ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 6: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ 120 ವರ್ಷಗಳ ಇತಿಹಾಸದಲ್ಲಿಯೇ ಅತ್ಯಧಿಕ ಮತಚಲಾವಣೆ 2020ರಲ್ಲಿ ನಡೆದಿದೆ ಎಂದು ಪರಿಣತರು ಹೇಳಿದ್ದಾರೆ.

ಅಮೆರಿಕ ಚುನಾವಣೆ ಪ್ರಾಜೆಕ್ಟ್‌ ಸಂಸ್ಥೆಯ ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 239 ಮಿಲಿಯನ್ ಜನರು ಈ ವರ್ಷ ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದರು. ಇದರಲ್ಲಿ ಅಂದಾಜು 160 ಮಿಲಿಯನ್ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಚಲಾವಣೆಯ ನಿಖರವಾದ ಅಂಕಿ ಅಂಶ ಸಿಗಲು ಇನ್ನೂ ಒಂದೆರಡು ವಾರಗಳು ಬೇಕಾಗಬಹುದು.

ಚುನಾವಣೆ ಅಕ್ರಮ ಎಂದ ಟ್ರಂಪ್: ಸುದ್ದಿಗೋಷ್ಠಿ ಬಹಿಷ್ಕರಿಸಿದ ಮಾಧ್ಯಮಗಳುಚುನಾವಣೆ ಅಕ್ರಮ ಎಂದ ಟ್ರಂಪ್: ಸುದ್ದಿಗೋಷ್ಠಿ ಬಹಿಷ್ಕರಿಸಿದ ಮಾಧ್ಯಮಗಳು

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಶೇ 66.9ರಷ್ಟು ದಾಖಲೆಯ ಮತದಾನ ನಡೆದಿದೆ. ಇದು 1900ರ ಇಸವಿಯಿಂದಲೇ ಅತ್ಯಧಿಕ ಶೇಕಡಾವಾರು ಪ್ರಮಾಣ. 1900ರಲ್ಲಿ ಶೇ 73.7ರಷ್ಟು ಮತದಾನ ನಡೆದಿತ್ತು. ಅಲ್ಲಿಂದ ಇಷ್ಟು ಪ್ರಮಾಣದಲ್ಲಿ ಮತದಾನವಾಗಿರಲಿಲ್ಲ.

ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ

2016ರಲ್ಲಿ ಅಮೆರಿಕದಲ್ಲಿ ಶೇ 66ರಷ್ಟು ಮತದಾನವಾಗಿದ್ದರೆ, 2008ರಲ್ಲಿ ಶೇ 58ರಷ್ಟು ಮತ ಚಲಾಚಣೆ ನಡೆದಿತ್ತು. ಮಿನ್ನೆಸೊಟಾ ಮತ್ತು ಮೈನೆ ಈ ಬಾರಿ ಅತಿ ಹೆಚ್ಚು ಮತಗಳು ಚಲಾವಣೆಯಾದ ರಾಜ್ಯಗಳಾಗಿವೆ. ಈ ರಾಜ್ಯಗಳಲ್ಲಿ ತಲಾ ಶೇ 79.2ರಷ್ಟು ಮತದಾನವಾಗಿದೆ. ಲೋವಾದಲ್ಲಿ ಶೇ 78.6ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಮೈನೆ ಮತ್ತು ಲೋವಾಗಳಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದರೆ, ಮಿನ್ನೆಸೊಟಾದಲ್ಲಿ ಜೋ ಬೈಡೆನ್ ವಿಜಯಶಾಲಿಯಾಗಿದ್ದಾರೆ. ಮುಂದೆ ಓದಿ.

ಈ ಬಾರಿ ಅತ್ಯಧಿಕ ಮತದಾನ

ಈ ಬಾರಿ ಅತ್ಯಧಿಕ ಮತದಾನ

'2020ರ ಅಧ್ಯಕ್ಷೀಯ ಚುನಾವಣೆಯು 120 ವರ್ಷಗಳಲ್ಲಿಯೇ ಅತ್ಯಧಿಕ ಮತದಾನಕ್ಕೆ ಸಾಕ್ಷಿಯಾಗಿದೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಮತಪತ್ರಗಳ ಎಣಿಕೆ ನಡೆಯಬೇಕಿರುವುದರಿಂದ ಈ ಸಂಖ್ಯೆ ಹೆಚ್ಚಾಗಬಹುದು' ಎಂದು ಫ್ಲೋರಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರೊಫೆಸರ್ ಮಿಖಾಯಲ್ ಮೆಕ್ ಡೊನಾಲ್ಡ್ ತಿಳಿಸಿದ್ದಾರೆ.

72 ಮಿಲಿಯನ್ ಮತ

72 ಮಿಲಿಯನ್ ಮತ

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅವರು ಇದುವರೆಗೂ 72 ಮಿಲಿಯನ್‌ಗೂ ಅಧಿಕ ಮತಗಳನ್ನು ಗಳಿಸಿದ್ದಾರೆ. ಇದು ಅವರದೇ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ 2016ರ ಚುನಾವಣೆಯಲ್ಲಿ ಪಡೆದಿದ್ದ ಮತಗಳಿಗಿಂತ ಎಂಟು ಮಿಲಿಯನ್‌ಗೂ ಅಧಿಕ.

ಟ್ರಂಪ್‌ಗೂ ಅಧಿಕ ಮತಗಳು

ಟ್ರಂಪ್‌ಗೂ ಅಧಿಕ ಮತಗಳು

ಡೊನಾಲ್ಡ್ ಟ್ರಂಪ್ ಕೂಡ ಶೇ 68.5ಕ್ಕೂ ಅಧಿಕ ಮತಗಳನ್ನು ಇದುವರೆಗೂ ಪಡೆದಿದ್ದಾರೆ. ಈ ಮತಗಳು ಇದುವರೆಗೆ ರಿಪಬ್ಲಿಕನ್ ಅಭ್ಯರ್ಥಿ ಗಳಿಸಿದ ಅತಿ ಹೆಚ್ಚಿನ ಮತಗಳಾಗಿವೆ. ರಾಷ್ಟ್ರವ್ಯಾಪಿ ಚುನಾವಣೆಯಲ್ಲಿ ನಡೆಯುವ ಮತದಾನಗಳ ಕುರಿತಾದ ಅಧ್ಯಯನಗಳಲ್ಲಿ 35 ರಾಷ್ಟ್ರಗಳ ಪೈಕಿ ಅಮೆರಿಕ 30ನೇ ಸ್ಥಾನ ಪಡೆದಿದೆ ಎಂದು ಪ್ಯೂ ರೀಸರ್ಚ್ ತಿಳಿಸಿದೆ.

ಅಮೆರಿಕ ಜನಾಂಗೀಯ ಮತದಾರರು

ಅಮೆರಿಕ ಜನಾಂಗೀಯ ಮತದಾರರು

ಪ್ಯೂ ರಿಸರ್ಚ್ ಸಂಸ್ಥೆ ಪ್ರಕಾರ, ಅಮೆರಿಕದಲ್ಲಿ ನೋಂದಾಯಿತರಾದ ಆಫ್ರಿಕನ್ನೇತರ ಬಿಳಿ ವರ್ಣೀಯ ಅಮೆರಿಕನ್ ಮತದಾರರ ಸಂಖ್ಯೆ ಶೇ 69ರಷ್ಟಿದೆ. ಹಿಸ್ಪಾನಿಕ್ ಮತ್ತು ಕಪ್ಪು ವರ್ಣೀಯ ನೋಂದಾಯಿತ ಮತದಾರರ ಸಂಖ್ಯೆ ಶೇ 11ರಷ್ಟಿದೆ. ಇನ್ನು ಶೇ ಎಂಟರಷ್ಟು ಮಂದಿ ಇತರೆ ಸಮುದಾಯ ಮತ್ತು ಹಿನ್ನೆಲೆಯವರಾಗಿದ್ದಾರೆ.

English summary
US Elections: 2020 Presidential election has recorded highest voter turnout in 120 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X