ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಉಕ್ರೇನ್‌ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ಜಿಲ್ ಬೈಡನ್

|
Google Oneindia Kannada News

ವಾಷ್ಟಿಂಗ್ಟನ್, ಮೇ 08; ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಉಕ್ರೇನ್‌ಗೆ ಭೇಟಿ ನೀಡಿದರು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್‌ಗೆ ಅಮೆರಿಕ ನೆರವು ನೀಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಭಾನುವಾರ ಜಿಲ್ ಬೈಡನ್ ಉಕ್ರೇನ್‌ನ ನಿರಾಶ್ರಿತರು ವಾಸ್ತವ್ಯ ಹೂಡಿರುವ ಶಾಲೆಗಳಿಗೆ ಭೇಟಿ ನೀಡಿದರು. ಉಕ್ರೇನ್‌ ಅಧ್ಯಕ್ಷರ ಪತ್ನಿಯನ್ನು ಸಹ ಭೇಟಿ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

Breaking; ಉಕ್ರೇನ್‌ಗೆ ಮಿಲಿಟರಿ ನೆರವು ಘೋಷಿಸಿದ ಅಮೆರಿಕ Breaking; ಉಕ್ರೇನ್‌ಗೆ ಮಿಲಿಟರಿ ನೆರವು ಘೋಷಿಸಿದ ಅಮೆರಿಕ

ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಅಮೆರಿಕ ಉಕ್ರೇನ್‌ಗೆ ನೆರವು ನೀಡುತ್ತಿದೆ. ಕೆಲವು ದಿನಗಳ ಹಿಂದೆ ಸೇನಾ ನೆರವು ನೀಡುವುದಾಗಿಯೂ ಅಮೆರಿಕ ಘೋಷಣೆ ಮಾಡಿತ್ತು. ಪೆಂಟಗಾನ್‌ನ ಉನ್ನತ ಅಧಿಕಾರಿಗಳು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಸಹ ನೀಡಿದ್ದರು.

ರಷ್ಯನ್ ಯುದ್ಧೋಪಕರಣ ಖರೀದಿ ಭಾರತಕ್ಕೆ ಒಳಿತಲ್ಲ: ಅಮೆರಿಕ ಸಲಹೆ ರಷ್ಯನ್ ಯುದ್ಧೋಪಕರಣ ಖರೀದಿ ಭಾರತಕ್ಕೆ ಒಳಿತಲ್ಲ: ಅಮೆರಿಕ ಸಲಹೆ

US First Lady Jill Biden Visits Ukraine

ಜಿಲ್ ಬೈಡನ್ ಉಕ್ರೇನ್ ಭೇಟಿ ಬಗ್ಗೆ ಮಾತನಾಡಿದ್ದು, "ಇಂದಿನ ಸಮಯದಲ್ಲಿ ಯುದ್ಧ ನಿಲ್ಲಿಸುವುದು ಅತ್ಯಗತ್ಯವಾಗಿದೆ. ಈ ಕಠೋರ ಸನ್ನಿವೇಶದಲ್ಲಿ ಅಮೆರಿಕ ಸಂಕಷ್ಟದಲ್ಲಿರುವ ಉಕ್ರೇನ್ ಪ್ರಜೆಗಳ ಜೊತೆ ಇದೆ" ಎಂದು ಹೇಳಿದ್ದಾರೆ.

ಜಿಲ್ ಬೈಡನ್ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪತ್ನಿಯನ್ನು ಭೇಟಿ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

English summary
America first lady Jill Biden visited Ukraine on Sunday. She visited school and met Ukraine's first lady Olena Zelenska.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X