ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 7: ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್, ತಮ್ಮ ಗೆಲುವಿಗಾಗಿ ಅಮೆರಿಕದ ಜನತೆಗೆ ಭಾವಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

'ಅಮೆರಿಕ, ನಮ್ಮ ಮಹಾನ್ ದೇಶವನ್ನು ನಡೆಸಲು ನೀವು ನನ್ನನ್ನು ಆಯ್ಕೆ ಮಾಡಿರುವುದು ನನ್ನ ಪಾಲಿನ ಗೌರವ. ನಮ್ಮ ಮುಂದೆ ಇರುವ ಕಾರ್ಯಗಳು ಕಠಿಣವಾಗಿವೆ. ಆದರೆ ನಾನು ನಿಮಗೆ ಈ ವಚನವನ್ನು ನೀಡುತ್ತೇನೆ; ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷನಾಗುತ್ತೇನೆ- ನೀವು ನನಗೆ ಮತ ನೀಡಿರಲಿ ಅಥವಾ ನೀಡದೇ ಇರಲಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Breaking: ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆBreaking: ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

ಸುದ್ದಿ ಮಾಧ್ಯಮಗಳು ಬೈಡೆನ್ ಅವರು ಜಯಶಾಲಿ ಎಂದು ಬಿಂಬಿಸುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್, ತಾವು ಚುನಾವಣಾ ವಿಜಯಶಾಲಿ ಎಂದು ಸುಳ್ಳು ಸುಳ್ಳೇ ತೋರಿಸಿಕೊಳ್ಳಲು ಬೈಡನ್ ಧಾವಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

'ನನ್ನ ಮೇಲೆ ನೀವು ಇರಿಸಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ' ಎಂದಿರುವ ಜೋ ಬೈಡೆನ್, ಅಮೆರಿಕದ ಕುರಿತಾದ ಹಾಡಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.

ಕಮಲಾ ಸಂತಸ

ಕಮಲಾ ಸಂತಸ

ಇದೇ ವಿಡಿಯೋವನ್ನು ಕಮಲಾ ಹ್ಯಾರಿಸ್ ಕೂಡ ಹಂಚಿಕೊಂಡಿದ್ದಾರೆ. ಭಾರತ ಮೂಲದ ಕಮಲಾ ಹ್ಯಾರಿಸ್, ಅಮೆರಿಕದ ಮೊದಲ ಮಹಿಳಾ ಮತ್ತು ಕಪ್ಪು ವರ್ಣೀಯ ಉಪಾಧ್ಯಕ್ಷೆಯಾಗಿ ನೇಮಕವಾಗುತ್ತಿದ್ದಾರೆ. 'ಈ ಚುನಾವಣೆಯು ಜೋ ಬೈಡನ್ ಅಥವಾ ನನಗಿಂತಲೂ ಹೆಚ್ಚು ಮುಖ್ಯವಾಗಿತ್ತು. ಇದು ಅಮೆರಿಕದ ಆತ್ಮ ಮತ್ತು ನಮ್ಮ ಚೇತನ ಹೋರಾಟವಾಗಿತ್ತು. ನಮ್ಮ ಮುಂದೆ ಸಾಕಷ್ಟು ಕೆಲಸಗಳು ಮಾಡಲು ಇವೆ. ಈಗಿನಿಂದಲೇ ಶುರು ಮಾಡೋಣ' ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮ್ಮ ಇದ್ದಿದ್ದರೆ...

ಅಮ್ಮ ಇದ್ದಿದ್ದರೆ...

'ನಾವು ಏನು ಬೇಕಾದರೂ ಆಗಬಹುದು ಮತ್ತು ಏನು ಬೇಕಾದರೂ ಮಾಡಬಹುದು ಎಂದು ಅಮ್ಮ ನಮಗೆ ಕಲಿಸಿಕೊಟ್ಟಿದ್ದರು. ಆಕೆ ಇಂದು ಇದ್ದಿದ್ದರೆ ಹೆಮ್ಮೆ ಪಡುತ್ತಿದ್ದರು' ಎಂದು ಕಮಲಾ ಹ್ಯಾರಿಸ್ ಅವರ ಸಹೋದರಿ ಮಾಯಾ ಹ್ಯಾರಿಸ್, ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

ಹಿಲರಿ ಕೃತಜ್ಞತೆ

ಹಿಲರಿ ಕೃತಜ್ಞತೆ

'ಮತದಾರರು ಮಾತನಾಡಿದ್ದಾರೆ. ಅವರು ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಮುಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಇದು ಇತಿಹಾಸ ನಿರ್ಮಾಣದ ಘಟ್ಟ. ಟ್ರಂಪ್ ಅವರ ನಿರಾಕರಣೆ ಮತ್ತು ಅಮೆರಿಕದ ಪಾಲಿಗೆ ಹೊಸ ಪುಟ. ಇದು ನಡೆಯಲು ಸಾಧ್ಯವಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು' ಎಂದು ಹಿಲರಿ ಕ್ಲಿಂಟನ್ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಟ್ವೀಟ್‌ಗಳು ಡಿಲೀಟ್

ಟ್ರಂಪ್ ಟ್ವೀಟ್‌ಗಳು ಡಿಲೀಟ್

ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಈ ಫಲಿತಾಂಶವನ್ನು ತಾವು ಒಪ್ಪಿಕೊಳ್ಳುವುದಿಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಕೆಲವು ಗಂಟೆಗಳಲ್ಲಿ ಮಾಡಿದ್ದ ಸರಣಿ ಟ್ವೀಟ್‌ಗಳು ವಿವಾದಾತ್ಮಕ ಅಥವಾ ತಪ್ಪುದಾರಿಗೆ ಎಳೆಯುವಂತಿದೆ ಎಂದು ಟ್ವಿಟ್ಟರ್ ಅವುಗಳನ್ನು ಅಡಗಿಸಿದೆ.

English summary
US Elections: Newly elected President, Democratic candidate Joe Biden said that he will be a president for all Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X