ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಗಳ ಹಿಂದೆಯೇ ಕೋವಿಡ್‌ನಿಂದ ಸತ್ತಿದ್ದ ಅಭ್ಯರ್ಥಿಗೆ ಅಮೆರಿಕ ಚುನಾವಣೆಯಲ್ಲಿ ಜಯ!

|
Google Oneindia Kannada News

ವಾಷಿಂಗ್ಟನ್, ನವೆಂಬರ್ 5: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲ. ಕೆಲವು ರಾಜ್ಯಗಳಲ್ಲಿನ ಫಲಿತಾಂಶಗಳು ಘೋಷಣೆಯಾಗಿದ್ದು, ಒಂದು ತಿಂಗಳ ಹಿಂದೆ ಕೋವಿಡ್ 19ನಿಂದ ಮೃತಪಟ್ಟಿದ್ದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಾರ್ತ್ ಡಕೋಟಾದಿಂದ ಸದನಕ್ಕೆ ಆಯ್ಕೆಯಾಗಿದ್ದಾರೆ.

ಪಶುಸಂಗೋಪನೆ ಮತ್ತು ಭೂ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದ 55 ವರ್ಷದ ಡೇವಿಡ್ ಡೀನ್ ಅಂಡಾಹ್ಲ್ ಅವರು ಮಂಗಳವಾರ ನಾರ್ತ ಡಕೋಟಾದ 8ನೇ ಜಿಲ್ಲೆಯಿಂದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ. ಅವರು ರಿಪಬ್ಲಿಕನ್ ಡೇವಿಡ್ ನೆಹ್ರಿಂಗ್ ಅವರೊಂದಿಗೆ ಶೇ 35.3 ಮತಗಳನ್ನು ಪಡೆದಿದ್ದಾರೆ. ಅವರು ಒಟ್ಟು 40.72ರಷ್ಟು ಮತಗಳೊಂದಿಗೆ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.

ಅಮೆರಿಕ ಅಧ್ಯಕ್ಷರಿಗೆ ಸಿಗುವ ಸಂಬಳ, ಸೌಲಭ್ಯಗಳೇನು?ಅಮೆರಿಕ ಅಧ್ಯಕ್ಷರಿಗೆ ಸಿಗುವ ಸಂಬಳ, ಸೌಲಭ್ಯಗಳೇನು?

ಅಂಡಾಹ್ಲ್ ಅವರು ಅಕ್ಟೋಬರ್ 7ರಂದು ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಆದರೆ ಮೇಲ್ ಇನ್ ಮತದಾನ ಪ್ರಕ್ರಿಯೆಯು ಸೆಪ್ಟೆಂಬರ್ 18ರಂದೇ ಶುರುವಾಗಿದ್ದರಿಂದ ಬ್ಯಾಲಟ್‌ಗಳಿಂದ ಅವರ ಹೆಸರನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

US Elections: Republican Candidate David Dean Andahl Elected In North Dakota, A Month After His Death

ಇದಕ್ಕೂ ಮುನ್ನ ವರ್ಷದ ಆರಂಭದಲ್ಲಿ ಅಂಡಾಹ್ಲ್ ಅವರು ನಾರ್ತ್ ಡಕೋಟಾದ ಹಾಲಿ ಪ್ರತಿನಿಧಿ ಜೆಫ್ ಡೆಲ್ಜೆರ್ ವಿರುದ್ಧ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಅವರನ್ನು ನಾರ್ತ್ ಡಕೋಟಾದ ಗವರ್ನರ್ ಡಫ್ ಬುರ್ಗಮ್ ಮತ್ತು ಟ್ರಂಪ್ ಅವರ ನಿಕಟವರ್ತಿ ಸೆನೆಟರ್ ಕೆವಿನ್ ಕ್ರೇಮರ್, ಜನಪ್ರತಿನಿಧಿ ಸಭೆಯ ಸದಸ್ಯ ಸ್ಥಾನದ ಅಭ್ಯರ್ಥಿಯನ್ನಾಗಿ ಶಿಫಾರಸು ಮಾಡಿದ್ದರು.

Recommended Video

US Presidential Election 2020 : America ನನ್ನದು , ದೊಡ್ಡಣ್ಣನಿಗೆ ಮುಖಭಂಗ!! | Oneindia Kannada

English summary
US Elections: Republican candidate David Dean Andahl was elected to the state representative from North Dakota, a month after he died from Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X