ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಧಿಕ ಮತ ಗಳಿಕೆ: ಬರಾಕ್ ಒಬಾಮ ದಾಖಲೆ ಮುರಿದ ಜೋ ಬೈಡೆನ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 5: ಅಮೆರಿಕ ಚುನಾವಣೆಯ ಇತಿಹಾಸದಲ್ಲಿಯೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದುವರೆಗಿನ ಅಮೆರಿಕ ಚುನಾವಣೆಯ ಚರಿತ್ರೆಯಲ್ಲಿ ಯಾವ ಅಭ್ಯರ್ಥಿಯೂ ಪಡೆಯದಷ್ಟು ಮತಗಳನ್ನು ಬೈಡೆನ್ ಪಡೆದಿದ್ದಾರೆ.

ಬುಧವಾರದ ಮಧ್ಯಾಹ್ನದ ವೇಳೆಗಿನ ಮತಗಳನ್ನು ಗಮನಿಸಿದಾಗ ಜೋ ಬೈಡನ್ ಅವರು 72 ಮಿಲಿಯನ್ ಮತಗಳನ್ನು ಕ್ರಮಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ದಾಖಲೆಯನ್ನು ಬೈಡೆನ್ ಮುರಿದಿದ್ದಾರೆ. 2008ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿ ಆಯ್ಕೆಯಾಗಿದ್ದ ಬರಾಕ್ ಒಬಾಮಾ 69.4 ಮಿಲಿಯನ್ ಮತಗಳನ್ನು ಪಡೆದಿದ್ದರು.

ಇನ್ನು 77 ದಿನವಷ್ಟೇ, ಮತ್ತೆ ಸೇರಿಕೊಳ್ಳುತ್ತೇವೆ: ಹವಾಮಾನ ಒಪ್ಪಂದದ ಸೇರ್ಪಡೆಗೆ ಬೈಡೆನ್ ಶಪಥಇನ್ನು 77 ದಿನವಷ್ಟೇ, ಮತ್ತೆ ಸೇರಿಕೊಳ್ಳುತ್ತೇವೆ: ಹವಾಮಾನ ಒಪ್ಪಂದದ ಸೇರ್ಪಡೆಗೆ ಬೈಡೆನ್ ಶಪಥ

ಈ ಬಾರಿ ಒಬಾಮಾ ಅವರ ದಾಖಲೆಯನ್ನು ಮುರಿದು ಸಾಗಿರುವ ಬೈಡನ್ ಅವರ ಒಟ್ಟು ಮತಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನ ಆಗಿರುವುದರಿಂದ ಮಾಜಿ ಉಪಾಧ್ಯಕ್ಷ ಬೈಡನ್ ಅವರ ಮತ ಗಳಿಕೆ ಹೆಚ್ಚಾಗಿದೆ. ಅಮೆರಿಕದ ಇತಿಹಾಸದಲ್ಲಿ ಜನರು ಇಷ್ಟು ಪ್ರಮಾಣದಲ್ಲಿ ಮತದಾನದಲ್ಲಿ ತೊಡಗಿದ್ದು ಇದೇ ಮೊದಲು.

 US Elections: Joe Biden Breaks Record With Most Votes Won By Any Presidential Candidate

ಚುನಾವಣಾ ದಿನಕ್ಕೂ ಮುನ್ನ 102 ಮಿಲಿಯನ್‌ಗೂ ಅಧಿಕ ಮಂದಿ ಮತ ಚಲಾಯಿಸಿದ್ದರು. ಪೆನ್ಸಿಲ್ವೇನಿಯಾ, ನೆವಾಡ ಮತ್ತು ಜಾರ್ಜಿಯಾದಂತಹ ಪ್ರಮುಖ ರಾಜ್ಯಗಳಲ್ಲಿ ಜೋ ಬೈಡೆನ್ ಅಧಿಕ ಮತಗಳನ್ನು ಪಡೆದಿದ್ದಾರೆ. ಈ ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಪ್ರಗತಿಯಲ್ಲಿದೆ. ಮುಖ್ಯವಾಗಿ ಮೇಲ್ ಮೂಲಕ ಬಂದ ಮತಗಳು ಬೈಡೆನ್ ಅವರಿಗೆ ಹೆಚ್ಚು ಅನುಕೂಲರವಾಗಿವೆ.

ವಿಜಯ ಘೋಷಣೆ ಮಾಡುವುದಿಲ್ಲ, ಎಣಿಕೆ ಮುಗಿಯುವವರೆಗೂ ಕಾಯುತ್ತೇವೆ: ಜೋ ಬೈಡೆನ್ವಿಜಯ ಘೋಷಣೆ ಮಾಡುವುದಿಲ್ಲ, ಎಣಿಕೆ ಮುಗಿಯುವವರೆಗೂ ಕಾಯುತ್ತೇವೆ: ಜೋ ಬೈಡೆನ್

ರಾಷ್ಟ್ರವ್ಯಾಪಿ ಎಣಿಕೆಯಾದ ಮತಗಳಲ್ಲಿ ಶೇ 50.4ರಷ್ಟು ಮತಗಳನ್ನು ಬೈಡೆನ್ ಪಡೆದಿದ್ದಾರೆ. ಅವರ ಎದುರಾಳಿ ಡೊನಾಲ್ಡ್ ಟ್ರಂಪ್ ಶೇ 48ರಷ್ಟು ಮತಗಳನ್ನು ಪಡೆದಿದ್ದಾರೆ. ಶೇ 87ಕ್ಕೂ ಅಧಿಕ ಮತಗಳು ಎಣಿಕೆಯಾಗಿವೆ.

English summary
US Elections: Democratic candidate Joe Biden breaks the record with most votes won by any presidential candidate in US history beating Barack Obama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X