ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಜಿಯಾ ಮರು ಎಣಿಕೆಯಲ್ಲಿಯೂ ಬೈಡನ್‌ಗೆ ಜಯ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 20: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾದ ಎಲ್ಲ ಮತಪತ್ರಗಳನ್ನು ಖುದ್ದು ಮರು ಎಣಿಕೆ ಮಾಡುವ ಕಾರ್ಯ ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ಜೋ ಬೈಡನ್ ಅವರೇ ಗೆದ್ದಿರುವುದನ್ನು ಖಚಿತಪಡಿಸಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ.

ಮೂಲದಲ್ಲಿ ಮಾಡಲಾಗಿದ್ದ ಯಾಂತ್ರಿಕ ಮತ ಎಣಿಕೆಯಲ್ಲಿ ಎಷ್ಟು ಮತಗಳು ತೋರಿಸಿದ್ದವೋ ಅಷ್ಟೇ ಮತಗಳು ಖುದ್ದು ಅಧಿಕಾರಿಗಳು ನಡೆಸಿದ ಎಣಿಕೆಯಲ್ಲಿಯೂ ಬಿದ್ದಿರುವುದನ್ನು ಮರು ಎಣಿಕೆಯು ಖಚಿತಪಡಿಸಿದೆ ಎಂದು ಜಾರ್ಜಿಯಾ ರಾಜ್ಯ ಕಾರ್ಯದರ್ಶಿ ಬ್ರಾಡ್ ರೆಫೆನ್‌ಸ್ಪೆರ್ಗರ್ ವೆಬ್‌ಸೈಟ್‌ನಲ್ಲಿ ಹೇಳಿಕೆ ಪ್ರಕಟಿಸಲಾಗಿದೆ.

ನಿಯಮಗಳಿಗೆ ಅನುಗುಣವಾಗಿ ಚೀನಾ ನಡೆದುಕೊಳ್ಳಲಿ: ಬೈಡನ್ನಿಯಮಗಳಿಗೆ ಅನುಗುಣವಾಗಿ ಚೀನಾ ನಡೆದುಕೊಳ್ಳಲಿ: ಬೈಡನ್

ಜಾರ್ಜಿಯಾದಲ್ಲಿ ಜೋ ಬೈಡನ್ ಅವರೇ ಗೆದ್ದಿದ್ದಾರೆ ಎಂಬ ಸ್ಪಷ್ಟೀಕರಣವು ಹೊಸ ದಾಖಲೆಗೆ ಕಾರಣವಾಗಿದೆ. ಹೆಚ್ಚೂಕಡಿಮೆ ಮೂರು ದಶಕಗಳ ಬಳಿಕ ಅಮೆರಿಕದ ದಕ್ಷಿಣ ರಾಜ್ಯದಲ್ಲಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಗೆಲುವು ಕಂಡಂತಾಗಿದೆ.

 US Elections: Joe Biden Declared Winner In Georgia After Manual Ballot Recount

ರಿಪಬ್ಲಿಕನ್ ಪಕ್ಷದ ಪ್ರಬಲ ನೆಲೆಯಾದ ಜಾರ್ಜಿಯಾದಲ್ಲಿ ಬೈಡನ್ ಗೆದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಫಲಿತಾಂಶವನ್ನು ನಿರಾಕರಿಸಿದ್ದ ಡೊನಾಲ್ಡ್ ಟ್ರಂಪ್, ಇಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದರು. ಮರು ಮತ ಎಣಿಕೆಗೂ ಅವರು ಒತ್ತಾಯಿಸಿದ್ದರು. ಆದರೆ ಈಗ ಮರು ಎಣಿಕೆಯಲ್ಲಿಯೂ ಬೈಡನ್ ಗೆಲುವು ಕಂಡಿದ್ದಾರೆ. ಈ ಮೂಲಕ ರಾಜ್ಯದ 16 ಎಲೆಕ್ಟೊರಲ್ ಮತಗಳು ಅವರ ಪಾಲಾಗಿವೆ.

ಮಿಚಿಗಾನ್ ನಲ್ಲಿ ಮರು ಮತಎಣಿಕೆ ಅಭಿಯಾನ ಕೈಬಿಟ್ಟ ಟ್ರಂಪ್ಮಿಚಿಗಾನ್ ನಲ್ಲಿ ಮರು ಮತಎಣಿಕೆ ಅಭಿಯಾನ ಕೈಬಿಟ್ಟ ಟ್ರಂಪ್

ಪೆನ್ಸಿಲ್ವೇನಿಯಾ, ಮಿಚಿಗನ್ ಮತ್ತು ವಿಸ್ಕೊನ್ಸಿನ್‌ನಂತಹ ಪ್ರಮುಖ ರಾಜ್ಯಗಳಲ್ಲಿ ಬೈಡನ್ ಗೆಲುವು ಸಾಧಿಸಿದ್ದಾರೆ. ಜಾರ್ಜಿಯಾದಲ್ಲಿ ತೀವ್ರ ನಿಕಟ ಹಣಾಹಣಿ ನಡೆದಿತ್ತು. ಬೈಡನ್ ಅವರು ಒಟ್ಟು 306 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದು, ಟ್ರಂಪ್ 232 ಎಲೆಕ್ಟೊರಲ್ ಮತಗಳಿಗೆ ಸೀಮಿತವಾಗಿದ್ದಾರೆ.

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

English summary
US Elections: President- elect Joe Biden has been declared as a winner in Georgia state after completion of a manual recount of all the ballots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X