• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಚುನಾವಣೆ: 22 ಮಿಲಿಯನ್‌ಗೂ ಅಧಿಕ ಮತ ಚಲಾವಣೆ

|

ವಾಷಿಂಗ್ಟನ್, ಅಕ್ಟೋಬರ್ 17: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶುಕ್ರವಾರದ ವೇಳೆಗೆ ಈಗಾಗಲೇ 22 ಮಿಲಿಯನ್ ಅಮೆರಿಕನ್ನರು ಮತ ಚಲಾವಣೆ ಮಾಡಿದ್ದಾರೆ. ಕೆಲವು ಖುದ್ದಾಗಿ, ಇನ್ನು ಕೆಲವರು ಮೇಲ್ ಮೂಲಕ ಮತ ಚಲಾಯಿಸಿದ್ದಾರೆ ಎಂದು ಯುಎಸ್ ಎಲೆಕ್ಷನ್ ಪ್ರಾಜೆಕ್ಟ್ ತಿಳಿಸಿದೆ.

2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಸಮಯದಲ್ಲಿ ಕೇವಲ ಆರು ಮಿಲಿಯನ್ ಮಂದಿ ಮತ ಚಲಾವಣೆ ಮಾಡಿದ್ದರು. ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಕಾರಣದಿಂದ ಜನರು ಆದಷ್ಟು ಬೇಗನೆ ಮತ ಚಲಾವಣೆ ಮಾಡಲು ಮುಂದಾಗುತ್ತಿದ್ದಾರೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಮತ ಚಲಾಯಿಸಲು ಜನರು ಉತ್ಸುಕರಾಗಿದ್ದಾರೆ.

ಜೋ ಬಿಡೆನ್, ಕಮಲಾ ಹ್ಯಾರಿಸ್ ಪರ ಬರಾಕ್ ಒಬಾಮಾ ಪ್ರಚಾರ

ಅಂಚೆ ಮತದಾನಕ್ಕೆ ಅರ್ಹರಾದವರಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಿರುವ ಟೆಕ್ಸಾಸ್‌ನಲ್ಲಿ ಆರಂಭದ ಮತದಾನದ ಮೊದಲ ದಿನ ದಾಖಲೆ ಪ್ರಮಾಣದಲ್ಲಿ ಮತಪತ್ರಗಳನ್ನು ಚಲಾಯಿಸಲಾಗಿದೆ. ಜಾರ್ಜಿಯಾದಲ್ಲಿ ಸೋಮವಾರ ಕೊಲಂಬಸ್ ಡೇ ಫೆಡರಲ್ ರಜೆದಿನದಂದು 1,26,876 ಮಂದಿ ಮತ ಚಲಾಯಿಸಿದ್ದಾರೆ. ಓಹಿಯೊದಲ್ಲಿ 2.3 ಮಿಲಿಯನ್‌ಗೂ ಅಧಿಕ ಪೋಸ್ಟಲ್ ಬ್ಯಾಲಟ್‌ಗಳಿಗೆ ಬೇಡಿಕೆ ಬಂದಿದೆ. ಇದು 2016ಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು.

ನೋಂದಾಯಿತ ರಿಪಬ್ಲಿಕನ್ನರಿಗಿಂತ ನೋಂದಾಯಿತ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬ್ಯಾಲಟ್‌ಗಳಲ್ಲಿ ಅವರೇ ಎರಡು ಪಟ್ಟು ಹೆಚ್ಚು ಮತದಾನ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷ, ಮಹಿಳೆಯರು ಮತ್ತು ಕಪ್ಪು ವರ್ಣೀಯರು ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗಿದೆ.

ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಬಿಡನ್ ಅತ್ಯಂತ ಕೆಟ್ಟ ಅಭ್ಯರ್ಥಿ: ಟ್ರಂಪ್

ಆದರೆ ಆರಂಭಿಕ ಮತದಾನಗಳು ಡೆಮಾಕ್ರಟಿಕ್ ಪರವಾಗಿ ಇದ್ದರೂ ಅವರೇ ಗೆಲ್ಲುತ್ತಾರೆ ಎನ್ನುವಂತಿಲ್ಲ. ಅಂಚೆ ಮತದಾನಗಳು ವಂಚನೆಗೆ ಅನುಕೂಲ ಮಾಡಿಕೊಡುತ್ತವೆ ಎಂಬ ಆರೋಪ ಮಾಡಿರುವ ರಿಪಬ್ಲಿಕನ್ನರು, ಆರಂಭದಲ್ಲಿ ಡೆಮಾಕ್ರಟಿಕ್ ಗೆದ್ದರೂ, ಚುನಾವಣಾ ದಿನದಂದು ದೊಡ್ಡ ಮಟ್ಟದಲ್ಲಿ ರಿಪಬ್ಲಿಕನ್ನರು ಮತ ಚಲಾಯಿಸಲಿದ್ದಾರೆ ಎಂದಿದ್ದಾರೆ.

English summary
US Elections 2020: More than 22 million america voters have cast their ballots already.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X