ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಾಳಿ ಕೊಳಕು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 23: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದಕ್ಕೆ ಸರಿದ ಅಮೆರಿಕದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ, ಚೀನಾ ಮತ್ತು ರಷ್ಯಾದ ಗಾಳಿ ಹೊಲಸಾಗಿದೆ ಎಂದು ಟೀಕಿಸಿದ್ದಾರೆ. ಅಮೆರಿಕವು ಸ್ಪರ್ಧಾತ್ಮಕ ದೇಶದ ಗುಣವನ್ನು ಕಳೆದುಕೊಳ್ಳುವಂತೆ ಮಾಡುತ್ತೆ ಎಂಬ ಕಾರಣದಿಂದ ಒಪ್ಪಂದದಿಂದ ಹೊರ ನಡೆದಿದ್ದಾಗಿ ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಎದುರಾಳಿ ಜೋ ಬಿಡೆನ್ ಜತೆ ನಡೆದ ಕೊನೆಯ ಸಂವಾದದ ವೇಳೆ ಮಾತನಾಡಿದ ಟ್ರಂಪ್, 'ಚೀನಾ ಕಡೆ ನೋಡಿ ಎಷ್ಟು ಕೊಳಕಾಗಿದೆ. ರಷ್ಯಾದತ್ತ ನೋಡಿ, ಭಾರತದತ್ತ ನೋಡಿ. ಗಾಳಿ ಹೊಲಸಾಗಿದೆ. ನಾವು ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ವಿನಿಯೋಗಿಸಬೇಕಿತ್ತು ಮತ್ತು ನಮ್ಮನ್ನು ಅನುಚಿತವಾಗಿ ನಡೆಸಿಕೊಂಡರು. ಈ ಕಾರಣದಿಂದ ಪ್ಯಾರಿಸ್ ಒಪ್ಪಂದದಿಂದ ಹೊರ ನಡೆದೆವು' ಎಂದು ಹೇಳಿದ್ದಾರೆ.

ಅಮೆರಿಕ ಚುನಾವಣೆ: ಕೊನೆಯ ಚರ್ಚೆಯಲ್ಲಿ ಅಭ್ಯರ್ಥಿಗಳ ವಾಗ್ವಾದಅಮೆರಿಕ ಚುನಾವಣೆ: ಕೊನೆಯ ಚರ್ಚೆಯಲ್ಲಿ ಅಭ್ಯರ್ಥಿಗಳ ವಾಗ್ವಾದ

'ಪ್ಯಾರಿಸ್ ಒಪ್ಪಂದದ ಕಾರಣದಿಂದಾಗಿ ನಾನು ಲಕ್ಷಾಂತರ ಉದ್ಯೋಗಗಳು ಮತ್ತು ಸಾವಿರಾರು ಕಂಪೆನಿಗಳನ್ನು ತ್ಯಾಗ ಮಾಡುವುದಿಲ್ಲ. ಅದು ಬಹಳ ಅನ್ಯಾಯ' ಎಂದು ಟ್ರಂಪ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!

ಭಾರತ-ಅಮೆರಿಕ ಬಾಂಧವ್ಯವನ್ನು ವೃದ್ಧಿಸುವ ಸಂಬಂಧ ಮಾತುಕತೆ ನಡೆಸಲು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ನವದೆಹಲಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿಯೇ ಟ್ರಂಪ್ ಭಾರತದ ಕುರಿತು ಈ ಹೇಳಿಕೆ ನೀಡಿದ್ದಾರೆ.

ಹವಾಮಾನ ನಿರ್ವಹಣೆ ನಮ್ಮ ಜವಾಬ್ದಾರಿ

ಹವಾಮಾನ ನಿರ್ವಹಣೆ ನಮ್ಮ ಜವಾಬ್ದಾರಿ

'ಹವಾಮಾನ ಬದಲಾವಣೆಯು ಮಾನವ ಕುಲಕ್ಕೆ ಅತ್ಯಂತ ದೊಡ್ಡ ಬೆದರಿಕೆಯಾಗಿದೆ. ನಾವು ಅದನ್ನು ಎದುರಿಸುವ ನೈತಿಕ ಜವಾಬ್ದಾರಿ ಹೊಂದಿದ್ದೇವೆ. ಮುಂದಿನ ಎಂಟು ಹತ್ತು ವರ್ಷಗಳಲ್ಲಿಯೇ ಇದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ' ಎಂದು ಜೋ ಬಿಡೆನ್ ಹೇಳಿದ್ದರು. ಬಿಡೆನ್ ಅವರ ಹವಾಮಾನ ಯೋಜನೆಗಳು ಟೆಕ್ಸಾಸ್ ಮತ್ತು ಒಕ್ಲಾಹೊಮಾದಂತಹ ತೈಲ ರಾಜ್ಯಗಳ ಆರ್ಥಿಕ ಅವಘಡಕ್ಕೆ ಕಾರಣವಾಗುವಂತಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.

ಇಲ್ಲಿ ಕಡಿಮೆ ರೇಸಿಸ್ಟ್ ನಾನೇ

ಇಲ್ಲಿ ಕಡಿಮೆ ರೇಸಿಸ್ಟ್ ನಾನೇ

'ಈ ಕೊಠಡಿಯಲ್ಲಿ ಇರುವವರಲ್ಲಿ ನಾನು ಅತ್ಯಂತ ಕಡಿಮೆ ಜನಾಂಗೀಯ ಭೇದ ಮಾಡುವ ವ್ಯಕ್ತಿ' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ನಾನು ಎಲ್ಲರೊಂದಿಗೆ ಅದ್ಭುತ ಸಂಬಂಧ ಹೊಂದಿದ್ದೇನೆ. ಕತ್ತಲಾಗಿರುವುದರಿಂದ ನನಗೆ ಕೇಳುಗರಾರೂ ಕಾಣಿಸುತ್ತಿಲ್ಲ. ಆದರೆ ಕೇಳುಗರು ಯಾರು ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈ ಕೊಠಡಿಯಲ್ಲಿ ಅತ್ಯಂತ ಕಡಿಮೆ ರೇಸಿಸ್ಟ್ ವ್ಯಕ್ಯಿ ನಾನು' ಎಂದಿದ್ದಾರೆ.

ಭಾರತ ಪ್ರವಾಸದಲ್ಲಿ ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕಲ್‌ ಪಾಂಪಿಯೋಭಾರತ ಪ್ರವಾಸದಲ್ಲಿ ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕಲ್‌ ಪಾಂಪಿಯೋ

ಕಪ್ಪುವರ್ಣೀಯರು ಇಷ್ಟಪಡುತ್ತಾರೆ

ಕಪ್ಪುವರ್ಣೀಯರು ಇಷ್ಟಪಡುತ್ತಾರೆ

ಕಪ್ಪು ವರ್ಣೀಯರಿಗೆ ತಮ್ಮಷ್ಟು ಅನುಕೂಲ ಬೇರೆ ಯಾವ ಅಧ್ಯಕ್ಷರೂ ಮಾಡಿಕೊಟ್ಟಿಲ್ಲ ಎಂದಿರುವ ಟ್ರಂಪ್, 'ಕಪ್ಪು ವರ್ಣದ ಸಮುದಾಯದವರು ನನ್ನನ್ನು ಇಷ್ಟಪಡುತ್ತಾರೆ ಮತ್ತು ನನಗೂ ಅವರು ಇಷ್ಟ. ಅಬ್ರಹಾಂ ಲಿಂಕನ್ ಹೊರತುಪಡಿಸಿ ಯಾರೂ ಕಪ್ಪು ಜನಾಂಗದವರಿಗೆ ನೆರವು ನೀಡಿಲ್ಲ' ಎಂದು ಹೇಳಿದ್ದಾರೆ.

ಅತಿ ದೊಡ್ಡ ಜನಾಂಗೀಯ ದ್ವೇಷಿ

ಅತಿ ದೊಡ್ಡ ಜನಾಂಗೀಯ ದ್ವೇಷಿ

ಇದಕ್ಕೆ ಪ್ರತಿ ದಾಳಿ ನಡೆಸಿದ ಜೋ ಬಿಡೆನ್, 'ಅಮೆರಿಕದ ಆಧುನಿಕ ಇತಿಹಾಸದಲ್ಲಿ ನಾವು ಹೊಂದಿದ ಅತ್ಯಂತ ಜನಾಂಗೀಯ ದ್ವೇಷಿ ಅಧ್ಯಕ್ಷರೆಂದರೆ ಅಬ್ರಹಾಂ ಲಿಂಕನ್. ಪ್ರತಿ ಜನಾಂಗೀಯ ಬೆಂಕಿಗೂ ಅವರು ಇಂಧನ ಸುರಿಯುತ್ತಿದ್ದರು' ಎಂದು ಆರೋಪಿಸಿದ್ದಾರೆ.

English summary
US Elections: Donald Trump said India, China, Russia air is filthy and defended his stand in climate change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X