ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: ಕೊನೆಯ ಚರ್ಚೆಯಲ್ಲಿ ಅಭ್ಯರ್ಥಿಗಳ ವಾಗ್ವಾದ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 23: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು 12 ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅವರ ಪ್ರತಿಸ್ಪರ್ಧಿ ಜೋ ಬಿಡೆನ್ ಕೊನೆಯ ಸಂವಾದದಲ್ಲಿ ಮುಖಾಮುಖಿಯಾಗಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಮುಖಾಮುಖಿ ವಾಗ್ದಾಳಿ ನಡೆಸಿರುವ ಟ್ರಂಪ್ ಮತ್ತು ಬಿಡೆನ್, ನಾಶ್ವಿಲ್ಲೆಯಲ್ಲಿ ಕೊನೆಯ ಹಂತದ ಪ್ರಚಾರ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ಡೊನಾಲ್ಡ್ ಟ್ರಂಪ್ ನಿಭಾಯಿಸಿದ ಬಗೆಯನ್ನು ದಾಳವಾಗಿ ಪ್ರಯೋಗಿಸಿರುವ ಬಿಡೆನ್, ವೈರಸ್ ಹೆಚ್ಚು ದಿನ ಇರುವುದಿಲ್ಲ ಎಂಬ ಟ್ರಂಪ್ ಹೇಳಿಕೆಯನ್ನು ನೆನಪಿಸಿದ್ದಾರೆ. ಚಳಿಗಾಲದಲ್ಲಿ ದೇಶವು ಅತ್ಯಂತ ಸಂಕಷ್ಟಮಯ ಸನ್ನಿವೇಶಕ್ಕೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಚೀನಾ ಪರ ನಿಂತಿದ್ದಾರೆ, ಒಬಾಮಾ ಗಂಭೀರ ಆರೋಪಟ್ರಂಪ್ ಚೀನಾ ಪರ ನಿಂತಿದ್ದಾರೆ, ಒಬಾಮಾ ಗಂಭೀರ ಆರೋಪ

ಅಮೆರಿಕದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇಷ್ಟೊಂದು ಸಾವುಗಳು ಸಂಭವಿಸಿರುವುದಕ್ಕೆ ಅಧ್ಯಕ್ಷರ ಹೊರತು ಬೇರಾರೂ ಕಾರಣರಲ್ಲ ಎಂದು ಬಿಡೆನ್ ವಾಗ್ದಾಳಿ ನಡೆಸಿದ್ದಾರೆ.

US Elections: Trump And Biden Go After Each Other On Covid-19 In Final Pre Election Debate

ದೇಶದ ಅತ್ಯಂತ ದೊಡ್ಡ ಆರೋಗ್ಯ ಬಿಕ್ಕಟ್ಟನ್ನು ತಮ್ಮ ಆಡಳಿತ ನಿಭಾಯಿಸಿದ ಬಗೆಯನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಸೋಂಕು ಹೆಚ್ಚಳವಾಗಿ ಇನ್ನಷ್ಟು ಮಂದಿ ಬಲಿಯಾಗುತ್ತಾರೆ ಎಂಬ ಬಿಡೆನ್ ಎಚ್ಚರಿಕೆಯನ್ನು ತಳ್ಳಿಹಾಕಿದ ಅವರು, ಕೆಲವು ವಾರಗಳಲ್ಲಿಯೇ ಲಸಿಕೆ ಸಿದ್ಧವಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಸೋಂಕು ನಿವಾರಣೆಯಾಗಲಿದೆ, ಅದು ತೊಲಗಲಿದೆ ಎಂದು ಟ್ರಂಪ್ ತಮ್ಮ ನಿಲುವನ್ನು ಮತ್ತೆ ಪ್ರತಿಪಾದಿಸಿದ್ದಾರೆ. ನಾವು ಮೂಲೆ ಮೂಲೆಯಲ್ಲಿಯೂ ಅದರ ವಿರುದ್ಧಹೋರಾಟ ನಡೆಸುತ್ತಿದ್ದೇವೆ. ನಾವು ದೇಶವನ್ನು ಮುಚ್ಚಿಬಿಡಲು ಸಾಧ್ಯವಿಲ್ಲ. ಇದು ಬೃಹತ್ ಆರ್ಥಿಕತೆಯ ಬೃಹತ್ ದೇಶ. ಈಗ ಹಿಂಜರಿತ ಉಂಟಾಗಿದೆ. ಹಿಂದೆಂದೂ ಯಾರೂ ನೋಡಿರದ ಸ್ಥಿತಿ ಇದೆ ಎಂದಿದ್ದಾರೆ.

ಈ ಬಾರಿ ಗೆಲ್ಲುತ್ತಾರಾ ಟ್ರಂಪ್..? ಸೋಲುತ್ತಾರಾ ಬಿಡೆನ್..?ಈ ಬಾರಿ ಗೆಲ್ಲುತ್ತಾರಾ ಟ್ರಂಪ್..? ಸೋಲುತ್ತಾರಾ ಬಿಡೆನ್..?

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಚರ್ಚೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿದರು. 'ನನ್ನ ಜೀವನದಲ್ಲಿ ಯಾವುದೇ ವಿದೇಶಿ ಮೂಲದಿಂದ ಒಂದೇ ಒಂದು ಪೆನ್ನಿ ಕೂಡ ಪಡೆದಿಲ್ಲ' ಎಂದು ಟ್ರಂಪ್ ಟೀಕೆಗೆ ಬಿಡೆನ್ ಪ್ರತಿಕ್ರಿಯಿಸಿದರು.

Recommended Video

ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

ಚೀನಾದಲ್ಲಿ ರಹಸ್ಯ ಬ್ಯಾಂಕ್ ಖಾತೆ ಹೊಂದಿದ್ದಾರೆ ಎಂದು ಟ್ರಂಪ್ ವಿರುದ್ಧ ಬಿಡೆನ್ ಕಿಡಿಕಾರಿದರು. ರಷ್ಯಾದಿಂದ 3.5 ಮಿಲಿಯನ್ ಡಾಲರ್ ಹಣವನ್ನು ಬಿಡೆನ್ ಪಡೆದುಕೊಂಡಿದ್ದಾರೆ. ಬಿಡನ್ ಮಗ ಹಂಟರ್ ಬಿಡೆನ್ ಸಹ ಮಾಲೀಕತ್ವದ ಹೂಡಿಕೆ ಸಂಸ್ಥೆಯೊಂದರ ಅವ್ಯವಹಾರ ಆರೋಪವನ್ನು ಟ್ರಂಪ್ ಉಲ್ಲೇಖಿಸಿದರು. ಮಾಸ್ಕೋದ ಮಾಜಿ ಮೇಯರ್ ನಡೆಸಿದ ಅಕ್ರಮ ನಿರ್ಮಾಣ ಗುತ್ತಿಗೆಗಾಗಿ ಆಕೆಯ ಪತ್ನಿಯಿಂದ ಬಿಡೆನ್ ಅವರ ಮಗ 3.5 ಮಿಲಿಯನ್ ಡಾಲರ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

English summary
Donald Trump and Joe Biden war of words of handling of the coronavirus pandemic in the final pre election debate on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X