ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಹಾಳು ಮಾಡಿದ್ದು ಅಷ್ಟಿಷ್ಟಲ್ಲ: ಅಮೆರಿಕದ ಮಾಧ್ಯಮಗಳ ಆರೋಪ

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಮುಂದಿನ ವಾರ ಮುಕ್ತಾಯವಾಗಲಿದ್ದು, ನೂತನ ಅಧ್ಯಕ್ಷರ ಆಯ್ಕೆಗೆ ಕೌಂಟ್‌ಡೌನ್ ಶುರುವಾಗಲಿದೆ. ಈ ಹೊತ್ತಲ್ಲೇ ಟ್ರಂಪ್ ವಿರುದ್ಧ ಅಮೆರಿಕ ಮಾಧ್ಯಮಗಳು ಸಿಟ್ಟಿಗೆದ್ದಿವೆ.

ಅಲ್ಲದೆ ಡೊನಾಲ್ಡ್ ಟ್ರಂಪ್ ಕಳೆದ 4 ವರ್ಷಗಳಲ್ಲಿ, ಅಂದರೆ ತಮ್ಮ ಆಡಳಿತಾವಧಿಯಲ್ಲಿ ಏನೆಲ್ಲಾ ಎಡವಟ್ಟುಗಳನ್ನು ಮಾಡಿದ್ದಾರೆ ಎಂಬುದನ್ನು ತಾಳೆಹಾಕಿ ನೋಡುತ್ತಿವೆ. ಟ್ರಂಪ್ ವಿರುದ್ಧ ಈಗ ಕೇಳಿಬಂದಿರುವ ಪ್ರಮುಖ ಆರೋಪವೇ ಜಾಗತಿಕ ಸಂಬಂಧಕ್ಕೆ ಸೇರಿದ್ದು. ಇಡೀ ಜಗತ್ತಿನ ಪಾಲಿಗೆ ಅಮೆರಿಕ ಬಾಸ್ ಆಗಿತ್ತು.

ಅಂತೂ ಇಂತೂ ಚೇತರಿಕೆ ಕಂಡ ಅಮೆರಿಕದ ಆರ್ಥಿಕತೆಅಂತೂ ಇಂತೂ ಚೇತರಿಕೆ ಕಂಡ ಅಮೆರಿಕದ ಆರ್ಥಿಕತೆ

ಆದರೆ ಟ್ರಂಪ್ ಅವಧಿಯಲ್ಲಿ ಅಮೆರಿಕ ವಿಶ್ವದ ಸ್ನೇಹ ಮತ್ತು ನಂಬಿಕೆಯನ್ನ ಕಳೆದುಕೊಂಡಿದೆ ಎಂಬ ಗಂಭೀರ ಆರೋಪ ಟ್ರಂಪ್ ವಿರುದ್ಧ ಕೇಳಿಬಂದಿದೆ. ಅಮೆರಿಕದ ಸ್ನೇಹಿತ ರಾಷ್ಟ್ರಗಳು ಟ್ರಂಪ್ ಅವಧಿಯಲ್ಲಿ ದೂರವಾಗಿ, ಬೇರೆ ದೇಶಗಳ ಸಹಾಯ ಕೇಳುತ್ತಿದ್ದಾರೆ.

ಪ್ರಮುಖವಾಗಿ ಯುರೋಪ್ ಹಾಗೂ ಅಮೆರಿಕದ ಸಂಬಂಧದಲ್ಲಿ ಟ್ರಂಪ್ ಹುಳಿ ಹಿಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಟ್ರಂಪ್ ಮಾಡಿರುವ ಈ ಡ್ಯಾಮೇಜ್ ಸರಿ ಮಾಡಲು ಅಮೆರಿಕ ಹತ್ತಾರು ವರ್ಷಗಳ ಕಾಲ ಕಾಯಬೇಕು ಎನ್ನುತ್ತಿವೆ ಅಮೆರಿಕದ ಮಾಧ್ಯಮಗಳು.

ಟ್ರಂಪ್‌ ಆಡಳಿತಕ್ಕೆ ಕೊರೊನಾ ಗುನ್ನಾ

ಟ್ರಂಪ್‌ ಆಡಳಿತಕ್ಕೆ ಕೊರೊನಾ ಗುನ್ನಾ

ಅಮೆರಿಕನ್ನರಿಗೆ ಕೊರೊನಾ ನರಕದ ದಾರಿ ತೋರುತ್ತಿದೆ. ಹತ್ತಾರು ಲಕ್ಷ ಜನರಿಗೆ ಡೆಡ್ಲಿ ಸೋಂಕು ವಕ್ಕರಿಸಿದ್ದು, ಟ್ರಂಪ್ ಆಡಳಿತಕ್ಕೆ ಕೆಟ್ಟ ಹೆಸರು ತಂದಿದೆ. ಹತ್ತಿರ ಹತ್ತಿರ 2.5 ಲಕ್ಷ ಅಮೆರಿಕನ್ನರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಾ ಸಾಗಿದ್ದು, ಟ್ರಂಪ್‌ಗೆ ತಲೆನೋವು ತಂದಿದೆ. ಹೀಗೆ ಟ್ರಂಪ್ ಕೊರೊನಾ ನಿರ್ವಹಣೆಯಲ್ಲಿ ತೋರಿದ ವರ್ತನೆ ಕೂಡ ಅಮೆರಿಕನ್ ವೋಟರ್ಸ್ ಹಾಗೂ ಅಲ್ಲಿನ ಮಾಧ್ಯಮಗಳನ್ನು ಸಿಟ್ಟಿಗೇಳುವಂತೆ ಮಾಡಿದೆ.

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಟ್ರಂಪ್‌ಗೂ ಹಾಗೂ ಕೊರೊನಾ ವಿವಾದಗಳಿಗೂ ಅವಿನಾಭಾವ ಸಂಬಂಧ ಇರುವಂತೆ ಕಾಣುತ್ತಿದೆ. ಏಕೆಂದರೆ ಟ್ರಂಪ್ ಹೀಗೆ ಕೊರೊನಾ ವಿಚಾರವಾಗಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ಕೊರೊನಾ ಕುರಿತು ಟ್ರಂಪ್ ಕೊಟ್ಟ ಹೇಳಿಕೆಗಳು ಭಾರಿ ವಿವಾದ ಸೃಷ್ಟಿ ಮಾಡಿದ್ದವು. ಅದರಲ್ಲೂ ಕ್ರಿಮಿ ನಾಶಕ ವಿಷವನ್ನು ಕೊರೊನಾ ಸೋಂಕಿತರ ದೇಹಕ್ಕೆ ಚುಚ್ಚಬಹುದು ಅಥವಾ ನೇರಳಾತೀತ ಕಿರಣಗಳನ್ನು ಸೋಂಕಿತರ ದೇಹದ ಮೇಲೆ ಬಿಟ್ಟರೆ ಕೊರೊನಾ ಸಾಯುತ್ತೆ ಎಂದಿದ್ದ ಮಿ.ಟ್ರಂಪ್ ಊಹೆಗಳು ಸಂಚಲನ ಸೃಷ್ಟಿಸಿತ್ತು. ಎಲೆಕ್ಷನ್ ಡಿಬೆಟ್ ವೇಳೆ ಅಮೆರಿಕದಲ್ಲಿ ಕೊರೊನಾ ಪ್ರಭಾವದ ಬಗ್ಗೆ ಪ್ರಶ್ನೆ ಎದ್ದಾಗ, ಕೊರೊನಾ ತೊಲಗುತ್ತಿದೆ ಎನ್ನುವ ಮೂಲಕ ಟ್ರಂಪ್ ಆಕ್ರೋಶಕ್ಕೆ ತುತ್ತಾಗಿದ್ದರು.

ಅಬ್ಬಬ್ಬಾ ಎಡವಟ್ಟು ಒಂದಾ.. ಎರಡಾ..!

ಅಬ್ಬಬ್ಬಾ ಎಡವಟ್ಟು ಒಂದಾ.. ಎರಡಾ..!

ಕೊರೊನಾ ಸೋಂಕಿನ ಬಗ್ಗೆ ಸಾಕಷ್ಟು ಅಜಾಗರೂಕ ವರ್ತನೆ ತೋರಿದ್ದ ಟ್ರಂಪ್‌ಗೆ ಮಹಾಮಾರಿ ವಕ್ಕರಸಿತ್ತು. ಆಗಲೂ ಕೊರೊನಾ ಬಗ್ಗೆ ತಮ್ಮ ಅಸಡ್ಯ ಬಿಡದ ಅಮೆರಿಕ ಅಧಕ್ಷ ಟ್ರಂಪ್, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಅಭಿಮಾನಿಗಳ ಭೇಟಿಗೆ ಹೊರಗೆ ಬಂದಿದ್ದರು. ಕಾರಿನಲ್ಲಿ ಕೂತು, ತಮ್ಮ ಸಿಬ್ಬಂದಿ ಜೊತೆಗೆ ಟ್ರಂಪ್ ಹೊರಗಡೆ ವಿಸಿಟ್ ಕೊಟ್ಟು ಹೋಗಿದ್ದರು. ಇದು ಟ್ರಂಪ್ ವಿರುದ್ಧದ ಆಕ್ರೋಶ ಹೆಚ್ಚಾಗುವಂತೆ ಮಾಡಿತ್ತು. ಅದರಲ್ಲೂ ಈ ಘಟನೆ ನಂತರ ಸಾಂಕ್ರಾಮಿಕ ರೋಗಗಳ ತಜ್ಞರು, ಟ್ರಂಪ್ ಜೊತೆ ಕಾರಿನಲ್ಲಿ ಕೂತಿದ್ದ ಅಧಿಕಾರಿಗಳನ್ನು ತಕ್ಷಣ ಕ್ವಾರಂಟೈನ್ ಮಾಡಿ ಎಂದು ಆಗ್ರಯಿಸಿದ್ದರು.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಜಗತ್ತಿಗೆ ತೊಂದರೆ ಆದರೆ ಮಾಸ್ಕೋ ಬೇಕಿಲ್ಲ..!

ಜಗತ್ತಿಗೆ ತೊಂದರೆ ಆದರೆ ಮಾಸ್ಕೋ ಬೇಕಿಲ್ಲ..!

ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಈಗ ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ಅಮೆರಿಕದ ವಿರೋಧಿಗಳಿಗೆ ಅದೇನು ಬೇಕೋ ಹಾಗೇ ಟ್ರಂಪ್ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಕೊರೊನಾ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ಅಮೆರಿಕ ಮಾನ ಹರಾಜಾಗಿದೆ ಎಂದು ಒಬಾಮಾ ಆರೋಪಿಸಿದ್ದರು. ಕಳೆದ ವಾರ ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ವಿರುದ್ಧ ಇಂತಹ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೆಲ್ಲದರ ಪರಿಣಾಮ ರಷ್ಯಾ ಹಾಗೂ ಚೀನಾ ಜಗತ್ತಿನ ಚುಕ್ಕಾಣಿಗೆ ಹಿಡಿಯಲು ಹವಣಿಸುತ್ತಿವೆ ಎಂದು ಒಬಾಮಾ ಎಚ್ಚರಿಕೆ ನೀಡಿದ್ದರು.

ಕೈಬಿಟ್ಟು ಹೋಗುತ್ತಿದೆಯಾ ಯೂರೋಪ್..?

ಕೈಬಿಟ್ಟು ಹೋಗುತ್ತಿದೆಯಾ ಯೂರೋಪ್..?

ಹೌದು, ಒಬಾಮಾ ಮಾತುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಆಘಾತಕಾರಿ ಸತ್ಯಗಳು ಹೊರಬೀಳುತ್ತವೆ. ಇದುವರೆಗೂ ಯುರೋಪ್ ಅಮೆರಿಕದ ನೆರಳಲ್ಲೇ ಬೆಳೆಯಲು ಇಚ್ಛಿಸುತ್ತಿತ್ತು. ಅದರಲ್ಲೂ 2ನೇ ಮಹಾಯುದ್ಧ ಮುಗಿದ ಬಳಿಕ ಅಮೆರಿಕ ಯುರೋಪ್ ದೇಶಗಳ ಪಾಲಿಗೆ ನಿಜವಾದ ಹೀರೋ ಆಗಿತ್ತು. ಬ್ರಿಟನ್ ಪಥನವಾದ ಬಳಿಕ ಅಮೆರಿಕ ಜಗತ್ತಿನ ಪರ ದೊಡ್ಡಣ್ಣನ ಪಾತ್ರ ನಿರ್ವಹಿಸುತ್ತಿದೆ. ಅದರಲ್ಲೂ ಯುರೋಪ್ ಪಾಲಿಗೆ ವಿಲನ್ ಆಗಿದ್ದ ಹಿಟ್ಲರ್‌ನ ಅಂತ್ಯವೂ ಅಮೆರಿಕದ ಸಹಾಯದಿಂದಲೇ ಆಗಿದ್ದು. ಇಷ್ಟೆಲ್ಲಾ ಇದ್ದರೂ ಕೆಲ ವರ್ಷಗಳಿಂದ ಯುರೋಪ್ ರಾಷ್ಟ್ರಗಳು ಅಮೆರಿಕದ ಸ್ನೇಹ ಮರೆಯುತ್ತಿವೆ. ಅಲ್ಲದೆ ಚೀನಾಗೆ ಹತ್ತಿರವಾಗುತ್ತಿವೆ. ಇದಕ್ಕೆಲ್ಲಾ ತಾಜಾ ಉದಾಹರಣೆ ಚೀನಾ ಯುರೋಪ್ ದೇಶಗಳಲ್ಲಿ ಮಾಡುತ್ತಿರುವ ಹೂಡಿಕೆ ಹಾಗೂ ಸಹಾಯದ ನೆಪ ಹೇಳುತ್ತಾ ಯುರೋಪ್ ರಾಷ್ಟ್ರಗಳಿಗೆ ಹತ್ತಿರವಾಗುತ್ತಿರುವ ಪರಿ ಅಮೆರಿಕನ್ನರಲ್ಲಿ ಆತಂಕ ಮೂಡಿಸುತ್ತಿದೆ.

ಜರ್ಮನಿಯಿಂದ ಹೊರಬಂದ ಅಮೆರಿಕ ಸೇನೆ

ಜರ್ಮನಿಯಿಂದ ಹೊರಬಂದ ಅಮೆರಿಕ ಸೇನೆ

ಟ್ರಂಪ್ ಮೇಲೆ ಅಮೆರಿಕದ ನಾಯಕರು ಕೆಂಡವಾಗಲು ಪ್ರಮುಖ ಕಾರಣ ಈ ಘಟನೆ. ಅಂದಹಾಗೆ ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಒಂದು ಘೋಷಣೆ ಹೊರಡಿಸಿದ್ದರು. ಜರ್ಮನಿಯಲ್ಲಿ ಬೀಡುಬಿಟ್ಟ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಘೋಷಣೆ ಮಾಡಿದ್ದರು. ಆದರೆ ರಷ್ಯಾ ಜರ್ಮನಿಯ ಮೇಲೆ ಮತ್ತೆ ದಾಳಿ ಮಾಡಿ, ಅದನ್ನು ವಶಕ್ಕೆ ಪಡೆಯಬಹುದು ಎಂಬ ಭಯದಿಂದಲೇ ಅಲ್ಲಿ ಅಮೆರಿಕ ಸೇನೆಯನ್ನು ರಕ್ಷಣೆಗೆ ಇಡಲಾಗಿತ್ತು.

ಇದು ಇಂದು, ನಿನ್ನೆಯ ಮಾತಲ್ಲ ಹತ್ತಾರು ವರ್ಷಗಳಿಂದ ಜರ್ಮನಿ ರಕ್ಷಣೆಗಾಗಿಯೇ ಅಮೆರಿಕದ ಸೇನಾ ತುಕಡಿಯನ್ನ ಜರ್ಮನಿಯಲ್ಲಿ ನಿಯೋಜಿಸಲಾಗಿದೆ. ಇದಕ್ಕೆ ಜರ್ಮನಿ ಶುಲ್ಕ ಕಟ್ಟುತ್ತಿತ್ತು. ಸಾವಿರಾರು ಕೋಟಿ ಹಣವನ್ನ ಸೇವೆಗೆ ಪ್ರತಿಯಾಗಿ ನೀಡುತ್ತಿತ್ತು. ಆದರೆ ಕೊರೊನಾ ಕಾರಣ ಜರ್ಮನಿ ಹಳೇ ಬಾಕಿ ನೀಡಲು ಆಗಿರಲಿಲ್ಲ. ಇದನ್ನೇ ದಾಳ ಮಾಡಿಕೊಂಡ ಟ್ರಂಪ್ ಜರ್ಮನಿಯಿಂದ ಅಮೆರಿಕ ಸೇನೆಯನ್ನು ವಾಪಸ್ ಕರೆಸಲು ನಿರ್ಧಾರ ಕೈಗೊಂಡಿದ್ದರು. ಇದರ ವಿರುದ್ಧ ಟ್ರಂಪ್‌ಗೆ ಸ್ವಪಕ್ಷೀಯರೇ ಬೆವರಿಳಿಸಿದ್ದರು.

English summary
US Elections: The American media is furious against the Trump decisions. Trump has been accused of sabotaging US international relations over the past 4 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X