ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ ಸನಿಹದಲ್ಲೇ ಗನ್ ಮಾರಾಟ ಹೆಚ್ಚಳ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 3: ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಅಮೆರಿಕದಲ್ಲಿ ಚುನಾವಣೆಯ ಹಿಂದಿನ ದಿನ ಅಪಾರ ಪ್ರಮಾಣದಲ್ಲಿ ಗನ್‌ಗಳು ಮಾರಾಟವಾಗಿವೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಕಪ್ಪುವರ್ಣೀಯ ವ್ಯಕ್ತಿ ಪೊಲೀಸರಿಂದ ಸಾವಿಗೀಡಾಗಿದ್ದು ಮತ್ತು ಅದರ ಬೆನ್ನಲ್ಲೇ ಅಮೆರಿಕದಲ್ಲಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್' ಪ್ರತಿಭಟನೆಗಳು ತೀವ್ರಗೊಂಡಿದ್ದು.

ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಇನ್ನೂ ಉದ್ವಿಗ್ನತೆ ಇದೆ. ಕೋವಿಡ್ ಭೀತಿ, ಅತ್ತ ಚುನಾವಣೆಯ ಹಣಾಹಣಿಯ ನಡುವೆ ಪ್ರತಿಭಟನೆಯಂತಹ ಘಟನೆಗಳು ತಮ್ಮ ಜೀವಕ್ಕೆ ಕುತ್ತು ತರಬಹುದು ಎಂಬ ಭಯ ಅನೇಕರಲ್ಲಿದೆ. ಈ ಕಾರಣದಿಂದ ಆತ್ಮರಕ್ಷಣೆಗಾಗಿ ಗನ್ ಖರೀದಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಸಮೀಕ್ಷೆಗಳು ನಿಜವಾದರೆ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಜೋ ಬೈಡನ್ ಸಮೀಕ್ಷೆಗಳು ನಿಜವಾದರೆ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಜೋ ಬೈಡನ್

2020ರ ವರೆಗಿನ ಎಫ್‌ಬಿಐ ದಾಖಲೆಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ಗನ್ ಖರೀದಿದಾರರ ಸಂಖ್ಯೆ ಹೆಚ್ಚಳವಾಗಿದೆ. ಮಾರ್ಚ್ ತಿಂಗಳಲ್ಲಿ 3.7 ಮಿಲಿಯನ್ ಗನ್ ಖರೀದಿಯಾಗಿದ್ದರೆ, ಜೂನ್ ತಿಂಗಳ ವೇಳೆಗೆ 3.9 ಮಿಲಿಯನ್‌ಗೆ ತಲುಪಿತ್ತು. ಸೆಪ್ಟೆಂಬರ್ ಹೊತ್ತಿಗೆ 28.8 ಮಂದಿಯ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. ಕಳೆದ ವರ್ಷ ಒಟ್ಟು 28.4 ಮಂದಿಯ ಗನ್ ಖರೀದಿ ಹಿನ್ನೆಲೆ ಪರಿಶೀಲನೆ ನಡೆಸಲಾಗಿತ್ತು.

US Elections: Surge In Gun Purchases Amid Fears Of Violence In States

ಶಸ್ತ್ರಾಸ್ತ್ರ ವ್ಯಾಪಾರ ಸಂಸ್ಥೆ ರಾಷ್ಟ್ರೀಯ ಕ್ರೀಡಾ ಶೂಟಿಂಗ್ ಪ್ರತಿಷ್ಠಾನದ ಗ್ರಾಹಕ ಸಮೀಕ್ಷೆ ಪ್ರಕಾರ ಶೇ 40ರಷ್ಟು ಮಂದಿ ಮೊದಲ ಬಾರಿ ಗನ್ ಖರೀದಿ ಮಾಡಿದ್ದಾರೆ. ಇದೇ ರೀತಿಯ ಗನ್ ಖರೀದಿ ಭರಾಟೆ 2016ರ ಅಧ್ಯಕ್ಷೀಯ ಚುನಾವಣೆ ವೇಳೆಗೂ ನಡೆದಿತ್ತು. ಆಗ 27.5 ಮಿಲಿಯನ್ ಮಂದಿಯ ಹಿನ್ನೆಲೆ ಪರಿಶೀಲನೆ ಕಾರ್ಯ ನಡೆದಿತ್ತು.

English summary
US Elections: Rising in gun purchase by Americans amid the fear of violence in states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X