ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ರೆಮ್ಡೆಸಿವಿರ್ ಬಳಕೆಗೆ ಅನುಮತಿ ನೀಡಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 23: ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಂಟಿ ವೈರಲ್ ಔ‍ಷಧ ರೆಮ್ಡೆಸಿವಿರ್ ನೀಡಲು ಅಮೆರಿಕ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಗುರುವಾರ ಸಂಪೂರ್ಣ ಅನುಮತಿ ನೀಡಿದೆ.

ರೆಮ್ಡೆಸಿವಿರ್ ನೀಡಲು ಮೇ ತಿಂಗಳಲ್ಲಿ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಗಿಲೀಡ್ ಸೈನ್ಸಸ್ ಸಂಸ್ಥೆಯ ರೆಮ್ಡಿಸಿವಿರ್ ಬಳಸಲು ಅನುಮೋದನೆ ನೀಡಿದ್ದು, ಇದು ಅಮೆರಿಕದಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಔಪಚಾರಿಕ ಒಪ್ಪಿಗೆ ಪಡೆದ ಮೊದಲ ಔಷಧವಾಗಿದೆ.

ಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವುಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವು

ತುರ್ತು ಬಳಕೆಗೆ ರೆಮ್ಡೆಸಿವಿರ್ ಬಳಸುವ ಅಧಿಕಾರವನ್ನು ಈಗ ವಿಸ್ತರಿಸಲಾಗಿದೆ. ಮೇ ತಿಂಗಳಿನಿಂದ ದೇಶದಾದ್ಯಂತ ಕೊರೊನಾ ವೈರಸ್ ಚಿಕಿತ್ಸೆಯ ತುರ್ತು ಬಳಕೆಗೆ ಮಾತ್ರವೇ ಇದನ್ನು ಬಳಸಲಾಗುತ್ತಿತ್ತು. ಈ ತಿಂಗಳ ಆರಂಭದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ರೆಮ್ಡಿಸಿವಿರ್ ನೀಡಲಾಗಿತ್ತು.

US FDA Gives Full Approval To Antiviral Drug Remdesivir To Treat Coronavirus

ವೆಕ್ಲುರಿ ಬ್ರ್ಯಾಂಡ್ ಹೆಸರಿನ ಅಡಿಯಲ್ಲಿ ಮಾರಾಟವಾಗುತ್ತಿರುವ ರೆಮ್ಡೆಸಿವಿರ್ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿರುವುದರಿಂದ ಈ ಬ್ರ್ಯಾಂಡ್ ಅನ್ನು ಮಾತ್ರವೇ ಬಳಸಲು ಅವಕಾಶ ನೀಡಲಾಗಿದೆ. 'ಅಮೆರಿಕದಲ್ಲಿ ಕೋವಿಡ್ ಚಿಕಿತ್ಸೆಗೆ ಅನುಮೋದನೆ ಪಡೆದ ಮೊದಲ ಹಾಗೂ ಏಕೈಕ ಔಷಧ ವೆಕ್ಲುರಿ' ಎಂದು ಗಿಲೀಡ್ ಹೇಳಿಕೆ ತಿಳಿಸಿದೆ.

ವ್ಯಕ್ತಿಯ ಸಾವಿನ ಬಳಿಕವೂ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಮುಂದುವರಿಕೆವ್ಯಕ್ತಿಯ ಸಾವಿನ ಬಳಿಕವೂ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಮುಂದುವರಿಕೆ

ಈ ಔಷಧವು ಕೋವಿಡ್ ಮರಣ ಪ್ರಮಾಣವನ್ನು ತಗ್ಗಿಸುತ್ತದೆ ಎನ್ನುವುದು ಸಾಬೀತಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಪ್ರಯೋಗಗಳಲ್ಲಿ ರೆಮ್ಡೆಸಿವಿರ್ ಮರಣಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವನ್ನು ಗಿಲೀಡ್ ಟೀಕಿಸಿದೆ.

Recommended Video

IPL ನಂತ್ರ ಆಟಗಾರರು ಕ್ವಾರಂಟೈನ್ ಫಿಕ್ಸ್ | Oneindia Kannada

English summary
US Food and Drug Administration granted full approval to treat antiviral drug remdesivir to treat covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X