ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 6: ಚುನಾವಣೆಯಲ್ಲಿ ತಾವೇ ಗೆದ್ದಿರುವುದಾಗಿ ಸುಳ್ಳು ಘೋಷಣೆ ಮಾಡಲು ಪ್ರಯತ್ನಿಸುತ್ತಿರುವ ಮತ್ತು ಡೆಮಾಕ್ರಟಿಕ್ ಪಕ್ಷದವರು ಮತಗಳನ್ನು ತಮ್ಮಿಂದ ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಮುಜುಗರವಾಗಿದೆ. ಒಂದೆಡೆ ಜಾರ್ಜಿಯಾ ಮತ್ತು ಮಿಚಿಗನ್‌ಗಳಲ್ಲಿನ ಕಾನೂನು ಹೋರಾಟದಲ್ಲಿ ಸೋಲು ಅನುಭವಿಸಿದ್ದರೆ, ಇನ್ನೊಂದೆಡೆ ಅವರ ಹೇಳಿಕೆಗಳಿಗೆ ಸ್ವತಃ ರಿಪಬ್ಲಿಕನ್ ಪಕ್ಷದ ಮುಖಂಡರಿಂದಲೇ ಬೆಂಬಲ ಸಿಗುತ್ತಿಲ್ಲ.

ಮತಪತ್ರ ಎಣಿಕೆ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ. ಇದು ನ್ಯಾಯಸಮ್ಮತವಾಗಿಲ್ಲ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಟ್ರಂಪ್ ಮುಖಭಂಗ ಅನುಭವಿಸಿದ ಅನೇಕ ರಾಜ್ಯಗಳಲ್ಲಿ ಅಕ್ರಮ ನಡೆದಿರುವುದಾಗಿ ಆರೋಪ ಮಾಡಿದ್ದಾರೆ. ಆದರೆ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಫೆಡರಲ್ ಮತ್ತು ರಾಜ್ಯ ಅಧಿಕಾರಿಗಳು ವರದಿ ನೀಡಿದ್ದಾರೆ. ತಮ್ಮ ಆರೋಪಗಳ ಕುರಿತು ಟ್ರಂಪ್ ವಿವರಣೆ ನೀಡಿಲ್ಲ ಮತ್ತು ಪುರಾವೆಗಳನ್ನು ಸಹ ಒದಗಿಸಿಲ್ಲ.

ಟ್ರಂಪ್ ಮೊಕದ್ದಮೆ ವಜಾಗೊಳಿಸಿದ ಜಾರ್ಜಿಯಾ ನ್ಯಾಯಾಧೀಶರುಟ್ರಂಪ್ ಮೊಕದ್ದಮೆ ವಜಾಗೊಳಿಸಿದ ಜಾರ್ಜಿಯಾ ನ್ಯಾಯಾಧೀಶರು

'ಯಾವುದೇ ಅಭ್ಯರ್ಥಿಯು ಚುನಾವಣಾ ಕಾನೂನುಗಳ ಉಲ್ಲಂಘನೆಯಾಗುತ್ತಿದೆ ಎಂದೆನಿಸಿದರೆ ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಮತ್ತು ತಮ್ಮ ಆರೋಪಕ್ಕೆ ಸೂಕ್ತ ಸಾಕ್ಷ್ಯಗಳನ್ನು ಅವರು ಒದಗಿಸಬೇಕಾಗುತ್ತದೆ' ಎಂದು ಫ್ಲೋರಿಡಾದ ರಿಪಬ್ಲಿಕನ್ ಸೆನೆಟರ್ ಮಾರ್ಕೊ ರುಬಿಯೋ ಹೇಳಿದ್ದಾರೆ. ಮುಂದೆ ಓದಿ.

ಇದು ವಂಚನೆಯಾಗುವಿದಿಲ್ಲ

ಇದು ವಂಚನೆಯಾಗುವಿದಿಲ್ಲ

'ಕಾನೂನಾತ್ಮಕವಾಗಿ ಚಲಾಯಿಸಿರುವ ಮತಗಳ ಎಣಿಕೆಗೆ ಹೆಚ್ಚು ದಿನಗಳನ್ನು ತೆಗೆದುಕೊಳ್ಳುವುದು ವಂಚನೆಯಲ್ಲ. ಕಾನೂನಾತ್ಮಕ ಮತ ಚಲಾವಣೆಯ ಗಡುವಿನ ಬಳಿಕ ಮತ ಹಾಕುವುದನ್ನು ನ್ಯಾಯಾಲಯ ಪ್ರಶ್ನಿಸುವುದು ದಬ್ಬಾಳಿಕೆಯಾಗುವುದಿಲ್ಲ' ಎಂದು ಮಾರ್ಕೋ ರುಬಿಯೋ ಈ ಮೊದಲು ಟ್ವೀಟ್ ಮಾಡಿದ್ದರು.

ನಾವು ಬೆಂಬಲ ನೀಡಲ್ಲ

ನಾವು ಬೆಂಬಲ ನೀಡಲ್ಲ

'ಅಧ್ಯಕ್ಷರ ಈಗಿನ ಹೇಳಿಕೆಗಳ ಬಗ್ಗೆ ಯಾವ ರಿಪಬ್ಲಿಕನ್ನರೂ ಸಹಮತ ವ್ಯಕ್ತಪಡಿಸಬೇಕಿಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಮಾಜಿ ಸೆನೆಟರ್ ಜೆಫ್ ಫ್ಲೇಕ್ ನೇರವಾಗಿ ಹೇಳಿದ್ದಾರೆ. 'ಸಾಕು. ಸಂಪೂರ್ಣವಾಗಿ ನಿಲ್ಲಿಸಿ ಸಾಕು. ಮತಗಳನ್ನು ಎಣಿಕೆ ಮಾಡಲಾಗುತ್ತದೆ. ನೀವು ಸೋಲಲಿ ಅಥವಾ ಗೆಲ್ಲಲಿ. ಮೊದಲು ಸಂಯಮದಿಂದ ಇರುವುದನ್ನು ಕಲಿಯಬೇಕು' ಎಂದು ರಿಪಬ್ಲಿಕನ್ ಆಡಮ್ ಕಿಂಜಿಂಗರ್, ಕೂಡ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಎಸ್ಎ ಫಲಿತಾಂಶದ ದಾರಿ ತಪ್ಪಿಸುತ್ತಿದ್ದಾರೆಯೇ ಟ್ರಂಪ್?ಯುಎಸ್ಎ ಫಲಿತಾಂಶದ ದಾರಿ ತಪ್ಪಿಸುತ್ತಿದ್ದಾರೆಯೇ ಟ್ರಂಪ್?

ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಲ್ಲ

ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಲ್ಲ

'ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಕಡೆಗಣಿಸುವ ಅಧ್ಯಕ್ಷರ ಇಂದಿನ ಹೇಳಿಕೆಗಳನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ. ಇನ್ನೂ ಮತ ಎಣಿಕೆ ನಡೆಯುತ್ತಿದೆ. ಈ ಹಿಂದೆ ಒಪ್ಪಿಕೊಂಡಂತೆಯೇ ನಾವು ಫಲಿತಾಂಶವನ್ನು ಸ್ವೀಕರಿಸಬೇಕು. ನಮ್ಮ ಪ್ರಜಾಪ್ರಭುತ್ವಕ್ಕಿಂತ ಯಾವುದೇ ಚುನಾವಣೆ ಅಥವಾ ವ್ಯಕ್ತಿ ದೊಡ್ಡವರಲ್ಲ' ಎಂದು ರಿಪಬ್ಲಿಕನ್ ಪಕ್ಷದ 2024ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿರುವ ಲ್ಯಾರಿ ಹೋಗಾನ್ ಹೇಳಿದ್ದಾರೆ.

ಟ್ರಂಪ್ ಮಗನ ಸಿಟ್ಟು

ಟ್ರಂಪ್ ಮಗನ ಸಿಟ್ಟು

ಡೊನಾಲ್ಡ್ ಟ್ರಂಪ್ ಮತ್ತು ಅವರ ಕೆಲವು ಬೆಂಬಲಿಗರು ಮಾತ್ರವೇ ಮತ ಎಣಿಕೆಯಲ್ಲಿನ ವಂಚನೆಗಳ ಆರೋಪ ಮಾಡುತ್ತಿದ್ದರೆ, ಅನೇಕ ರಿಪಬ್ಲಿಕನ್ ಮುಖಂಡರು ಟ್ರಂಪ್ ಹೇಳಿಕೆಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ. ಅಧ್ಯಕ್ಷರ ಬೆಂಬಲಕ್ಕೆ ರಿಪಬ್ಲಿಕನ್ನರು ಏಕೆ ಧಾವಿಸುತ್ತಿಲ್ಲ ಎಂದು ಟ್ರಂಪ್ ಮಗ ಎರಿಕ್ ಪ್ರಶ್ನಿಸಿದ್ದಾರೆ. 'ರಿಪಬ್ಲಿಕನ್ನರು ಎಲ್ಲಿದ್ದಾರೆ? ಬೆನ್ನೆಲುಬಾಗಿ ನಿಲ್ಲಿ. ಈ ವಂಚನೆ ವಿರುದ್ಧ ಹೋರಾಡಿ. ನೀವು ಮೋಸ ಮಾಡಿದರೆ ನಮ್ಮ ಮತದಾರರು ನಿಮ್ಮನ್ನು ಮರೆಯುವುದಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆ

English summary
US Elections: Top Republicans are refusing to back Donald Trump on his claim that Democrats are trying to steal election and his stop count demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X