕ್ಕೆ ತಲುಪಿದೆ. ಇದುವರೆಗೆ 201,348ಮಂದಿ ಸೋಂಕಿಗೆ ಬಲಿಯಾಗಿದ್ದರೆ, 4,119,158 ಮಂದಿ ಗುಣಮುಖರಾಗಿದ್ದಾರೆ. ವಿಶ್ವದಲ್ಲಿ 30,038,634 ಕೊರೊನಾ ಕೇಸ್ ಗಳಿದ್ದು, 945,099 ಮಂದಿ ಮೃತಪಟ್ಟಿದ್ದರೆ, 21,806,713 ಮಂದಿ ಚೇತರಿಕೆ ಕಂಡಿದ್ದಾರೆ.

  English summary
  The U.S. government on Wednesday said it will start distributing a COVID-19 vaccine within one day of regulatory authorization as it plans for the possibility that a limited number of vaccine doses may be available at the end of the year.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X