ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಹಫೀಜ್ ಕುರಿತ ಟ್ರಂಪ್ ಟ್ವೀಟ್‌ಗೆ ಅಮೆರಿಕ ಸದನ ಸಮಿತಿ ತಿರುಗೇಟು

|
Google Oneindia Kannada News

ವಾಷಿಂಗ್ಟನ್, ಜುಲೈ 18: ಜಾಗತಿಕ ಉಗ್ರ ಹಫೀಜ್ ಸಯೀದ್ ಬಂಧನಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಡ್ರಂಪ್ ಟ್ವೀಟ್‌ಗೆ ಅಲ್ಲಿಯ ವಿದೇಶಾಂಗ ಸದನ ಸಮಿತಿ ತಿರುಗೇಟು ನೀಡಿದೆ.

ಡೊನಾಲ್ಡ್ ಟ್ರಂಪ್ ಹೇಳಿರುವಂತೆ ಹಫೀಜ್ ಸಯೀದ್ ಹತ್ತು ವರ್ಷಗಳ ಕಾಲ ನಾಪತ್ತೆಯಾಗಿರಲಿಲ್ಲ. ಪಾಕಿಸ್ತಾನದಲ್ಲಿ ಆತ ಆರಾಮಾಗಿ ಓಡಾಡಿಕೊಂಡಿದ್ದ. ಆತನನ್ನು ಬಂಧಿಸಲು ಪಾಕಿಸ್ತಾನ ಯಾವುದೇ ಕ್ರಮವನ್ನೇ ತೆಗೆದುಕೊಂಡಿರಲಿಲ್ಲ.

ಡಿಸೆಂಬರ್ 2001, ಮೇ 2002, ಅಕ್ಟೋಬರ್ 2002, ಆಗಸ್ಟ್ 2006, ಡಿಸೆಂಬರ್ 2008 ಸೆಪ್ಟೆಂಬರ್ 2009, ಜನವರಿ 2017ರಲ್ಲಿಯೂ ಆತನನ್ನು ಬಂಧಿಸಲಾಗಿತ್ತು ಎಂದು ಸದನ ಸಮಿತಿ ಟ್ವೀಟ್ ಮಾಡಿದೆ.

US foreign affairs committee counters Trump tweet over Hafiz

ಸಯೀದ್ ಬಂಧನದ ಬಳಿಕ ಟ್ವೀಟ್ ಮಾಡಿದ್ದ ಟ್ರಂಪ್ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟ್‌ರ್ ಮೈಂಡ್‌ನನ್ನು ಹತ್ತು ವರ್ಷಗಳ ಶೋಧ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಬಂಧಿಸಿದೆ. ಕಳೆದ ಎರಡು ವರ್ಷದ ಒತ್ತಡವು ಕೆಲಸ ಮಾಡಿದೆ ಎಂದಿದ್ದರು.

ಈ ಟ್ವೀಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಫೀಜ್ ಸಯೀದ್ ಬಂಧನದ ಹಿಂದೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಕಠಿಣ ಕ್ರಮದ ಭೀತಿ ಇದೆ ಎನ್ನಲಾಗಿದೆ.

ಮುಂಬೈ ಟೆರರ್ ಅಟ್ಯಾಕ್ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನಮುಂಬೈ ಟೆರರ್ ಅಟ್ಯಾಕ್ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನ

ಎಫ್‌ಎಟಿಎಫ್‌ನಿಂದ ಕಪ್ಪು ಪಟ್ಟಿಗೆ ಸೇರುವ ಭಯದಲ್ಲಿ ತೋರ್ಪಡಿಕೆಗೆ ಪಾಕಿಸ್ತಾನ ಬಂಧಿಸಿದೆ ಎಂದು ಹೇಳಲಾಗುತ್ತಿದೆ. ಭಾರತವೂ ಕೂಡ ಇದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದು, ಹಫೀಜ್ ಸಯೀದ್ ಬಂಧನ ಕೇವಲ ತೋರ್ಗಾಣಿಕೆಯ ಆಗದಿರಲಿ ಎಂದು ಹೇಳಿತ್ತು. ಅಮೆರಿಕ ಸದನ ಸಮಿತಿಯು ಟ್ರಂಪ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಸಯೀದ್ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿತ್ತು.

ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಲಷ್ಕರ್-ಎ-ತೊಯಿಬಾ ಭಯೋತ್ಪಾದಕ ಸಂಘಟನೆಯ ಪ್ರಮುಖನಾಗಿದ್ದ ಈತ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ 23 ಪ್ರಕರಣಗಳನ್ನು ಎದುರಿಸುತ್ತಿದ್ದ. 26/11 ಯಾರಿಗೆ ತಾನೆ ನೆನಪಿಲ್ಲ ಹೇಳಿ, ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿ ನೂರಾರು ಮಂದಿ ಸಾವಿಗೆ ಕಾರಣವಾಗಿತ್ತು.

26/11 ಮುಂಬೈ ದಾಳಿ: ಪಾಕ್ ನ ಇಬ್ಬರು ಸೇನಾಧಿಕಾರಿ ವಿರುದ್ಧ ಜಾಮೀನುರಹಿತ ವಾರಂಟ್ ಭಾರತದ ವಿರುದ್ಧವಾಗಿ ಪಾಕಿಸ್ತಾನದಲ್ಲಿ ಹಲವು ಪ್ರತಿಭಟನೆಗಳಲ್ಲಿ ಈತ ಮುಕ್ತವಾಗಿ ಪಾಲ್ಗೊಳ್ಳುತ್ತಿದ್ದ.

ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಪಾಕಿಸ್ತಾನವು ಆತನ ಮೇಲೆ ಭಯೋತ್ಪಾದನೆ ಪ್ರಕರಣ ದಾಖಲಿಸಿತ್ತು. ಮುಂಬೈ ದಾಳಿ ನಡೆದು 10 ವರ್ಷ ಕಳೆದ ಸಂದರ್ಭದಲ್ಲಿ ಅಮೆರಿಕವು ಭಯೋತ್ಪಾದಕರನ್ನು ಬಂಧಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿತ್ತು.

2008ರ ನವೆಂಬರ್ 26ರಂದು ಪಾಕಿಸ್ತಾನ ಮೂಲದ ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದು ಅಲ್ಲದೆ ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬ್ ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವನ ಹಾಗು ಅಪಾರ ಆಸ್ತಿ-ಪಾಸ್ತಿ ನಷ್ಟಗಳಿಗೆ ಕಾರಣರಾದರು.

English summary
US foreign affairs committee counters America President Donald Trump tweet over Hafiz Saeed Arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X