ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ವಿಜಯಿ ಎಂದು ಎಲೆಕ್ಟೊರಲ್ ಕಾಲೇಜ್ ಘೋಷಿಸಿದರೆ ಶ್ವೇತಭವನ ತೊರೆಯುತ್ತೇನೆ: ಟ್ರಂಪ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 27: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರೇ ವಿಜಯಶಾಲಿ ಎಂದು ಎಲೆಕ್ಟೊರಲ್ ಕಾಲೇಜ್ ಘೋಷಿಸಿದರೆ ತಾವು ಶ್ವೇತಭವನ ತೊರೆಯವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ನಾನು ಖಂಡಿತವಾಗಿಯೂ ಶ್ವೇತಭವನ ತೊರೆಯುತ್ತೇನೆ ಮತ್ತು ನಿಮಗೆ ಅದು ತಿಳಿದಿದೆ. ಆದರೆ ಜನವರಿ 20ರವರೆಗೂ ಸಾಕಷ್ಟು ಸಂಗತಿಗಳು ಜರುಗಲಿವೆ ಎಂದು ನನಗೆ ಅನಿಸುತ್ತಿದೆ. ಭಾರಿ ವಂಚನೆ ಕಂಡುಬಂದಿದೆ. ನಾವು ಮೂರನೇ ಜಗತ್ತಿನ ದೇಶಗಳಂತಾಗಿದ್ದೇವೆ. ನಾವು ಕಂಪ್ಯೂಟರ್ ಸಾಧನಗಳನ್ನು ಬಳಸುತ್ತಿದ್ದೇವೆ, ಅದನ್ನು ಹ್ಯಾಕ್ ಮಾಡಬಹುದಾಗಿದೆ' ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೈಡನ್‌ಗೆ ಬಕೆಟ್ ಹಿಡಿದ ಚೀನಾ, 'ನಮ್ಮ-ನಿಮ್ಮ ಸಂಬಂಧ ಹೀಗೆ ಇರಲಿ’ ಬೈಡನ್‌ಗೆ ಬಕೆಟ್ ಹಿಡಿದ ಚೀನಾ, 'ನಮ್ಮ-ನಿಮ್ಮ ಸಂಬಂಧ ಹೀಗೆ ಇರಲಿ’

ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಎದುರು ಟ್ರಂಪ್ ಸೋಲು ಕಂಡಿರುವುದಾಗಿ ಬಹುತೇಕ ಮಾಧ್ಯಮ ವರದಿಗಳು ಬಿಂಬಿಸಿವೆ. ಆದರೆ ಎಲೆಕ್ಟೊರಲ್ ಕಾಲೇಜು ಘೋಷಿಸದೆ ತಾವು ಸೋಲು ಒಪ್ಪಿಕೊಳ್ಳುವುದಿಲ್ಲ ಎಂದು ಟ್ರಂಪ್ ಪಟ್ಟುಹಿಡಿದಿದ್ದಾರೆ.

US Elections: Donald Trump Says Will Leave White House If Electoral College Declares Biden Victory

ಸೋಲು ಕಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, 'ಬೈಡನ್ ಅವರನ್ನು ಎಲೆಕ್ಟೊರಲ್ ಕಾಲೇಜ್ ಅಧ್ಯಕ್ಷ ಎಂದು ಆಯ್ಕೆ ಮಾಡಿದರೆ ಅದು ತಪ್ಪಾಗಲಿದೆ. ಸೋಲು ಒಪ್ಪಿಕೊಳ್ಳುವುದು ಬಹಳ ಕಷ್ಟ' ಎಂದಿದ್ದಾರೆ.

ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಆರೋಪವನ್ನು ಟ್ರಂಪ್ ಮುಂದುವರಿಸಿದ್ದಾರೆ. 'ಈ ಚುನಾವಣೆ ದೊಡ್ಡ ವಂಚನೆ. ಭಾರಿ ಮಟ್ಟದಲ್ಲಿ ವಂಚನೆ ನಡೆದಿದೆ. ಬೈಡನ್ ಅವರು ಒಬಾಮಾರನ್ನು ಸೋಲಿಸಿದ್ದಾರೆ. ಚುನಾವಣೆಯಲ್ಲಿ ಪ್ರಮುಖ ಎನಿಸಿರುವ ಪ್ರದೇಶಗಳಲ್ಲಿ ಒಬಾಮ ಅವರಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ' ಎಂದು ಹೇಳಿದ್ದಾರೆ.

ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತ ಪಡೆದ ಬೈಡನ್ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತ ಪಡೆದ ಬೈಡನ್

ಜನವರಿ 20ರಂದು ನಡೆಯುವ ಬೈಡನ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಾಗುತ್ತೀರಾ ಎಂಬ ಪ್ರಶ್ನೆಗೆ ಟ್ರಂಪ್ ಉತ್ತರ ನೀಡಲು ನಿರಾಕರಿಸಿದರು. 'ನನಗೆ ಉತ್ತರ ಗೊತ್ತು, ಆದರೆ ನಾನು ಈಗ ಅದಕ್ಕೆ ಉತ್ತರ ನೀಡಲು ಬಯಸುವುದಿಲ್ಲ' ಎಂದಿದ್ದಾರೆ.

'ನಾನು ಭಾರಿ ಅಂತರದಿಂದ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ. ನಾನು ಭಾರಿ ಅಂತರದಿಂದ ಗೆದ್ದಿದ್ದೆ. ಆದರೆ ಅದನ್ನು ಇನ್ನೂ ವರದಿ ಮಾಡಿಲ್ಲ. ಆದರೆ ಏನಾಗುತ್ತಿದೆ ಎನ್ನುವುದು ಜನರಿಗೆ ಗೊತ್ತು. ಏನಾಗಲಿದೆ ಎನ್ನುವುದೂ ಅವರಿಗೆ ತಿಳಿದಿದೆ' ಎಂದು ಅಮೆರಿಕದ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

English summary
US Elections: US President Donald Trump said that he will leave the White House if the electoral college declares Joe Biden's victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X