ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ಗೆ 'ಕಪ್ಪು ವರ್ಣೀಯ'ರ ಬೆಂಬಲ: ನಕಲಿ ಟ್ವಿಟ್ಟರ್ ಖಾತೆಗಳ ರದ್ದು

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮರು ಆಯ್ಕೆಗಾಗಿ ನಡೆಸುತ್ತಿರುವ ಪ್ರಚಾರಕ್ಕಾಗಿ ಸೃಷ್ಟಿಯಾದ ಟ್ರಂಪ್ ಅವರ 'ಕಪ್ಪು' ಬೆಂಬಲಿಗರ ನೂರಾರು ಖಾತೆಗಳನ್ನು ಅಮಾನತುಗೊಳಿಸಿರುವುದಾಗಿ ಟ್ವಿಟ್ಟರ್ ತಿಳಿಸಿದೆ.

ಸ್ಪ್ಯಾಮ್ ಮತ್ತು ಪ್ಲಾಟ್‌ಫಾರ್ಮ್‌ನ ದುರುಪಯೋಗದ ಕುರಿತಾದ ತನ್ನ ನಿಯಮಗಳನ್ನು ಈ ಖಾತೆಗಳು ಉಲ್ಲಂಘನೆ ಮಾಡಿವೆ ಎಂದು ಟ್ವಿಟ್ಟರ್ ತಿಳಿಸಿದೆ.

ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?

'ಈ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ನಮ್ಮ ತಂಡಗಳು ಸತತವಾಗಿ ಕೆಲಸ ನಿರ್ವಹಿಸುತ್ತಿವೆ. ಯಾವುದೇ ಟ್ವೀಟ್‌ಗಳು ನಿಯಮಾವಳಿಯ ಉಲ್ಲಂಘನೆಯಂತೆ ಕಂಡುಬಂದರೆ ಟ್ವಿಟ್ಟರ್ ನಿಯಮಗಳಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವಿಟ್ಟರ್‌ನ ವಕ್ತಾರರು ತಿಳಿಸಿದ್ದಾರೆ.

US Elections: Twitter Suspends Fake Accounts Of Black Supporters Of Donald Trump

ಶನಿವಾರದಿಂದ ಟ್ವಿಟ್ಟರ್ ಖಾತೆಗಳನ್ನು ಪರಿಶೀಲಿಸುತ್ತಿದ್ದು, ಇದುವರೆಗೂ 24ಕ್ಕೂ ಹೆಚ್ಚು ಖಾತೆಗಳಿಂದ 2,65,000 ರೀಟ್ವೀಟ್ ಅಥವಾ ಟ್ವಿಟ್ಟರ್ ಮೆನ್ಷನ್‌ಗಳನ್ನು ಕಂಡುಕೊಂಡಿರುವುದಾಗಿ ಕ್ಲೆಮ್ಸನ್ ವಿಶ್ವವಿದ್ಯಾಲಯದ ಸಾಮಾಜಿಕ ಮಾಧ್ಯಮ ಸಂಶೋಧಕ ಡರೆನ್ ಲಿನ್ವಿಲ್ ತಿಳಿಸಿದ್ದಾರೆ.

ಈ ಖಾತೆಗಳು ಹತ್ತಾರು ಸಾವಿರ ಫಾಲೋವರ್‌ಗಳನ್ನು ಪಡೆದುಕೊಂಡಿವೆ. ಅಮಾನತ್ತಾದ ಖಾತೆಗಳು ನೈಜ ವ್ಯಕ್ತಿಗಳ ಫೋಟೊಗಳನ್ನು ಬಳಸಿಕೊಂಡಿವೆ. ಇದರಲ್ಲಿ ಟ್ರಂಪ್ ಜತೆಗೆ ಕಪ್ಪು ವರ್ಣೀಯ ಜನರು ಇದ್ದಾರೆ ಎಂಬ ಸಂದೇಶಗಳನ್ನು ಹಂಚಿಕೊಳ್ಳಲಾಗಿದೆ. 'ಹೌದು ನಾನು ಕಪ್ಪು ವರ್ಣೀಯ. ನಾನು ಟ್ರಂಪ್ ಅವರಿಗೆ ಮತ ಹಾಕುತ್ತಿದ್ದೇನೆ' ಎಂಬಂತಹ ಸಾಲುಗಳನ್ನು ಬರೆಯಲಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯೋದೆ ಡೌಟ್..?ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯೋದೆ ಡೌಟ್..?

ಈ ಖಾತೆಗಳು ಅಮಾನತ್ತಾಗುವ ಮುನ್ನ ಸಾವಿರಾರು ಟ್ವಿಟ್ಟರಿಗರನ್ನು ಸೆಳೆದಿದ್ದವು. ಈ ಖಾತೆಗಳು ಕೆಲವೊಮ್ಮೆ ಸೇನೆಯ ಹಿರಿಯರು ಅಥವಾ ಜನಪ್ರತಿಧಿಗಳಿಗೆ ಸೇರಿದ್ದು ಎಂದು ಬಿಂಬಿಸಲಾಗಿದ್ದವು ಎಂದು ಟ್ವಿಟ್ಟರ್ ತಿಳಿಸಿದೆ.

English summary
US Elections 2020: Twitter has said it suspended a number of fake accounts that claimed to be black supporters of Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X