ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು 77 ದಿನವಷ್ಟೇ, ಮತ್ತೆ ಸೇರಿಕೊಳ್ಳುತ್ತೇವೆ: ಹವಾಮಾನ ಒಪ್ಪಂದದ ಸೇರ್ಪಡೆಗೆ ಬೈಡೆನ್ ಶಪಥ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 5: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ, ಆರ್ಥಿಕ ನೀತಿಗಳಿಗೆ ವಿರುದ್ಧ ನೀತಿಗಳನ್ನು ಅನುಸರಿಸುವ ಸೂಚನೆಯನ್ನು ಜೋ ಬೈಡನ್ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಸಂಪೂರ್ಣವಾಗಿ ಹೊರಬೀಳುವ ಮುನ್ನವೇ ಜಯದ ಭರವಸೆ ಹೊಂದಿರುವ ಬೈಡೆನ್, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಐತಿಹಾಸಿಕ ಪ್ಯಾರಿಸ್ ಒಪ್ಪಂದಕ್ಕೆ ತಮ್ಮ ಆಡಳಿತದ ಅಮೆರಿಕ ಮರಳಿ ಸೇರಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

2015ರಲ್ಲಿ ನಡೆದಿದ್ದ ಹವಾಮಾನ ಬದಲಾವಣೆಗಳ ಕುರಿತಾದ ಅಂತಾರಾಷ್ಟ್ರೀಯ ಪ್ಯಾರಿಸ್ ಒಪ್ಪಂದವು ಅಮೆರಿಕಕ್ಕೆ ಮಾರಕವಾಗಿದೆ. ಇದರಿಂದಾಗಿ ನಾವು ಸುಖಾಸುಮ್ಮನೆ ಹಣ ಖರ್ಚು ಮಾಡಬೇಕು ಎಂದು ಡೊನಾಲ್ಡ್ ಟ್ರಂಪ್, ಒಪ್ಪಂದದಿಂದ ಹೊರಬಂದಿದ್ದರು. ಮೂರು ವರ್ಷಗಳ ಹಿಂದೆ ಒಪ್ಪಂದದಿಂದ ಹೊರಬರುವ ಘೋಷಣೆಯು ನವೆಂಬರ್ 4ರಂದು ಅಧಿಕೃತವಾಗಿ ಜಾರಿಗೆ ಬಂದಿದೆ. ಬುಧವಾರದಿಂದ ಅಮೆರಿಕ ಈ ಒಪ್ಪಂದದಿಂದ ಅಧಿಕೃತವಾಗಿ ಹೊರ ನಡೆದಂತಾಗಿದೆ.

ಹವಾಮಾನ ವೈಪರೀತ್ಯದ ಬಗ್ಗೆ ವಿಜ್ಞಾನಕ್ಕೆ ಏನೂ ಗೊತ್ತಿಲ್ಲ: ಟ್ರಂಪ್ಹವಾಮಾನ ವೈಪರೀತ್ಯದ ಬಗ್ಗೆ ವಿಜ್ಞಾನಕ್ಕೆ ಏನೂ ಗೊತ್ತಿಲ್ಲ: ಟ್ರಂಪ್

'ಇಂದು, ಟ್ರಂಪ್ ಆಡಳಿತವು ಪ್ಯಾರಿಸ್ ಹವಾಮಾಣ ಒಪ್ಪಂದವನ್ನು ಅಧಿಕೃತವಾಗಿ ತೊರೆದಿದೆ. ಇನ್ನು ಸರಿಯಾಗಿ 77 ದಿನಗಳಲ್ಲಿ ಬೈಡೆನ್ ಆಡಳಿತವು ಅದಕ್ಕೆ ಮತ್ತೆ ಸೇರಿಕೊಳ್ಳಲಿದೆ' ಎಂದು ಜೋ ಬೈಡೆನ್ ಟ್ವೀಟ್‌ ಮಾಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸನ್ನಿಹಿತವಿರುವ ಬೈಡೆನ್, ಗೆಲುವು ತಮ್ಮದಾಗಲಿದ್ದು, 77 ದಿನಗಳಲ್ಲಿ ಟ್ರಂಪ್ ಅವರಿಂದ ತಮಗೆ ಅಧಿಕಾರ ಹಸ್ತಾಂತರವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.

US Elections: Joe Biden Vows To Rejoin Paris Climate Agreement

ಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿ

ಬರಾಕ್ ಒಬಾಮಾ ಸರ್ಕಾರದ ಸಂದರ್ಭದಲ್ಲಿ ಅಮೆರಿಕವು ಹವಾಮಾನ ಬದಲಾವಣೆ ಕುರಿತಾದ ಒಪ್ಪಂದಕ್ಕೆ ಬದ್ಧವಾಗಿತ್ತು. ಇದರಲ್ಲಿ ಅಮೆರಿಕ ಮತ್ತು 187 ದೇಶಗಳು ಸಹಿ ಹಾಕಿದ್ದವು. ಆದರೆ ಈ ಒಪ್ಪಂದದಿಂದ ಅಮೆರಿಕಕ್ಕೆ ಬಹಳ ನಷ್ಟವಾಗಲಿದೆ. ರಷ್ಯಾ, ಚೀನಾ ಮತ್ತು ಭಾರತದಂತಹ ದೇಶಗಳಿಗೆ ಲಾಭ ಸಿಗಲಿದೆ. ಇದು ಅಮೆರಿಕಕ್ಕೆ ಭಾರಿ ಆರ್ಥಿಕ ಹೊಡೆತ ನೀಡಲಿದ್ದು, 2025ರ ವೇಳೆಗೆ 2.5 ಮಿಲಿಯನ್ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು.

English summary
US Elections: Democratic candidate Joe Biden has pledged that his administration would rejoin the Paris Agreement in next 77 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X