ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ವ್ಯಾಕ್ಸಿನ್ ಶಾಕ್, ‘ದೊಡ್ಡಣ್ಣ’ನಿಗೆ ಭಾರಿ ಮುಖಭಂಗ..?

|
Google Oneindia Kannada News

ನವೆಂಬರ್ 3ರ ಚುನಾವಣೆಗೂ ಮೊದಲೇ ಅಮೆರಿಕದ ನಾಗರಿಕರಿಗೆ ವ್ಯಾಕ್ಸಿನ್ ಲಭ್ಯವಾಗುವಂತೆ ಮಾಡುವ ಟ್ರಂಪ್ ಕನಸು ಭಗ್ನವಾಗಿದೆ. ಅಮೆರಿಕದ ಎಫ್‌ಡಿಎ (Food & Drug Administration) ನೂತನವಾಗಿ ಹೊರಡಿಸಿರುವ ನಿಯಮಾವಳಿ, ತರಾತುರಿಯಲ್ಲಿ ವ್ಯಾಕ್ಸಿನ್ ಘೋಷಿಸದಂತೆ ನಿರ್ಬಂಧ ವಿಧಿಸುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕದಲ್ಲಿ 7 ಮಿಲಿಯನ್‌ಗೂ ಹೆಚ್ಚು ಜನರಿಗೆ ಮಹಾಮಾರಿ ಕೊರೊನಾ ಕನ್ಫರ್ಮ್ ಆಗಿದೆ. ಅಲ್ಲದೆ ಸೋಂಕಿತರ ಪೈಕಿ 2 ಲಕ್ಷ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇಂತಹ ಹೊತ್ತಲ್ಲಿ ಯಾರ ಒತ್ತಡಕ್ಕೋ ಮಣಿದು, ತರಾತುರಿಯ ನಿರ್ಧಾರ ಕೈಗೊಳ್ಳುವುದು ಬೇಡ ಎಂಬುದು 'ಎಫ್‌ಡಿಎ' ನಿಲುವಾಗಿದೆ. ಆದರೆ ಇದು ಅಮೆರಿಕ ಅಧ್ಯಕ್ಷ ಟ್ರಂಪ್ ನಿಲುವಿಗೆ ವಿರುದ್ಧವಾಗಿರುವುದೇ ಕುತೂಹಲ ಕೆರಳಿಸಿದೆ. ಟ್ರಂಪ್ ಹೇಳಿದ ಮಾತಿಗೆ ಮರು ಮಾತನಾಡದೆ ಅಮೆರಿಕ ಸರ್ಕಾರದ ಬಹುತೇಕ ಇಲಾಖೆಗಳು ಕೆಲಸ ಮಾಡುತ್ತಿವೆ.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

ಆದರೆ ಇಂತಹ ಸಂದಿಗ್ಧ ಸಂದರ್ಭದಲ್ಲೂ ಟ್ರಂಪ್ ಮಾತನ್ನು ಪಕ್ಕಕ್ಕಿಟ್ಟು, 'ಎಫ್‌ಡಿಎ' ಈ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಹಾಗಾದರೆ 'ಎಫ್‌ಡಿಎ' ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣ ಏನು, ಅಕಸ್ಮಾತ್ ಲಸಿಕೆ ಅಥವಾ ವ್ಯಾಕ್ಸಿನ್ ರಿಯಾಕ್ಷನ್ ಉಂಟಾದರೆ ಎದುರಾಗುವ ಅಪಾಯಗಳು ಹೇಗಿರಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

‘ಈಗಲೇ ಎಡವಟ್ಟಾಗಿದೆ, ಮತ್ತೆ ಬೇಡ..!’

‘ಈಗಲೇ ಎಡವಟ್ಟಾಗಿದೆ, ಮತ್ತೆ ಬೇಡ..!’

ಅದು ಕೊರೊನಾ ಸೋಂಕು ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಸಮಯ. ಜಗತ್ತಿನ ಇತರ ದೇಶಗಳಲ್ಲಿ ನೂರು ಹೆಚ್ಚೆಂದರೆ ಇನ್ನೂರು ಹೊಸ ಕೇಸ್‌ಗಳು ನಿತ್ಯ ಪತ್ತೆಯಾಗುತ್ತಿದ್ದರೆ, ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹತ್ತಾರು ಸಾವಿರ ಕೇಸ್‌ಗಳು ಪ್ರತಿನಿತ್ಯ ಕನ್ಫರ್ಮ್ ಆಗುತ್ತಿದ್ದವು. ಯಾವುದೇ ಹಿಂಟ್ ಇಲ್ಲದೆ ಹೀಗೆ ವಕ್ಕರಿಸಿದ್ದ ಕೊರೊನಾ ಸೋಂಕಿನಿಂದ ಟ್ರಂಪ್ ಆಡಳಿತ ಜರ್ಜರಿತವಾಗಿತ್ತು. ಎಷ್ಟೋ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳೇ ಇಲ್ಲದ ಸ್ಥಿತಿ ಎದುರಾಗಿತ್ತು. ಇದು ಜಗತ್ತಿನ ಶಕ್ತಿಶಾಲಿ ರಾಷ್ಟ್ರದ ನಿಶ್ಯಕ್ತಿಯನ್ನು ಜಗತ್ತಿನ ಎದುರು ಬಟಾಬಯಲು ಮಾಡಿತ್ತು. ಆಗ ಹಿಂದೆ-ಮುಂದೆ ಯೋಚಿಸದೇ ಟ್ರಂಪ್ ಆಡಳಿತ ಸಿಕ್ಕ ಸಿಕ್ಕ ಔಷಧಗಳನ್ನೆಲ್ಲಾ ಜನರ ಮೇಲೆ ಪ್ರಯೋಗಿಸಿತ್ತು. ಅದರಲ್ಲೂ ಟ್ರಂಪ್ ಖುದ್ದು ವೈದ್ಯರಂತೆ ಕಂಡ, ಕಂಡ ಔಷಧಗಳನ್ನು ಸಜೆಸ್ಟ್ ಮಾಡುತ್ತಿದ್ದರು. ಇದರಿಂದಲೇ 2 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಬಲಿಯಾಗಿದ್ದು ಎಂಬ ಆರೋಪವಿದೆ. ಹೀಗಾಗಿ ಮತ್ತೊಮ್ಮೆ ಎಡವಿ ಬೀಳುವುದು ಬೇಡ ಅಂತಾ ‘ಎಫ್‌ಡಿಎ' ವ್ಯಾಕ್ಸಿನ್ ತರಾತುರಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಟ್ರಂಪ್ ಹೇಳಿದರೆ ನಾನು ಕೊರೊನಾ ವೈರಸ್ ಲಸಿಕೆ ತೆಗೆದುಕೊಳ್ಳೊಲ್ಲ: ಕಮಲಾ ಹ್ಯಾರಿಸ್ಟ್ರಂಪ್ ಹೇಳಿದರೆ ನಾನು ಕೊರೊನಾ ವೈರಸ್ ಲಸಿಕೆ ತೆಗೆದುಕೊಳ್ಳೊಲ್ಲ: ಕಮಲಾ ಹ್ಯಾರಿಸ್

ಟ್ರಂಪ್‌ಗೆ ಹಿನ್ನಡೆ ಹೇಗೆ..?

ಟ್ರಂಪ್‌ಗೆ ಹಿನ್ನಡೆ ಹೇಗೆ..?

ಹೌದು, ಈ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಆದರೆ ಅಮೆರಿಕದ ಇತಿಹಾಸ ತಿಳಿದವರಿಗೆ ಅಧ್ಯಕ್ಷರ ಪವರ್ ಎಂತಹದ್ದು ಎಂಬುದು ತಿಳಿದಿರುತ್ತದೆ. ಅಷ್ಟು ಶಕ್ತಿಶಾಲಿ ಮನುಷ್ಯನ ಮಾತಿಗೆ ಈಗ ಬೆಲೆಯೇ ಇಲ್ಲವಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಟ್ರಂಪ್ ಈ ಮೊದಲಿನಿಂದಲೂ 2020ರ ಒಳಗೆ ವ್ಯಾಕ್ಸಿನ್ ಸಿಗುತ್ತದೆ ಎಂಬ ಭರವಸೆ ನೀಡುತ್ತಾ ಬಂದಿದ್ದರು. ಅದರಲ್ಲೂ ನವೆಂಬರ್‌ 3ರಂದೇ ಚುನಾವಣೆ ನಡೆಯುವುದು ಪಕ್ಕಾ ಆಗುತ್ತಿದ್ದಂತೆ, ವ್ಯಾಕ್ಸಿನ್ ವಿಚಾರವನ್ನೇ ಅಸ್ತ್ರ ಮಾಡಿಕೊಂಡು ಮತಬೇಟೆಗೆ ಇಳಿದಿದ್ದರು. ಅದೆಲ್ಲಾ ಈಗ ಠುಸ್ ಪಟಾಕಿ ಆಗಿದೆ. ಎಫ್‌ಡಿಎ (Food & Drug Administration) ನೇರಾನೇರ ಟ್ರಂಪ್ ಮಹದಾಸೆಗೆ ಕೊಳ್ಳಿ ಇಟ್ಟಿದೆ. ಆದರೆ ಎಫ್‌ಡಿಎ ನಿರ್ಧಾರದ ಬಗ್ಗೆ ಟ್ರಂಪ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

<br />ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ
ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ವ್ಯಾಕ್ಸಿನ್ ರಿಯಾಕ್ಟ್ ಆದರೆ ಖತಂ..!

ವ್ಯಾಕ್ಸಿನ್ ರಿಯಾಕ್ಟ್ ಆದರೆ ಖತಂ..!

ಲಸಿಕೆಗಳು ಔಷಧಿಗಿಂತ ಭಿನ್ನ, ಹೀಗಾಗಿಯೇ ಒಂದು ಹೊಸ ಲಸಿಕೆ ಮಾರುಕಟ್ಟೆಗೆ ಬರಬೇಕು ಎಂದರೆ ಹಲವು ವರ್ಷಗಳೇ ಬೇಕಾಗಬಹುದು. ಹೊಸ ಹೊಸ ವೈರಸ್‌ಗಳು ಉದಯವಾದಂತೆ, ಹೊಸ ಲಸಿಕೆಗಳ ಪ್ರಯೋಗ ನಡೆಯುತ್ತಲೇ ಬಂದಿದೆ. ಇದಕ್ಕೆ ‘ಕೊರೊನಾ'ಗಿಂತ ಹಿಂದೆ ಹಲವು ಉದಾಹರಣೆ ಸಿಗುತ್ತವೆ. ಈ ಪೈಕಿ ಡೆಡ್ಲಿ ಎಬೋಲಾ ಇಡೀ ಆಫ್ರಿಕಾ ಖಂಡವನ್ನ ನಡುಗಿಸಿತ್ತು. ಆದರೆ ಈ ಸೋಂಕಿಗೆ ಲಸಿಕೆ ಬರಲು ಹಲವು ವರ್ಷವೇ ಬೇಕಾಯಿತು. ಸತತ ಪರಿಶ್ರಮಗಳ ಫಲವಾಗಿ ಕಡೆಗೂ 2019ರ ಡಿಸೆಂಬರ್ 19ರಂದು ಎಬೋಲಾ ಸೋಂಕಿಗೆ ಲಸಿಕೆ ಸಿಕ್ಕಿತ್ತು. ಹೀಗೆ ಹೊಸದೊಂದು ವ್ಯಾಕ್ಸಿನ್ ಸಂಶೋಧನೆ ಮಾಡಿದ ನಂತರ ಅದರ ಬಳಕೆಗೂ ಮೊದಲು ಹಲವು ಸುತ್ತಿನ ಪರೀಕ್ಷೆ ನಡೆಯಬೇಕಿದೆ. ಏಕೆಂದರೆ ದೇಹಪ್ರಕೃತಿ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಈ ಪ್ರಯೋಗಗಳಿಗೆ ವರ್ಷಗಳೇ ಹಿಡಿಯುತ್ತವೆ. ಈಗ ಕೊರೊನಾ ವಿಚಾರದಲ್ಲಿ ಆಗುತ್ತಿರುವುದೂ ಇದೇ.

ಟ್ರಂಪ್‌ಗೆ ಕೊರೊನಾ: ನಿಂತು ಹೋಗುತ್ತಾ ಅಮೆರಿಕ ಅಧ್ಯಕ್ಷೀಯ ಚುನಾವಣೆ..?ಟ್ರಂಪ್‌ಗೆ ಕೊರೊನಾ: ನಿಂತು ಹೋಗುತ್ತಾ ಅಮೆರಿಕ ಅಧ್ಯಕ್ಷೀಯ ಚುನಾವಣೆ..?

ಹಾಗಾದರೆ ‘ಕೊರೊನಾ’ಗೆ ಲಸಿಕೆ ಸಿಗೋದಿಲ್ವಾ..?

ಹಾಗಾದರೆ ‘ಕೊರೊನಾ’ಗೆ ಲಸಿಕೆ ಸಿಗೋದಿಲ್ವಾ..?

ಈ ಭಯ ಯಾರಿಗೂ ಬೇಡ. ಏಕೆಂದರೆ ಈಗಾಗಲೇ ಹಲವು ಮಾರಣಾಂತಿಕ ಸೋಂಕುಗಳಿಗೆ ಲಸಿಕೆ ಬಂದಿದೆ. ಈವರೆಗೂ ಅತಿ ಮಾರಣಾಂತಿಕ, ಪ್ರತಿವರ್ಷ ಕೋಟ್ಯಂತರ ಜನರನ್ನ ಬಲಿಪಡೆಯುವ ಹೆಚ್‌ಐವಿ (HIV)ಗೂ ಲಸಿಕೆ ಹೊರಬರುವ ಸಾಧ್ಯತೆ ಇದೆ. ಈಗಾಗಲೇ ಕೆಲವರು ‘ಏಡ್ಸ್'ನಿಂದ ಗುಣಮುಖರಾಗಿರುವ ಉದಾಹರಣೆ ಕೂಡ ಇದೆ. ಇದಕ್ಕೂ ಮೊದಲೂ ಪೋಲಿಯೋ, ಸ್ಪೇನ್ ಫ್ಲೂ, ರೇಬಿಸ್ ರೀತಿ ಭಯಾನಕ ವೈರಸ್‌ಗಳಿಗೂ ಮದ್ದು ಸಿಕ್ಕಿತ್ತು. ಈಗ ಕೊರೊನಾ ಸೋಂಕಿಗೂ ವ್ಯಾಕ್ಸಿನ್ ಸಿಕ್ಕೇ ಸಿಗುತ್ತದೆ. ಆದರೆ ಇದಕ್ಕೆ ಒಂದಷ್ಟು ಸಮಯ ಬೇಕಾಗಬಹುದು ಅಷ್ಟೇ. ಪ್ರತಿಯೊಂದು ಪರೀಕ್ಷೆಗಳೂ ಪರಿಪೂರ್ಣವಾಗಿ ನಡೆಯದ ಹೊರತಾಗಿ ವ್ಯಾಕ್ಸಿನ್ ಹೊರತರಲು ಸಾಧ್ಯವಿಲ್ಲ. ಹಾಗೆ ತರಾತುರಿಯಲ್ಲಿ ವ್ಯಾಕ್ಸಿನ್ ಹೊರತಂದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಒಂದಷ್ಟು ಸಮಯದಲ್ಲಿ ಕೊರೊನಾ ಸೋಂಕಿಗೂ ವ್ಯಾಕ್ಸಿನ್ ಲಭ್ಯವಾಗುವ ಸಾಧ್ಯತೆ ಇದೆ.

ಅಮೆರಿಕನ್ನರಿಗೆ ಕಾಡುತ್ತಿರುವ ಭಯ ಯಾವುದು..?

ಅಮೆರಿಕನ್ನರಿಗೆ ಕಾಡುತ್ತಿರುವ ಭಯ ಯಾವುದು..?

ಚಳಿಗಾಲ ಹತ್ತಿರವಾಗಿದೆ. ಭಾರತೀಯರು ಕೂಡ ಕಂಬಳಿ ಸಿದ್ಧ ಮಾಡುತ್ತಿದ್ದಾರೆ. ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶದಿಂದ ದೂರವಿರುವ ಭರತ ಭೂಮಿಯಲ್ಲೇ ಆ ಪಾಟಿ ಚಳಿ ಕೊರೆಯುವಾಗ, ಉತ್ತರ ಧ್ರುವಕ್ಕೆ ತೀರಾ ಹತ್ತಿರದಲ್ಲಿರುವ ಅಮೆರಿಕ ಎಂಬ ದೈತ್ಯ ದೇಶಕ್ಕೆ ಭಯ ಕಾಡದೇ ಇರದು. ಅಮೆರಿಕದ ಹಲವು ಪ್ರದೇಶಗಳಲ್ಲಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಉಷ್ಣಾಂಶ ಮೈನಸ್‌ ಡಿಗ್ರಿಗೆ ಕುಸಿಯಲಿದೆ. ಇಂತಹ ವಾತಾವರಣ ವೈರಸ್ ಬೆಳವಣಿಗೆ, ಹರಡುವಿಕೆ ಸುಲಭ. ಕೊರೊನಾ ಸಾಂಕ್ರಾಮಿಕ ರೋಗವಾಗಿರುವ ಹಿನ್ನೆಲೆ ಅಮೆರಿಕನ್ನರು ಈಗಲೇ ನಡುಗುತ್ತಿದ್ದಾರೆ. ಏಕೆಂದರೆ ಇನ್ನೆರಡು ತಿಂಗಳಲ್ಲಿ ಅಮೆರಿಕದ ಸ್ಥಿತಿ ಮತ್ತಷ್ಟು ಭಯಾನಕವಾಗುವ ಸಾಧ್ಯತೆ ಇದೆ. ಚಳಿಯಲ್ಲಿ ಕೊರೊನಾ ಮತ್ತಷ್ಟು ಲಕ್ಷ ಅಥವಾ ಕೋಟಿ ಅಮೆರಿಕನ್ನರಿಗೆ ತಗುಲುವ ಆತಂಕ ಕಾಡುತ್ತಿದೆ.

‘ಎಫ್‌ಡಿಎ’ ಗಟ್ಟಿ ನಿರ್ಧಾರ ಏಕೆ..?

‘ಎಫ್‌ಡಿಎ’ ಗಟ್ಟಿ ನಿರ್ಧಾರ ಏಕೆ..?

ಯಾವುದೇ ವಿಚಾರದಲ್ಲಿ ತಮಾಷೆ ಮಾಡಿದರೂ ಹಂಗೋ, ಹಿಂಗೋ ನಡೆಯುತ್ತೆ ಬಿಡಿ. ಆದ್ರೆ ಔಷಧ ಹಾಗೂ ಲಸಿಕೆ ವಿಚಾರದಲ್ಲಿ ಮೈಮರೆತರೆ ಪ್ರಾಣ ಕುತ್ತು ಪಕ್ಕಾ. ಹೀಗಾಗಿ ಕೊರೊನಾ ಓಡಿಸುವ ಅವಸರದಲ್ಲಿ ಸಿಕ್ಕ ಸಿಕ್ಕ ಲಸಿಕೆಯನ್ನು ನೀಡಿದರೆ ಅಮೆರಿಕನ್ನರಲ್ಲಿ ರಿಯಾಕ್ಷನ್ ಉಂಟಾಗಿ, ಮತ್ತಷ್ಟು ಸಾವು-ನೋವಿಗೆ ಕಾರಣವಾಗುವ ಸಂಭವ ಹೆಚ್ಚು. ಇದೆಲ್ಲದರ ಹೊರತಾಗಿ ಮತ್ತೊಂದು ರೋಗಕ್ಕೂ ಈ ವ್ಯಾಕ್ಸಿನ್ ರಿಯಾಕ್ಷನ್ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಅಮೆರಿಕದ ಎಫ್‌ಡಿಎ ‘ತಾಳಿದವನು ಬಾಳಿಯಾನು' ಎಂಬ ಮಾತು ಪಾಲಿಸುತ್ತಿದೆ.

English summary
The US Food and Drug Administration is set to slowdown the use of corona vaccine. FDA would like to examine the vaccine very well before approving the use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X