ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಮಾಜಿ ಸಲಹೆಗಾರನ ಟ್ವಿಟ್ಟರ್ ಖಾತೆ ಅಮಾನತು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮುಖ್ಯ ಕಾರ್ಯತಂತ್ರ ನಿರೂಪಕ ಸ್ಟೀವ್ ಬೆನಾನ್ ಅವರ ಖಾತೆಯನ್ನು ಟ್ವಿಟ್ಟನ್ ಅಮಾನತುಗೊಳಿಸಿದೆ. ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಮತ್ತು ಸರ್ಕಾರ ಪ್ರಮುಖ ಪಿಡುಗು ಪರಿಣತ ಡಾ. ಆಂಥೋಣಿ ಫೌಸಿ ಅವರ ಶಿರಚ್ಛೇದ ಮಾಡುವಂತೆ ಯೂಟ್ಯೂಬ್ ವಿಡಿಯೋದಲ್ಲಿ ಕರೆ ನೀಡಿದ್ದ ಕಾರಣಕ್ಕಾಗಿ ಟ್ವಿಟ್ಟರ್ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಸ್ಟೀವ್ ಬೆನಾನ್ ಅವರ ಯೂಟ್ಯೂಬ್ ವಿಡಿಯೋವನ್ನು ಕೂಡ ತೆಗೆದುಹಾಕಲಾಗಿದೆ.

ಟ್ರಂಪ್ ಅವರು ಕಾಲ್ಪನಿಕ ಎರಡನೆಯ ಅವಧಿ ಅಧ್ಯಕ್ಷಗಿರಿಯಲ್ಲಿ ಏನು ಮಾಡಬೇಕು ಎಂಬ ಚರ್ಚೆಯ ವೇಳೆ ಸಹ ನಿರೂಪಕ ಜ್ಯಾಕ್ ಮ್ಯಾಕ್ಸಿ ಅವರೊಂದಿಗೆ ಮಾತನಾಡಿದ ಸ್ಟೀವ್ ಬೆನಾನ್, ವ್ರೇ ಮತ್ತು ಫೌಸಿ ಅವರ ಹೆಸರು ಉಲ್ಲೇಖಿಸಿದ್ದರು.

11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಬಾಲಕಿ ಗ್ರೆಟಾ11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಬಾಲಕಿ ಗ್ರೆಟಾ

'ನಾನು ವಾಸ್ತವವಾಗಿ ಟ್ಯುಡೊರ್ ಇಂಗ್ಲೆಂಡ್‌ನ ಹಳೆಯ ದಿನಗಳಿಗೆ ವಾಪಸ್ ಹೋಗಲು ಬಯಸಿದ್ದೇನೆ. ಈಟಿಯ ತುದಿಗಳಲ್ಲಿ ಅವರ ತಲೆಗಳನ್ನು ಸಿಕ್ಕಿಸಿ ಶ್ವೇತಭವನದ ಎರಡು ಮೂಲೆಗಳಲ್ಲಿ ಫೆಡರಲ್ ಅಧಿಕಾರಿಗಳಿಗೆ ಎಚ್ಚರಿಕೆಯೆಂಬಂತೆ ಇರಿಸುತ್ತೇನೆ' ಎಂದು ಅವರು ಹೇಳಿಕೆ ನೀಡಿದ್ದರು.

US Elections: Twitter Suspends Former Trump Advisor Steve Bannon

ಚುನಾವಣೆ ಅಕ್ರಮ ಎಂದ ಟ್ರಂಪ್: ಸುದ್ದಿಗೋಷ್ಠಿ ಬಹಿಷ್ಕರಿಸಿದ ಮಾಧ್ಯಮಗಳು ಚುನಾವಣೆ ಅಕ್ರಮ ಎಂದ ಟ್ರಂಪ್: ಸುದ್ದಿಗೋಷ್ಠಿ ಬಹಿಷ್ಕರಿಸಿದ ಮಾಧ್ಯಮಗಳು

ಹಿಂಸಾಚಾರವನ್ನು ವೈಭವೀಕರಿಸುವರ ವಿರುದ್ಧದ ತಮ್ಮ ನಿಯಮಗಳನ್ನು ಉಲ್ಲಂಘಿಸಿದ್ದಾಗಿ ಸ್ಟೀವ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿರುವುದಾಗಿ ಟ್ವಿಟ್ಟರ್ ಸಂಸ್ಥೆ ಸ್ಪಷ್ಟಪಡಿಸಿದೆ. ಇದರ ಅರ್ಥ ಅವರು ಮನವಿ ಸಲ್ಲಿಸಿ ತಮ್ಮ ಖಾತೆಯನ್ನು ಮರಳಿಪಡೆಯಲು ಅವಕಾಶವಿದೆಯೇ ವಿನಾ, ಅವರ ಖಾತೆ ಸ್ವಯಂಚಾಲಿತವಾಗಿ ಪುನಃ ಸಕ್ರಿಯವಾಗುವುದಿಲ್ಲ.

120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ

ಯೂಟ್ಯೂಬ್ ಕೂಡ ಸ್ಟೀವ್ ಬೆನಾನ್ ವಾರ್ ರೂಮ್ ಚಾನೆಲ್ ನಿಂದ ಈ ವಿಡಿಯೋವನ್ನು ಅಳಿಸಿಹಾಕಿದೆ. ಹಿಂಸಾಚಾರವನ್ನು ಅನುಮೋದಿಸುವುದರ ವಿರುದ್ಧ ನಮ್ಮ ನಿಯಮವನ್ನು ಈ ವಿಡಿಯೋ ಉಲ್ಲಂಘಿಸಿದೆ ಎಂದು ಯೂಟ್ಯೂಬ್ ತಿಳಿಸಿದೆ.

English summary
US Elections:Twitter has suspended former Donald Trump advisor Steve Bannon and Youtube removed video of him calling beheading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X