ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 7: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಗೊಂದಲ ಅಂತ್ಯಗೊಂಡಿದೆ. ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅಂತಿಮವಾಗಿ ಆಯ್ಕೆಯಾಗಿದ್ದು, ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಏರಲಿದ್ದಾರೆ. ಇದರಿಂದ ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮುಖಭಂಗವಾದಂತಾಗಿದೆ.

ಮಂಗಳವಾರ ನಡೆದಿದ್ದ ಚುನಾವಣೆಯ ಅಂತಿಮ ಫಲಿತಾಂಶ ವಿವಿಧ ಕಾರಣಗಳಿಂದ ವಿಳಂಬವಾಗಿತ್ತು. ಆದರೆ ಶನಿವಾರ ಪ್ರಮುಖ ರಾಜ್ಯವಾದ ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ. ಪೆನ್ಸಿಲ್ವೇನಿಯಾದ 20 ಮತಗಳೊಂದಿಗೆ ಬೈಡೆನ್ 273 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ. ಇದರಿಂದ ತೀವ್ರ ಹಣಾಹಣಿಯ ರೇಸ್‌ನಲ್ಲಿ ಟ್ರಂಪ್ ಅವರನ್ನು ಬೈಡೆನ್ ಮಣಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಅಮೆರಿಕ ಅಧ್ಯಕ್ಷರಿಗೆ ಸಿಗುವ ಸಂಬಳ, ಸೌಲಭ್ಯಗಳೇನು?ಅಮೆರಿಕ ಅಧ್ಯಕ್ಷರಿಗೆ ಸಿಗುವ ಸಂಬಳ, ಸೌಲಭ್ಯಗಳೇನು?

ಅಮೆರಿಕದ ಐತಿಹಾಸಿಕ ಚುನಾವಣೆಯಲ್ಲಿ ಜೋ ಬೈಡೆನ್ ಜಯಗಳಿಸಿದ್ದಾರೆ ಎಂದು ಸಿಎನ್ಎನ್, ಎಪಿ ಮತ್ತು ಎಬಿಸಿ ಸುದ್ದಿ ವಾಹಿನಿಗಳು ಕೂಡ ಪ್ರಕಟಿಸಿವೆ. ಮತ ಎಣಿಕೆ ಪ್ರಾರಂಭವಾದ ಸಂದರ್ಭದಿಂದಲೂ ಜೋ ಬೈಡೆನ್, ಟ್ರಂಪ್ ಅವರಿಗಿಂತ ಎಲೆಕ್ಟೊರಲ್ ಮತಗಳಲ್ಲಿ ಮುನ್ನಡೆ ಪಡೆದಿದ್ದರು. ಆದರೆ ಎರಡು ದಿನಗಳಿಂದ ಜಾರ್ಜಿಯಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ನೆವಾಡಗಳಲ್ಲಿನ ಮತಗಳ ಎಣಿಕೆ ಮತ್ತು ಫಲಿತಾಂಶ ಬಾಕಿ ಉಳಿದಿತ್ತು. ನೆವಾಡದಲ್ಲಿನ ಆರು ಎಲೆಕ್ಟೊರಲ್ ಮತಗಳನ್ನು ಕೂಡ ಬೈಡೆನ್ ಗೆದ್ದಿದ್ದಾರೆ. ಮುಂದೆ ಓದಿ.

ಕಮಲಾ ಹ್ಯಾರಿಸ್ ದಾಖಲೆ

ಕಮಲಾ ಹ್ಯಾರಿಸ್ ದಾಖಲೆ

ತಮಿಳುನಾಡಿನ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಮುಂದಿನ ಉಪಾಧ್ಯಕ್ಷರಾಗಲಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ಈ ಮೂಲಕ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಏರಲಿರುವ ಮೊದಲ ಮಹಿಳೆ ಎನಿಸಲಿದ್ದಾರೆ. ಅಷ್ಟೇ ಅಲ್ಲ, ಅವರು ದೇಶದ ಮೊದಲ ಕಪ್ಪು ವರ್ಣೀಯ ಹಾಗೂ ದಕ್ಷಿಣ ಏಷ್ಯಾ ಮೂಲದ ಉಪಾಧ್ಯಕ್ಷೆ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ.

ನಾನೇ ಗೆದ್ದೆ ಎಂದ ಟ್ರಂಪ್

ನಾನೇ ಗೆದ್ದೆ ಎಂದ ಟ್ರಂಪ್

ಸಿಎನ್ಎನ್ ಮತ್ತು ಇತರೆ ಮಾಧ್ಯಮ ಸಂಸ್ಥೆಗಳು ಜೋ ಬೈಡೆನ್ ಅವರ ಗೆಲುವನ್ನು ಅಧಿಕೃತವಾಗಿ ಪ್ರಕಟಿಸುವ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ಟ್ವೀಟ್ ಮಾಡಿದ್ದಾರೆ. 'ನಾನು ಈ ಚುನಾವಣೆಯಲ್ಲಿ ಬಹಳಷ್ಟು ಅಂತರದಿಂದ ಗೆದ್ದಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಜಯ

ಪೆನ್ಸಿಲ್ವೇನಿಯಾದಲ್ಲಿ ಜಯ

ಪೆನ್ಸಿಲ್ವೇನಿಯಾದಲ್ಲಿ ಜೋ ಬೈಡೆನ್ ಅವರು 3,345,906 ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ 3,311,448 ಮತಗಳನ್ನು ಗಳಿಸಿದ್ದಾರೆ. ಶೇ 49.68ರಷ್ಟು ಮತಗಳನ್ನು ಪಡೆದಿರುವ ಬೈಡೆನ್, ಶೇ 49.17ರಷ್ಟು ಮತಗಳನ್ನು ಗಳಿಸಿದ ಟ್ರಂಪ್ ಅವರಿಗಿಂತ ಅಲ್ಪ ಮತಗಳಿಂದ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದ್ದಾರೆ.

ಅಮೆರಿಕದ ಅತಿ ಹಿರಿಯ ಅಧ್ಯಕ್ಷ

ಅಮೆರಿಕದ ಅತಿ ಹಿರಿಯ ಅಧ್ಯಕ್ಷ

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ.

English summary
US Elections: Democratic candidate Joe Biden become the 46th president of America after winning Pennsylvania with 20 electoral votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X