ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಭಾಷಣದ ವೇಳೆ ಕುಸಿದುಬಿದ್ದು ಆಸ್ಪತ್ರೆ ಸೇರಿದ ಬೆಂಬಲಿಗರು

|
Google Oneindia Kannada News

ಫ್ಲೋರಿಡಾ, ಅಕ್ಟೋಬರ್ 30: ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮಾವೇಶದ ವೇಳೆ ಬಿಸಿಲಿನ ಝಳ ತಾಳಲಾರದೆ 12ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫ್ಲೋರಿಡಾದ ಟಂಪಾದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಬಿಸಿಲಿನ ತಾಪದಿಂದ ಅನಾರೋಗ್ಯಕ್ಕೆ ಒಳಗಾದ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು. 17 ಮಂದಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಲಿನ ತೀವ್ರತೆಯನ್ನು ತಡೆಯಲಾಗದೆ ನಿಶ್ಶಕ್ತಿಯಿಂದ ವ್ಯಕ್ತಿಯೊಬ್ಬ ಕುಸಿದು ಬಿದ್ದರೆ, ಮತ್ತೊಬ್ಬ ವ್ಯಕ್ತಿ ಮಿದುಳಿನಲ್ಲಿ ಸಮಸ್ಯೆ ಕಂಡುಬಂದಿದೆ. ತೀವ್ರ ಅನಾರೋಗ್ಯಕ್ಕೆ ಒಳಗಾದವರ ಪರಿಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಬಿಡೆನ್‌ಗೆ ಮತ ಹಾಕಿದರೆ ಕ್ರಿಸ್‌ಮಸ್ ಹಬ್ಬವೇ ಇರುವುದಿಲ್ಲ: ಟ್ರಂಪ್ಬಿಡೆನ್‌ಗೆ ಮತ ಹಾಕಿದರೆ ಕ್ರಿಸ್‌ಮಸ್ ಹಬ್ಬವೇ ಇರುವುದಿಲ್ಲ: ಟ್ರಂಪ್

ಟ್ರಂಪ್ ಅವರ ಪ್ರಚಾರದ ವೇಳೆ ಬಿಸಿಲ ಝಳ ಹೆಚ್ಚಿದ್ದರಿಂದ ಅಗ್ನಿಶಾಮಕ ದಳದ ತಂಡವೊಂದು ಆಕಾಶದಿಂದ ಮಳೆ ಸುರಿದಂತೆ ಟ್ರಕ್ ಮೂಲಕ ಆಗಾಗ್ಗೆ ನೀರು ಸಿಂಪಡಿಸುವ ಮೂಲಕ ಜನರು ಉಷ್ಣತೆಯ ಹೊಡೆತಕ್ಕೆ ಬಳಲದಂತೆ ನೋಡಿಕೊಳ್ಳಲು ಪ್ರಯತ್ನಿಸಿತು.

US Elections: Dozen People Overcome By Heat, Rushed To Hospital During Trump Rally In Florida

ಒಂದು ಸಮಯದಲ್ಲಿ ಡೊನಾಲ್ಡ್ ಟ್ರಂಪ್, 'ನೀರಿನ ಸಿಂಪಡಣೆ ಸ್ನೇಹಿತರಿಂದ ಬರುತ್ತಿದೆಯೇ ಅಥವಾ ವೈರಿಗಳಿಂದಲೇ?' ಎಂದು ಪ್ರಶ್ನಿಸಿದರು. 'ಒಂದು ವೇಳೆ ವೈರಿಗಳಿಂದಾದಲ್ಲಿ ಆ ವೇಶ್ಯೆಯರ ಮಕ್ಕಳ ಬಗ್ಗೆ ಎಚ್ಚರವಹಿಸಿ' ಎಂಬ ಕೀಳು ಪದಬಳಕೆಯನ್ನೂ ಮಾಡಿದರು.

ಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿ

ಟ್ರಂಪ್ ಭಾಷಣ ಮಾಡಿದ ರೇಮಂಡ್ ಜೇಮ್ಸ್ ಕ್ರೀಡಾಂಗಣದ ಹೊರಗೆ ಸಾವಿರಾರು ಬೆಂಬಲಿಗರು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಕಿಕ್ಕಿರಿದಿದ್ದ ಜನಸಮೂಹದಲ್ಲಿ ಮಾಸ್ಕ್‌ಗಳನ್ನೂ ಧರಿಸುವ ಮುಂಜಾಗ್ರತೆಯನ್ನು ಸಹ ತೆಗೆದುಕೊಳ್ಳದೆ ಇರುವುದು ಕಂಡುಬಂತು.

English summary
US Elections: Almost 17 people were admitted hospital after overcome by heat during Donald Trump's rally in Tanda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X