ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಇಂತೂ ಚೇತರಿಕೆ ಕಂಡ ಅಮೆರಿಕದ ಆರ್ಥಿಕತೆ

|
Google Oneindia Kannada News

ಜಗತ್ತಿನೆದುರು ಶ್ರೀಮಂತ ರಾಷ್ಟ್ರ ಎಂಬ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅಮೆರಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. 2020ರ 3ನೇ ತ್ರೈಮಾಸಿಕದಲ್ಲಿ ಅಮೆರಿಕನ್ನರ ಜಿಡಿಪಿ (GDP) ಶೇಕಡ 33.1ರಷ್ಟು ಏರಿಕೆ ಕಂಡಿದೆ. ಕೊರೊನಾ ಕೂಪದಲ್ಲಿ ವಿಲವಿಲನೆ ಒದ್ದಾಡುತ್ತಿರುವ ಅಮೆರಿಕದ ಆರ್ಥಿಕತೆ ಬೀದಿಗೆ ಬಿದ್ದಿತ್ತು. 1930ರ ಮಹಾ ಆರ್ಥಿಕ ಪತನದ ಬಳಿಕ 2020ರ ಮೊದಲ 2 ತ್ರೈಮಾಸಿಕದಲ್ಲಿ ಅಮೆರಿಕದ ಬಹುದೊಡ್ಡ ಆರ್ಥಿಕ ಕುಸಿತವನ್ನು ಕಂಡಿತ್ತು.

ಆದರೆ ಅಂತೂ ಇಂತೂ 3ನೇ ತ್ರೈಮಾಸಿಕದಲ್ಲಿ ಬರೋಬ್ಬರಿ ಶೇಕಡ 33.1% ರಷ್ಟು ಏರಿಕೆಯೊಂದಿಗೆ ಅಮೆರಿಕದ ಜಿಡಿಪಿ ಮತ್ತೊಂದು ದಾಖಲೆ ಬರೆದಿದೆ. ಜಗತ್ತಿನ ಅತಿ ಶ್ರೀಮಂತ ರಾಷ್ಟ್ರವಾಗಿರುವ ಅಮೆರಿಕವನ್ನು ಆರ್ಥಿಕವಾಗಿ ಹಿಂದಿಕ್ಕಲು ಪೈಪೋಟಿ ಇದೆ. ಈ ಪೈಪೋಟಿಗೆ ಮತ್ತಷ್ಟು ವೇಗ ಕೊಟ್ಟಿದ್ದು ಕೊರೊನಾ ವೈರಸ್.

ಕೊರೊನಾವೈರಸ್ ಉಲ್ಬಣದಿಂದಾಗಿ ಅಮೆರಿಕಾ ಆರ್ಥಿಕತೆ ಚೇತರಿಕೆ ನಿಧಾನಗತಿಯಲ್ಲಿದೆ: ಯುಎಸ್ ಕೇಂದ್ರ ಬ್ಯಾಂಕ್ಕೊರೊನಾವೈರಸ್ ಉಲ್ಬಣದಿಂದಾಗಿ ಅಮೆರಿಕಾ ಆರ್ಥಿಕತೆ ಚೇತರಿಕೆ ನಿಧಾನಗತಿಯಲ್ಲಿದೆ: ಯುಎಸ್ ಕೇಂದ್ರ ಬ್ಯಾಂಕ್

ಜಗತ್ತಿನಲ್ಲೇ ಕೊರೊನಾ ಕಾರಣಕ್ಕೆ ಅಮೆರಿಕ ಅನುಭವಿಸಿದಷ್ಟು ನಷ್ಟ ಬೇರೆ ಯಾವ ದೇಶವೂ ಅನುಭವಿಸಿಲ್ಲ. ಲಕ್ಷಾಂತರ ಜನರು ಮೃತಪಟ್ಟಿದ್ದಲ್ಲದೆ, ಮತ್ತೊಂದ್ಕಡೆ ಹತ್ತಾರು ಲಕ್ಷ ಜನರಿಗೆ ಕೊರೊನಾ ತಗುಲಿತ್ತು. ಹೀಗಾಗಿ ಘೋಷಣೆಯಾಗಿದ್ದ ಲಾಕ್‌ಡೌನ್ ಅಮೆರಿಕದ ಆರ್ಥಿಕ ಬುಡವನ್ನೇ ಅಲುಗಾಡಿಸಿತ್ತು. ಆದರೆ ಟ್ರಂಪ್ ಸರ್ಕಾರ ಕೈಗೊಂಡ ಹಲವು ಆರ್ಥಿಕ ನಿರ್ಧಾರಗಳಿಂದ ಅಮೆರಿಕದ ಆರ್ಥಿಕತೆ ಚೇತರಿಕೆ ಹಾದಿಗೆ ಮರಳಿದೆ.

3 ಟ್ರಿಲಿಯನ್ ಡಾಲರ್ ಪರಿಹಾರ

3 ಟ್ರಿಲಿಯನ್ ಡಾಲರ್ ಪರಿಹಾರ

ಆರ್ಥಿಕತೆ ಕುಸಿಯುತ್ತಿದೆ ಎಂದು ಗೊತ್ತಾದ ತಕ್ಷಣ ಅಮೆರಿಕ ಸರ್ಕಾರ ದಿಟ್ಟ ಕ್ರಮ ಕೈಗೊಂಡಿತ್ತು. ಟ್ರಂಪ್ ನೇತೃತ್ವದಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ ಪರಿಹಾರವನ್ನು ಮೊದಲ ಭಾಗವಾಗಿ ಘೋಷಿಸಲಾಗಿತ್ತು. ನಂತರ ಈ ಯೋಜನೆ 3 ಟ್ರಿಲಿಯನ್ ಡಾಲರ್‌ಗೆ ವಿಸ್ತರಣೆಯಾಗಿತ್ತು. ಜಗತ್ತಿನ ಬಹುಪಾಲು ದೇಶಗಳು ಈ ಪ್ರಮಾಣದ ಬಜೆಟ್‌ನ್ನು ಮಂಡಿಸಲು ಹತ್ತಾರು ವರ್ಷಗಳೇ ಕಾಯಬೇಕು. ಹೀಗಿರುವಾಗ ಶ್ರೀಮಂತ ರಾಷ್ಟ್ರ ಅಮೆರಿಕ 3 ಟ್ರಿಲಿಯನ್ ಡಾಲರ್ ಪರಿಹಾರ ಘೋಷಿಸಿದ್ದೇ ತಡ ಅಮೆರಿಕದ ಆರ್ಥಿಕತೆ ಮತ್ತೆ ಚೇತರಿಕೆಯ ಹಾದಿ ಹಿಡಿದಿತ್ತು. ಇದೀಗ ಅದರ ರಿಸಲ್ಟ್ ಹೊರಬಿದ್ದಿದ್ದು, ಜಿಡಿಪಿ ಶೇಕಡ 33.1% ರಷ್ಟು ಏರಿಕೆ ಕಂಡಿದೆ.

ಚೀನಾ ಕಂಡು ಚಿಂತಾಕ್ರಾಂತ..!

ಚೀನಾ ಕಂಡು ಚಿಂತಾಕ್ರಾಂತ..!

ಜಗತ್ತಿಗೆ ಕೊರೊನಾ ಎಂಬ ಕಂಟಕ ಉಡುಗೊರೆಯಾಗಿ ನೀಡಿದ್ದ ಕುತಂತ್ರಿ ಚೀನಾ, ಕಂಡವರ ಚಿತೆ ಮೇಲೆಯೇ ಅಭಿವೃದ್ಧಿ ಕನಸು ಕಾಣುತ್ತಿತ್ತು. ಕಳೆದ ವಾರ ಚೀನಾ ನೀಡಿದ್ದ 3ನೇ ತ್ರೈಮಾಸಿಕದ ಜಿಡಿಪಿ ವರದಿಯಲ್ಲೂ ಭಾರಿ ಏರಿಕೆ ಕಂಡಿತ್ತು. ಅದಾಗಲೇ 2ನೇ ತ್ರೈಮಾಸಿಕದಲ್ಲೂ 3.2%ರಷ್ಟು ಅಭಿವೃದ್ಧಿ ಸಾಧಿಸಿದ್ದ ಚೀನಾ ಜಿಡಿಪಿ, ಇದೀಗ 3ನೇ ತ್ರೈಮಾಸಿಕದಲ್ಲೂ ಯಶಸ್ಸಿನ ಹಾದಿ ಹಿಡಿದಿದ್ದು ಭಾರಿ ಕುತೂಹಲ ಕೆರಳಿಸಿತ್ತು. ಆದರೆ ಇದು ಪಾಶ್ಚಾತ್ಯ ರಾಷ್ಟ್ರಗಳಿಗೆ ನಡುಕ ಉಂಟುಮಾಡಿತ್ತು. ಚೀನಾ ಬೆಳವಣಿಗೆ ಕಂಡು ಪಾಶ್ಚಾತ್ಯರು ಚಿಂತಾಕ್ರಾಂತರಾಗಿದ್ದರು. ಆದ್ರೆ ಇದೀಗ ಅಮೆರಿಕ ಮತ್ತೆ ಅಭಿವೃದ್ಧಿಯ ಹಳಿಗೆ ಮರಳಿರುವುದು ಒಂದಷ್ಟು ನೆಮ್ಮದಿ ನೀಡಿದೆ.

ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!

ಚೀನಾದಲ್ಲಿ ಎಲ್ಲವೂ ಸರಿಹೋಗಿದೆ

ಚೀನಾದಲ್ಲಿ ಎಲ್ಲವೂ ಸರಿಹೋಗಿದೆ

ಪ್ರಪಂಚದಲ್ಲಿ ಕೊರೊನಾ ತಲ್ಲಣ ಸೃಷ್ಟಿಸಿದೆ. ಅದರಲ್ಲೂ ಜಗತ್ತಿಗೆ ಆಧುನಿಕತೆ ಪಾಠ ಹೇಳಿಕೊಟ್ಟ ಯುರೋಪ್ ರಾಷ್ಟ್ರಗಳು ಅಲ್ಲಾಡಿ ಹೋಗಿವೆ. ಅಮೆರಿಕದ ಸ್ಥಿತಿಯಂತೂ ಕೇಳುವುದೇ ಬೇಡ, ಕೊರೊನಾ ನಿರ್ವಣೆ ಸಾಧ್ಯವೇ ಆಗುತ್ತಿಲ್ಲ. ಜನರು ಓಡಾಡಲು, ನಡೆದಾಡಲು ನೂರಾರು ನಿಬಂಧನೆಗಳನ್ನ ಹೇರಲಾಗಿದೆ. ಆದರೆ ಚೀನಾದಲ್ಲೀಗ ಎಲ್ಲವೂ ಸರಿ ಹೋಗಿದೆ. ಕೊರೊನಾ ವೈರಸ್ ತವರು ಚೀನಾ, ಕೊರೊನಾ ಕಂಟಕದಿಂದ ಮುಕ್ತವಾಗಿದೆ. ಇದು ಅಲ್ಲಿನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಜನರು ಹೊರಬಂದು ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ವ್ಯಾಪಾರ, ವಹಿವಾಟು ಭರ್ಜರಿಯಾಗಿ ಸಾಗಿದೆ. ಕೈಗಾರಿಕೆಗಳು ಅಂದುಕೊಂಡಷ್ಟು ಉತ್ಪಾದನೆ ಗುರಿ ತಲುಪಿವೆ. ಪರಿಣಾಮ ಚೀನಾ ಅಭಿವೃದ್ಧಿ ಹೊಂದುತ್ತಿದೆ, ಆದ್ರೆ ಜಗತ್ತು ಚೀನಿ ವೈರಸ್ ‘ಕೊರೊನಾ' ಕಾಟಕ್ಕೆ ನಲುಗುತ್ತಿದೆ.

ಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿ

 ಚೀನಿ ಸರಕುಗಳು ವಿಶ್ವವ್ಯಾಪಿ ಹರಡಿವೆ

ಚೀನಿ ಸರಕುಗಳು ವಿಶ್ವವ್ಯಾಪಿ ಹರಡಿವೆ

ಜಗತ್ತು ‘ಕೊರೊನಾ' ವೈರಸ್‌ನ ಹಾವಳಿಗೆ ತುತ್ತಾಗುವ ಮೊದಲೇ ಚೀನಿ ವಸ್ತು ಹಾವಳಿಗಳ ಮಿತಿಮೀರಿತ್ತು. ಅದರಲ್ಲೂ ಕೊರೊನಾ ಬಂದು ಅಪ್ಪಳಿಸಿದ ನಂತರ ವಿಶ್ವದ ಬಹುತೇಕ ದೇಶಗಳು ಲಾಕ್‌ಡೌನ್‌ಗೆ ತುತ್ತಾಗಿ, ಸ್ತಬ್ಧವಾಗಿ ಹೋದವು. ಆಗ ಅನಿವಾರ್ಯವಾಗಿ ಜನರು ಚೀನಿ ವಸ್ತುಗಳನ್ನೇ ಅವಲಂಬಿಸಬೇಕಾಯಿತು. ಈ ಪರಿಸ್ಥಿತಿ ಲಾಭ ಪಡೆದ ಚೀನಾ ಹಿಂದಿಗಿಂತಲೂ ಪ್ರಬಲವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಜೊತೆಗೆ ನೆರೆಹೊರೆ ರಾಷ್ಟ್ರಗಳಿಗೆ ಕಿರುಕುಳ ನೀಡುತ್ತಿದೆ ಚೀನಿ ಗ್ಯಾಂಗ್. ಇಷ್ಟೇ ಅಲ್ಲ ಜಗತ್ತಿಗೆ ಆಧುನಿಕ ವ್ಯಾಪಾರದ ಪಾಠ ಕಲಿಸಿದ ಯುರೋಪ್ ಹಾಗೂ ಅಮೆರಿಕ ಕೂಡ ಚೀನಾ ವಸ್ತುಗಳಿಗೆ ಹಪಹಪಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನೇ ಚೀನಾ ಬಂಡವಾಳ ಮಾಡಿಕೊಂಡು ಅಭಿವೃದ್ಧಿ ಸಾಧಿಸುತ್ತಿದೆ.

ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?

Recommended Video

ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada
ಅಮೆರಿಕ ಚುನಾವಣೆ ಮೇಲೂ ಪ್ರಭಾವ..?

ಅಮೆರಿಕ ಚುನಾವಣೆ ಮೇಲೂ ಪ್ರಭಾವ..?

ಹೌದು ಈಗ ಮೂಡಿರುವ ಕುತೂಹಲವೇ ಇದು. ಇಷ್ಟುದಿನ ಅಮೆರಿಕ ಆರ್ಥಿಕತೆ ಹಳ್ಳ ಹಿಡಿಯುತ್ತಿದೆ ಎಂಬ ಕಾರಣಕ್ಕೆ ಟ್ರಂಪ್ ವಿರುದ್ಧ ಬಹುತೇಕ ಮತದಾರರು ಕೋಪಗೊಂಡಿದ್ದರು. ಆದರೆ ಈಗ ಅಮೆರಿಕದ ಆರ್ಥಿಕ ಸ್ಥಿತಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟ್ರಂಪ್ ಜನಬೆಂಬಲ ಗಳಿಸುತ್ತಾರಾ ಎಂಬ ಅನುಮಾನಗಳು ಮೂಡುವುದು ಸಹಜ. ಆದರೆ ಈಗಾಗಲೇ ಕಾಲ ಮೀರಿದೆ. ಏಕೆಂದರೆ ಅಮೆರಿಕದ ಬಹುಪಾಲು ಮತದಾರರು ಅವಧಿಪೂರ್ವ ಮತದಾನ ಮಾಡಿರುವುದು ಟ್ರಂಪ್‌ಗೆ ದೊಡ್ಡ ಹಿನ್ನಡೆ ಕೊಟ್ಟಂತಾಗಿದೆ. ಹೀಗಾಗಿ ಅಮೆರಿಕದ ಜಿಡಿಪಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಅಧ್ಯಕ್ಷೀಯ ಚುನಾವಣೆ ಮೇಲೆ ಅದರ ಪ್ರಭಾವ ಅಷ್ಟಕ್ಕಷ್ಟೇ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್'

English summary
US GDP rose 33.1% in the third quarter of 2020. Recently, China's GDP also rose tremendously in the 3rd quarter of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X