• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಮೇಲೆ ಡೆಡ್ಲಿ ಸೈಬರ್ ಅಟ್ಯಾಕ್, ಪೆಟ್ರೋಲ್-ಡೀಸೆಲ್ ಬೆಲೆ ಭಾರಿ ಏರಿಕೆ

|

ಕೊರೊನಾ ಬಿರುಗಾಳಿಗೆ ತತ್ತರಿಸಿರುವ ಅಮೆರಿಕದಲ್ಲಿ ಸೈಬರ್ ಕಳ್ಳರ ಅಟ್ಟಹಾಸ ಜೋರಾಗಿದ್ದು, ಇತ್ತೀಚೆಗಷ್ಟೇ ಅಮೆರಿಕದ ತೈಲ ಸರಬರಾಜು ವ್ಯವಸ್ಥೆ ಮೇಲೆ ನಡೆದಿದ್ದ ಸೈಬರ್ ಅಟ್ಯಾಕ್ ಅಮೆರಿಕದ ತೈಲ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಇಂಧನ ಪೂರೈಕೆಯ ಬಹುದೊಡ್ಡ ಜಾಲ ಕಲೋನಿಯಲ್ ಪೈಪ್‌ಲೈನ್ ಸಂಸ್ಥೆಯ ಕಂಪ್ಯೂಟರ್ ವ್ಯವಸ್ಥೆ ಮೇಲೆ ಸೈಬರ್ ಅಟ್ಯಾಕ್ ನಡೆದಿತ್ತು. ದಾಳಿಯ ಬಳಿಕ ತಕ್ಷಣ ತೈಲ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಸುಮಾರು 8900 ಕಿ.ಮೀ. ಉದ್ದದ ತೈಲ ಸಂಪರ್ಕ ಜಾಲ ಅಮೆರಿಕದ ಪಶ್ಚಿಮ ರಾಜ್ಯಗಳ ಜೀವನಾಡಿ.

ಪ್ರತಿದಿನ ಈ ಪೈಪ್‌ಲೈನ್ ಮೂಲಕ ಸುಮಾರು 2.5 ಮಿಲಿಯನ್ ಬ್ಯಾರಲ್‌ ತೈಲ ಸರಬರಾಜು ಮಾಡಲಾಗುತ್ತಿತ್ತು. ಆದ್ರೆ ದಿಢೀರ್ ಸೈಬರ್ ಅಟ್ಯಾಕ್ ನಡೆದ ಬಳಿಕ ಪೈಪ್‌ಲೈನ್ ಮೇಲೆ ಅಮೆರಿಕ ಇಂಧನ ಇಲಾಖೆ ಸಂಪರ್ಕ ಕಳೆದುಕೊಂಡು ಪೈಪ್‌ಲೈನ್‌ ಬಂದ್ ಮಾಡಿತ್ತು.

ತೈಲ ಪೂರೈಕೆ ಪುನಾರಂಭವಾದರೂ ಪರಿಸ್ಥಿತಿ ಸದ್ಯಕ್ಕೆ ಸರಿಹೋಗುವ ಸಾಧ್ಯತೆ ಇಲ್ಲ. ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ನ್ಯೂಯಾರ್ಕ್, ಟೆಕ್ಸಾಸ್ ಸೇರಿದಂತೆ ಅಮೆರಿಕದ ಪಶ್ಚಿಮ ಕರಾವಳಿ ರಾಜ್ಯಗಳ ಜನ ನಲುಗಿ ಹೋಗಿದ್ದಾರೆ.

ಕೊರೊನಾ ನಡುವೆ ಬೆಲೆ ಶಾಕ್..!

ಕೊರೊನಾ ನಡುವೆ ಬೆಲೆ ಶಾಕ್..!

ಇಡೀ ಜಗತ್ತಿನಲ್ಲಿ ಅತಿಹೆಚ್ಚು ತೈಲ ಬಳಸುವ ರಾಷ್ಟ್ರ ಅಮೆರಿಕ. ಆದರೆ ಅಮೆರಿಕ ತೈಲ ಪೂರೈಕೆಯ ಬಹುದೊಡ್ಡ ಜಾಲಕ್ಕೆ ಪೆಟ್ಟು ಬಿದ್ದಿರುವುದು ನುಂಗಲಾರದ ತುತ್ತಾಗಿದೆ. ಕೊರೊನಾ ಬೇಗೆಯಲ್ಲಿ ಬೇಯುತ್ತಿರುವ ಅಮೆರಿಕದ ಜನಕ್ಕೆ ಇದು ಶಾಕ್ ಮೇಲೆ ಶಾಕ್ ಕೊಟ್ಟಿದೆ.

ಪೂರೈಕೆ ಕಡಿಮೆಯಾದ ಸಂದರ್ಭದಲ್ಲಿ ಬೆಲೆ ಏರಿಕೆ ಆಗುವುದು ಮಾಮೂಲು. ಈಗಲೂ ಅದೇ ಆಗಿದ್ದು, ಬೇಡಿಕೆಯಷ್ಟು ತೈಲ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ಸರಿಹೋಗಲು ಇನ್ನೂ ಕೆಲವು ವಾರಗಳೇ ಬೇಕು ಎನ್ನುತ್ತಿದ್ದಾರೆ ತಜ್ಞರು. ತೈಲ ಸರಬರಾಜು ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆದ ಬಳಿಕ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ನಿರಂತರ ಸೈಬರ್ ಅಟ್ಯಾಕ್..!

ನಿರಂತರ ಸೈಬರ್ ಅಟ್ಯಾಕ್..!

ಅಮೆರಿಕದ ಮೇಲೆ ಕೆಲ ತಿಂಗಳಿಂದ ನಿರಂತರವಾಗಿ ಸೈಬರ್ ದಾಳಿ ನಡೆಯುತ್ತಿದೆ. ಹಿಂದೆ ಅಮೆರಿಕ ಹಣಕಾಸು ಇಲಾಖೆ, ಅಣುಸ್ಥಾವರ ಸೇರಿದಂತೆ ಇಂಧನ ಇಲಾಖೆಯ ಮೇಲೂ ದಾಳಿಗಳು ನಡೆದಿದ್ದವು. ಈ ಕಾರಣಕ್ಕಾಗಿ ಅಮೆರಿಕ-ರಷ್ಯಾ ಮಧ್ಯೆ ತಿಕ್ಕಾಟ ಮುಂದುವರಿದಿರುವ ಸಂದರ್ಭದಲ್ಲೇ ಮತ್ತೆ ಅಮೆರಿಕದ ಇಂಧನ ಇಲಾಖೆ ಮೇಲೆ ಸೈಬರ್ ಕಳ್ಳರು ದಾಳಿ ಮಾಡಿದ್ದಾರೆ. ಸಹಜವಾಗಿ ಈ ಘಟನೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದು, ಅಮೆರಿಕ ಅಧ್ಯಕ್ಷ ಬೈಡನ್ ಕೆಂಡವಾಗಿದ್ದಾರೆ. ಮತ್ತೊಮ್ಮೆ ರಷ್ಯಾ ಕಡೆ ಅಮೆರಿಕದ ಅನುಮಾನದ ದೃಷ್ಟಿ ನೆಟ್ಟಿದೆ.

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ಜಗತ್ತಿನಲ್ಲಿ ರಷ್ಯನ್ ಹ್ಯಾಕರ್ಸ್ ಹೆಸರು ಕೇಳಿದರೆ ಭಯ ಆವರಿಸಿಬಿಡುತ್ತದೆ. ಏಕೆಂದರೆ ರಷ್ಯಾದ ಹ್ಯಾಕರ್‌ಗಳು ಅಷ್ಟು ಖತರ್ನಾಕ್. ಚಿಟಿಕೆ ಹೊಡೆಯುವುದರ ಒಳಗಾಗಿ ಎಂತಹ ಪ್ರಬಲ ಕಂಪ್ಯೂಟರ್‌ಗಳನ್ನು ಬೇಕಾದರೂ ಮುಳುಗಿಸಿಬಿಡುತ್ತಾರೆ. ಅದೆಷ್ಟೇ ಸೈಬರ್ ಸೆಕ್ಯೂರಿಟಿ ಕೊಟ್ಟಿದ್ದರೂ ರಷ್ಯನ್ ಹ್ಯಾಕರ್ಸ್ ಕೈಯಿಂದ ಬಚಾವ್ ಆಗುವುದು ತುಂಬಾನೇ ಕಷ್ಟ. ಅದರಲ್ಲೂ ಅಮೆರಿಕದ ಕಂಪ್ಯೂಟರ್‌ಗಳು ಎಂದರೆ ರಷ್ಯಾ ಹ್ಯಾಕರ್ಸ್‌ಗೆ ಬಲು ಪ್ರೀತಿ. ಹೀಗಾಗಿ ಪದೇ ಪದೆ ಅಮೆರಿಕದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ ಎಂಬ ಆರೋಪವಿದೆ.

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಅಂದಹಾಗೆ 8 ತಿಂಗಳ ಅಂತರದಲ್ಲಿ ಅಮೆರಿಕದ ಸರ್ಕಾರಿ ಇಲಾಖೆಗಳ ಮೇಲೆ ನಡೆಯುತ್ತಿರುವ 4ನೇ ಸೈಬರ್ ದಾಳಿ ಇದಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ದಾಳಿ ನಡೆದಿತ್ತು. ಕಳೆದ ಅಕ್ಟೋಬರ್ ಅಂತ್ಯದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕದ ನೀರು ಸರಬರಾಜು ಕೇಂದ್ರ, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿತ್ತು.

  Irfhan Patan tweet ಗೆ ವ್ಯಂಗ್ಯ ಮಾಡಿರೋ ಕಂಗನಾ!! | Oneindia Kannada
  ಅಮೆರಿಕದ ಖಜಾನೆಗೂ ಗುನ್ನಾ..!

  ಅಮೆರಿಕದ ಖಜಾನೆಗೂ ಗುನ್ನಾ..!

  ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಮಾತ್ರವಲ್ಲ, ಚುನಾವಣೆ ಮುಗಿದ ಮೇಲೂ ಹಲವು ಬಾರಿ ಅಮೆರಿಕದಲ್ಲಿ ಸೈಬರ್ ಅಟ್ಯಾಕ್ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಅಮೆರಿಕ ಹಣಕಾಸು ಇಲಾಖೆ ಕಂಪ್ಯೂಟರ್‌ ಲಪಟಾಯಿಸಿರುವ ಆರೋಪ ಕೇಳಿಬಂದಿತ್ತು. ದೊಡ್ಡಣ್ಣ ಅಮೆರಿಕದ ಹಣಕಾಸು ಇಲಾಖೆಗೆ ಸಂಬಂಧಿಸಿದ ಬಹುಮುಖ್ಯ ದಾಖಲೆಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎನ್ನಲಾಗಿತ್ತು. ಹೀಗೆ ತಮ್ಮ ವಿರುದ್ಧ ಸೈಬರ್ ದಾಳಿ ನಡೆದಾಗಲೆಲ್ಲಾ ಅಮೆರಿಕ ರಷ್ಯಾ ಕಡೆಗೆ ಬೆರಳು ತೋರಿಸುತ್ತಾ ಬಂದಿದೆ. ಸೈಬರ್ ಅಟ್ಯಾಕ್ ರಷ್ಯಾ ಮೂಲದ ಹ್ಯಾಕರ್ಸ್ ಕೃತ್ಯ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಆದರೆ ಈವರೆಗೂ ರಷ್ಯಾ ಸೈಬರ್ ಅಟ್ಯಾಕ್ ಮಾಡಿದೆ ಎಂಬುದಕ್ಕೆ ಬಲವಾದ ಸಾಕ್ಷಿ ಸಿಕ್ಕಿಲ್ಲ.

  English summary
  US fuel pipeline supplies restarted after ransomware attack on computers.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X