ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಗಿ ಸೋಲೊಪ್ಪಿಕೊಳ್ಳಲಿ: ಡೊನಾಲ್ಡ್ ಟ್ರಂಪ್‌ಗೆ ಮಾಜಿ ಪತ್ನಿ ಸಲಹೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 11: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಎದುರು ಸೋಲು ಕಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪರಾಜಯವನ್ನು ಒಪ್ಪಿಕೊಂಡಿಲ್ಲ. ಬದಲಾಗಿ ಪ್ರಕ್ರಿಯೆಯ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ. ತಮ್ಮ ಮತಗಳನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ. ಅಮೆರಿಕ ರಾಜಕೀಯದಲ್ಲಿನ ಈ ಗೊಂದಲಗಳ ನಡುವೆ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಟ್ರಂಪ್, 'ಸಂಪೂರ್ಣ ಪ್ರಕ್ರಿಯೆ ಈಗಾಗಲೇ ಮುಗಿಸಬೇಕಿತ್ತು. ಡೊನಾಲ್ಡ್ ಟ್ರಂಪ್ ಒಳ್ಳೆಯ ಪರಾಭವಿ' ಎಲ್ಲ ಎಂದಿದ್ದಾರೆ.

1977-1992ರ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಪತ್ನಿಯಾಗಿದ್ದ 71 ವರ್ಷದ ಇವಾನಾ, ಫಲಿತಾಂಶದ ಬಗ್ಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಟ್ರಂಪ್ ತಮ್ಮ 'ಹೋರಾಟ' ಮುಂದುವರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷ ಸ್ಥಾನ ಸೋತ ಬಳಿಕ ಅಲಸ್ಕಾದಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್ಅಧ್ಯಕ್ಷ ಸ್ಥಾನ ಸೋತ ಬಳಿಕ ಅಲಸ್ಕಾದಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್

ತಮ್ಮ ಮಾಜಿ ಪತಿ ಈ ಸಮರವನ್ನು ಕೊನೆಯವರೆಗೂ ಕೊಂಡೊಯ್ಯುವ ಸಾಧ್ಯತೆ ಇದೆ ಎಂದಿದ್ದಾರೆ. ಪ್ರಮುಖ ಮಾಧ್ಯಮ ಸಂಸ್ಥೆಗಳು ಬೈಡನ್ ವಿಜಯಿ ಎಂದು ಬಿಂಬಿಸಿದ್ದರೂ ಡೊನಾಲ್ಡ್ ಟ್ರಂಪ್ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸುವುದನ್ನು ತಡೆಯಲು ನಿರ್ಧರಿಸಿದ್ದಾರೆ. ಜತೆಗೆ ಶ್ವೇತಭವನ ತೊರೆಯಲು ನಿರಾಕರಿಸಿದ್ದಾರೆ. ಮುಂದೆ ಓದಿ.

ಸೋಲೊಪ್ಪುವ ವ್ಯಕ್ತಿಯಲ್ಲ

ಸೋಲೊಪ್ಪುವ ವ್ಯಕ್ತಿಯಲ್ಲ

'ಅವರೋ ಅಥವಾ ಇವರೋ, ಒಟ್ಟಿನಲ್ಲಿ ಇಡೀ ಪ್ರಕ್ರಿಯೆ ಮುಗಿದುಬಿಡಲು ಎಂದು ಬಯಸಿದ್ದೇನೆ. ಯಾರು ಗೆದ್ದರೂ ನಾನು ಕೇರ್ ಮಾಡುವುದಿಲ್ಲ. ಆದರೆ ಅವರು ಸೋಲುವ ವಿಚಾರದಲ್ಲಿ ಒಳ್ಳೆಯ ವ್ಯಕ್ತಿಯಲ್ಲ. ಸೋಲೊಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ಅವರು ಹೋರಾಡಲು ಹೋಗುತ್ತಾರೆ ಮತ್ತು ಹೋರಾಡುತ್ತಾರೆ' ಎಂದು ತಿಳಿಸಿದ್ದಾರೆ.

ರಾಜಕೀಯ ಜೀವನ ಮುಕ್ತಾಯ

ರಾಜಕೀಯ ಜೀವನ ಮುಕ್ತಾಯ

ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಜೀವನ ಮುಕ್ತಾಯವಾಗಿದೆ. ಹೀಗಾಗಿ ಅವರು ತಮ್ಮ ಸಹಜ ಜೀವನಕ್ಕೆ ಮರಳಬೇಕು ಎಂದು ಇವಾನಾ ಹೇಳಿದ್ದಾರೆ. ಈ ಸೋಲಿನ ಬಳಿಕ ಟ್ರಂಪ್ ಮತ್ತೆ ರಾಜಕೀಯದಲ್ಲಿ ಮುಂದುವರಿಯುತ್ತಾರೆ ಎಂದು ಅವರಿಗೆ ಅನಿಸಿಲ್ಲ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅಖಾಡಕ್ಕೆ ಮರಳುವುದರ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಇಲಾಖೆಗೆ ತನ್ನ ಆಪ್ತರನ್ನು ನೇಮಿಸಿದ ಡೊನಾಲ್ಡ್ ಟ್ರಂಪ್ರಕ್ಷಣಾ ಇಲಾಖೆಗೆ ತನ್ನ ಆಪ್ತರನ್ನು ನೇಮಿಸಿದ ಡೊನಾಲ್ಡ್ ಟ್ರಂಪ್

ಸಹಜ ಜೀವನಕ್ಕೆ ಮರಳಬೇಕಷ್ಟೇ

ಸಹಜ ಜೀವನಕ್ಕೆ ಮರಳಬೇಕಷ್ಟೇ

'ಅವರಿಗೆ ಬೇರೆ ಆಯ್ಕೆಯಿದೆ ಎಂದು ನನಗನ್ನಿಸುತ್ತಿಲ್ಲ. ಅವರು ಪಾಮ್ ಬೀಚ್‌ಗೆ ಹೋಗಲಿದ್ದಾರೆ ಮತ್ತು ಗಾಲ್ಫ್ ಆಡುತ್ತಾರೆ. ಸಹಜ ಜೀವನ ನಡೆಸುತ್ತಾರೆ ಎಂದು ನಗನ್ನಿಸುತ್ತದೆ. ಬಹುಶಃ ಅವರು ತೆಗೆದುಕೊಳ್ಳಬೇಕಾದ ಒಳ್ಳೆಯ ಆಯ್ಕೆ ಇದು' ಎಂದಿದ್ದಾರೆ.

ಸೋತಿದ್ದನ್ನು ಘೋಷಿಸಲಿ

ಸೋತಿದ್ದನ್ನು ಘೋಷಿಸಲಿ

'ಅವರು ಹೋಗಿ ತಾನು ಸೋತಿದ್ದಾಗಿ ಘೋಷಿಸಬೇಕು. ಆದರೆ ಅವರು ಸೋಲುವುದನ್ನು ದ್ವೇಷಿಸುತ್ತಾರೆ. ನನಗೆ ಅದಂತೂ ಖಾತರಿಯಿದೆ. ಆದರೆ ಅವರು ಸೋತರೆ ಸಂಪೂರ್ಣ ಸೋತುಹೋಗುತ್ತಾರೆ. ಅವರ ಬಳಿ ಸಾಕಷ್ಟು ಹಣವಿದೆ. ಹೋಗಲು, ಬದುಕಲು ಮತ್ತು ಜೀವನವನ್ನು ಆನಂದಿಸಲು ಜಾಗವಿದೆ' ಎಂದು ಇವಾನಾ ಹೇಳಿದ್ದಾರೆ.

ಟ್ರಂಪ್ ನಿರ್ಗಮನ ಪ್ರಕ್ರಿಯೆ ಹೇಗಿರುತ್ತದೆ? ಬಲವಂತವೋ- ಬರೀ ಸ್ವಂತವೋ?ಟ್ರಂಪ್ ನಿರ್ಗಮನ ಪ್ರಕ್ರಿಯೆ ಹೇಗಿರುತ್ತದೆ? ಬಲವಂತವೋ- ಬರೀ ಸ್ವಂತವೋ?

English summary
US Elections: US President Donald Trump's ex wife Ivana has suggested him to go and declare that he lost, but he hates to be a loser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X