ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಿಂದ ಸೌದಿಯ 21 ಸೇನಾ ತರಬೇತಿ ಅಭ್ಯರ್ಥಿಗಳ ಗಡಿಪಾರು

|
Google Oneindia Kannada News

ವಾಷಿಂಗ್ಟನ್, ಜನವರಿ 14: ಡಿಸೆಂಬರ್‌ನಲ್ಲಿ ಫ್ಲಾರಿಡಾದಲ್ಲಿನ ನೌಕಾ ನೆಲೆಯಲ್ಲಿ ಸೌದಿಯ ವಾಯುಪಡೆಯ ಅಧಿಕಾರಿ ಮೂವರು ಅಮೆರಿಕರನ್ನು ಹತ್ಯೆ ಮಾಡಿದ ಘಟನೆಯು 'ಭಯೋತ್ಪಾದನೆಯ ಕೃತ್ಯ' ಎಂದು ವ್ಯಾಖ್ಯಾನಿಸಿರುವ ಅಮೆರಿಕದ ಅಟಾರ್ನಿ ಜನರಲ್ ವಿಲಿಯಮ್ ಬಾರ್, ಈ ಘಟನೆಯ ಹಿನ್ನೆಲೆಯಲ್ಲಿ 21 ತರಬೇತಿ ನಿರತ ಸೌದಿ ಸೇನಾ ವಿದ್ಯಾರ್ಥಿಗಳನ್ನು ದೇಶದಿಂದ ಹೊರಹಾಕುವುದಾಗಿ ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಅಮೆರಿಕದ ಈ ನಿರ್ಧಾರ ಸೌದಿ ಅರೇಬಿಯಾದ ಜತೆಗಿನ ಸಂಬಂಧದಲ್ಲಿ ಕೂಡ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.

ಅಮೆರಿಕಾ-ಇರಾನ್ ನಡುವೆ ಉರಿಯುವ ಬೆಂಕಿಗೆ ಕಮಾಂಡರ್ ತುಪ್ಪ?ಅಮೆರಿಕಾ-ಇರಾನ್ ನಡುವೆ ಉರಿಯುವ ಬೆಂಕಿಗೆ ಕಮಾಂಡರ್ ತುಪ್ಪ?

ಡಿ.6ರಂದು ಫ್ಲೋರಿಡಾದ ಪೆನ್ಸಕೋಲಾದಲ್ಲಿ ಸೌದಿ ವಾಯುಪಡೆಯ ಸೆಕೆಂಡ್ ಲೆಫ್ಟಿನೆಂಟ್ ಜನರಲ್ ಮಹಮ್ಮದ್ ಸಯೀದ್ ಅಲ್ಶಮ್ರಾನಿ (21), ಅಮೆರಿಕದ ಮೂವರು ನಾವಿಕರನ್ನು ಗುಂಡಿಕ್ಕಿ ಸಾಯಿಸಿದ್ದರು. ಇತರೆ ಎಂಟು ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ತನಿಖೆ ನಡೆಸಿತ್ತು.

US Expel 21 Saudi Cadets After Florida Naval Base Shooting

'ಇದು ಭಯೋತ್ಪಾದನೆಯ ಕೃತ್ಯವಾಗಿದೆ. ಗುಂಡು ಹಾರಿಸಿದ ಅಧಿಕಾರಿಯು ಜಿಹಾದಿ ಸಿದ್ಧಾಂತಗಳಿಂದ ಪ್ರೇರಣೆಗೊಂಡಿದ್ದರು ಎಂಬುದನ್ನು ಪುರಾವೆಗಳು ತಿಳಿಸಿವೆ. 'ಕ್ಷಣಗಣನೆ ಆರಂಭವಾಗಿದೆ' ಎಂದು ಆತ ಸೆ.11ರಂದು ಸಂದೇಶ ರವಾನಿಸಿದ್ದು ಗೊತ್ತಾಗಿದೆ' ಎಂದು ಬಾರ್ ಹೇಳಿದ್ದಾರೆ.

ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್

ಆದರೆ ಈ ಘಟನೆಗೂ ಉಳಿದ 21 ತರಬೇತಿ ನಿರತ ಸಿಬ್ಬಂದಿಗೂ ಸಂಬಂಧವಿಲ್ಲ. ಅವರಿಗೆ ಇದರ ಬಗ್ಗೆ ಅರಿವೂ ಇರಲಿಲ್ಲ. ಆದರೂ ಅವರು ಸಾಮಾಜಿಕ ಮಾಧ್ಯಮಗಳ ಪುಟಗಳಲ್ಲಿ ಜಿಹಾದಿ ಪರ ಅಥವಾ ಅಮೆರಿಕ ವಿರೋಧಿ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಶಿಶು ಲೈಂಗಿಕತೆಯ ಚಟುವಟಿಕೆಗಳೊಂದಿಗೆ ನಂಟು ಹೊಂದಿದ್ದರು. ಈ ಕಾರಣದಿಂದ ಅವರನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

English summary
US decided to sent 21 Saudi military cadets back to home after an investigation into shooting of three americans by a Saudi officer at Florida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X