ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಪ್ಪಾ ಸರಳತೆ, ಮತದಾರರಿಗೆ ಖುದ್ದಾಗಿ ಕರೆ ಮಾಡಿದ ಒಬಾಮಾ

|
Google Oneindia Kannada News

ಬರಾಕ್ ಒಬಾಮಾ, ಬಹುಶಃ ಈ ಹೆಸರು ಅಮೆರಿಕದ ಅತ್ಯುತ್ತಮ ಅಧ್ಯಕ್ಷರ ಸಾಲಿನಲ್ಲಿ ಸದಾ ರಾರಾಜಿಸುತ್ತದೆ. ಅಮೆರಿಕದ 44ನೇ ಅಧ್ಯಕ್ಷರಾಗಿ 2008ರಲ್ಲಿ ಆಯ್ಕೆಯಾದ ಒಬಾಮಾ, ಈಗ ಮಾಜಿ ಅಧ್ಯಕ್ಷ. 2008ರಿಂದ 2016ರವರೆಗೂ ಸತತ 2 ಬಾರಿ ಅಧ್ಯಕ್ಷರಾಗಿ ಅಮೆರಿಕ ಎಂಬ ದೈತ್ಯ ದೇಶವನ್ನು ಮುನ್ನಡೆಸಿರುವ ಒಬಾಮಾ ಹುಮ್ಮಸ್ಸು ಕುಗ್ಗಿಲ್ಲ. 2016ರಲ್ಲಿ ನಿವೃತ್ತರಾಗಿರುವ ಒಬಾಮಾ 2020ರಲ್ಲಿ ಜೋ ಬಿಡೆನ್, ಕಮಲಾ ಹ್ಯಾರಿಸ್ ಗೆಲುವಿಗಾಗಿ ಪಣತೊಟ್ಟಿದ್ದಾರೆ.

ಈಗಾಗಲೇ ಬಿಡೆನ್ ಮತ್ತು ಕಮಲಾ ಪರ ಪ್ರಚಾರ ಸಭೆಗಳನ್ನು ನಡೆಸಿರುವ ಒಬಾಮಾ, ಸದ್ಯ ಅಮೆರಿಕ ಮತದಾರರಿಗೆ ಖುದ್ದು ಕರೆ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗೆ ಒಬಾಮಾ ಕರೆಮಾಡಿ ಬಿಡೆನ್, ಕಮಲಾ ಪರ ಮತಹಾಕುವಂತೆ ಅಮೆರಿಕದ ಮತದಾರ ಪ್ರಭುಗಳ ಬಳಿ ಮನವಿ ಮಾಡಿರುವ ವೀಡಿಯೋ ವೈರಲ್ ಆಗಿದೆ. ಅಲಿಸ್ಸಾ ಎಂಬುವವರಿಗೆ ಕರೆ ಮಾಡುವ ಒಬಾಮಾ, ನಾನು ಒಬಾಮಾ, ಅಧ್ಯಕ್ಷನಾಗಿದ್ದೆ ನಿಮಗೆ ನೆನಪಿದೆಯಾ ಎನ್ನುವ ಮೂಲಕ ತಮ್ಮ ಮಾತು ಆರಂಭಿಸುತ್ತಾರೆ. ಅಲ್ಲದೆ ಬಿಡೆನ್-ಕಮಲಾ ಪರ ಮತಯಾಚನೆ ಕೂಡ ಮಾಡಿದ್ದು, ಒಬಾಮಾ ಸರಳತೆಗೆ ಜಗತ್ತು ಫಿದಾ ಆಗಿದೆ.

ಮತ ಮಾತ್ರ ಕೇಳಲಿಲ್ಲ, ಮಗನ ಬಗ್ಗೆಯೂ ವಿಚಾರಣೆ..!

ಮತ ಮಾತ್ರ ಕೇಳಲಿಲ್ಲ, ಮಗನ ಬಗ್ಗೆಯೂ ವಿಚಾರಣೆ..!

ಅಲಿಸ್ಸಾಗೆ ಒಬಾಮಾ ಕಾಲ್ ಮಾಡಿದ್ದ ಸಂದರ್ಭದಲ್ಲಿ, ಮಗು ಅಳುವ ಸದ್ದು ಕೇಳಿಬರುತ್ತದೆ. ತಕ್ಷಣ ಅಲರ್ಟ್ ಆಗುವ ಒಬಾಮಾ, ಮಗುವಿನ ಹೆಸರನ್ನ ಮುದ್ದುಮುದ್ದಾಗಿ ಕರೆಯುತ್ತಾರೆ. ಹೇ ಜ್ಯಾಕ್ಸ್, ಹೇಗಿದ್ದೀಯ ಎನ್ನುವ ಒಬಾಮಾ ನಿಮ್ಮ ಅಮ್ಮನ ಮಾತು ಕೇಳು ಕಂದಾ ಎನ್ನುತ್ತಾರೆ. ಹೀಗೆ ಮತಯಾಚನೆಗೆ ಕರೆ ಮಾಡುವ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮಗುವಿನ ಬಗ್ಗೆಯೂ ವಿಚಾರಿಸುತ್ತಾರೆ. ಅಲ್ಲದೆ ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರಿಗೆ ಮತಹಾಕಲು ತಿಳಿಸಿ ಎಂದು ಮನವಿ ಮಾಡಿದ್ದಾರೆ. ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ ಒಬಾಮಾ ಈ ವೀಡಿಯೋ ಪೋಸ್ಟ್ ಮಾಡಿದ್ದು, ಹತ್ತಾರು ಲಕ್ಷ ವೀವ್ಸ್ ಗಿಟ್ಟಿಸಿದೆ.

ಅಮೆರಿಕ ಚುನಾವಣೆಗೆ ಕೌಂಟ್‌ಡೌನ್‌, ಮತದಾನಕ್ಕೆ ಸಕಲ ಸಿದ್ಧತೆ..!ಅಮೆರಿಕ ಚುನಾವಣೆಗೆ ಕೌಂಟ್‌ಡೌನ್‌, ಮತದಾನಕ್ಕೆ ಸಕಲ ಸಿದ್ಧತೆ..!

ಮಕ್ಕಳು ಎಂದರೆ ಒಬಾಮಾಗೆ ಕಾಳಜಿ

ಮಕ್ಕಳು ಎಂದರೆ ಒಬಾಮಾಗೆ ಕಾಳಜಿ

ಪುಟಾಣಿಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ..? ಹೀಗೆ ಒಬಾಮಾ ಅವರಿಗೂ ಮಕ್ಕಳ ಬಗ್ಗೆ ಪ್ರೀತಿ ಹಾಗೂ ಕಾಳಜಿ ತುಸು ಹೆಚ್ಚು. ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಮಕ್ಕಳ ಜೊತೆ ಬರಾಕ್ ಒಬಾಮಾ ಹೆಚ್ಚಾಗಿ ಬೆರೆಯುತ್ತಿದ್ದರು. ತಾವು ರಸ್ತೆಯಲ್ಲಿ ಹೋಗುವಾಗ, ಪಾರ್ಕ್‌ಗಳಿಗೆ ವಿಸಿಟ್ ಕೊಟ್ಟಾಗ, ಇಲ್ಲವೇ ದಿಢೀರ್ ರೆಸ್ಟೋರೆಂಟ್‌ಗಳಿಗೆ ತೆರಳಿದಾಗ ಮಕ್ಕಳನ್ನು ಮುದ್ದಾಡುತ್ತಿದ್ದರು. ಈ ವೀಡಿಯೋಗಳು ಇಂದಿಗೂ ವೈರಲ್ ಆಗಿ ಉಳಿದಿವೆ. ಏಕೆಂದರೆ ಒಬಾಮಾ ಇಂದಿಗೂ ಅಮೆರಿಕನ್ನರ ಫೇವರಿಟ್ ಪ್ರೆಸಿಡೆಂಟ್.

ಬರಾಕ್ ಒಬಾಮಾ ಸರಳತೆ ಮೆಚ್ಚಿಕೊಂಡ ಸಚಿವ ಸುರೇಶ್ ಕುಮಾರ್ಬರಾಕ್ ಒಬಾಮಾ ಸರಳತೆ ಮೆಚ್ಚಿಕೊಂಡ ಸಚಿವ ಸುರೇಶ್ ಕುಮಾರ್

ಮಗು ಅಳು ನಿಲ್ಲಿಸಿಬಿಡುತ್ತೆ..!

ಮಗು ಅಳು ನಿಲ್ಲಿಸಿಬಿಡುತ್ತೆ..!

ಒಬಾಮಾ ಎದುರು ಕಂದಮ್ಮಗಳು ಅಳುತ್ತಿದ್ದರೆ ಅವರು ಸುಮ್ಮನೆ ನಿಲ್ಲುವವರಲ್ಲ. ತಾಯಿಯಿಂದ ಕೇಳಿ ಪಡೆದು ಆ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಿಬಿಡ್ತಾರೆ. ಒಬಾಮಾ ಸಮಾಧಾನ ಮಾಡುತ್ತಿದ್ದಂತೆ ಮಕ್ಕಳು ಅಳುವುದನ್ನೇ ನಿಲ್ಲಿಸಿದ ಉದಾಹರಣೆಗಳು ಇವೆ. ಒಬಾಮಾ ತಬ್ಬಿ ಸಮಾಧಾನ ಮಾಡಿದ ತಕ್ಷಣ ಕಂದಮ್ಮಗಳು ಕಿಲಕಿಲನೆ ನಕ್ಕಿರುವ ಹಳೇ ವೀಡಿಯೋಗಳು ಯ್ಯೂಟ್ಯೂಬ್‌ನಲ್ಲಿ ಇಂದಿಗೂ ತಮ್ಮ ಟ್ರೆಂಡ್ ಉಳಿಸಿಕೊಂಡು ಬಂದಿವೆ. ಈಗ ಒಬಾಮಾ ಮತ್ತೆ ತಮ್ಮ ಸರಳತೆಯ ಮೂಲಕವೇ ಸದ್ದು ಮಾಡುತ್ತಿದ್ದು, ಬರಾಕ್ ಒಬಾಮಾ ಬಗ್ಗೆ ಜಗತ್ತು ಮತ್ತೊಮ್ಮೆ ಮಾತನಾಡಿಕೊಳ್ಳುತ್ತಿದೆ.

ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾ

 ಒಬಾಮಾ ಹಾಗೂ ಟ್ರಂಪ್ ನಡುವಿನ ವಾಗ್ದಾಳಿ

ಒಬಾಮಾ ಹಾಗೂ ಟ್ರಂಪ್ ನಡುವಿನ ವಾಗ್ದಾಳಿ

ಅಮೆರಿಕದಲ್ಲಿ ಒಬಾಮಾ ಹಾಗೂ ಟ್ರಂಪ್ ನಡುವಿನ ವಾಗ್ದಾಳಿ ಇಂದು ನಿನ್ನೆಯದಲ್ಲ. ಅದಕ್ಕೆ ಬರೋಬ್ಬರಿ 4 ವರ್ಷಗಳ ಇತಿಹಾಸವಿದೆ. ಇಬ್ಬರ ನಡುವೆ ಬೆಂಕಿಯುಂಡೆಯಂತಹ ಪದಬಳಕೆಗೆ ಬಲವಾದ ಕಾರಣವಿದೆ. ಅಮೆರಿಕದ ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಒಬಾಮಾ ತಮ್ಮ ಆಡಳಿತದಲ್ಲಿ 'ಒಬಾಮಾ ಕೇರ್' ಎಂಬ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದ್ದರು. ಆದರೆ ಇದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿಯೇ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ 'ಒಬಾಮಾ ಕೇರ್' ಯೋಜನೆಗೆ ಬ್ರೇಕ್ ಹಾಕಿದ್ದರು. ಇದು ಟ್ರಂಪ್ ಮತ್ತು ಒಬಾಮಾ ಮಧ್ಯೆ ವಾಗ್ದಾಳಿಗೆ ದಾರಿಮಾಡಿಕೊಟ್ಟಿತ್ತು. 'ಕೊರೊನಾ' ಸೋಂಕಿನಿಂದ ಅಮೆರಿಕದಲ್ಲಿ ಲಕ್ಷಾಂತರ ಜನರು ಮೃತಪಟ್ಟಿರುವುದು ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಎಂಬ ಆರೋಪವಿದೆ. 'ಒಬಾಮಾ ಕೇರ್'ಗೆ ಬ್ರೇಕ್ ಹಾಕಿದ್ದರಿಂದ ಬಡವರಿಗೆ ಚಿಕಿತ್ಸೆ ಸಿಗಲಿಲ್ಲ, ಹೀಗಾಗಿಯೇ ಅಮೆರಿಕದಲ್ಲಿ ಅತಿಹೆಚ್ಚು ಜನ ಕೊರೊನಾಗೆ ಬಲಿಯಾದರು ಎಂಬುದು ವಿಪಕ್ಷ ನಾಯಕರ ಆರೋಪ.

60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ

English summary
US Elections: Former US President Barack Obama continues to campaign for Joe Biden and Kamala Harris. The video that Obama requested to vote for Biden and Kamala now viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X