• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!

|

ವಾಷಿಂಗ್ಟನ್, ಅಕ್ಟೋಬರ್ 21: ಕೊರೊನಾ ವೈರಸ್ ಸೋಂಕಿನ ವಿಚಾರ ಹಾಗೂ ವ್ಯಾಪಾರ ವಹಿವಾಟಿನ ಕುರಿತು ಚೀನಾ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಲವು ವರ್ಷಗಳಿಂದ ಚೀನಾದಲ್ಲಿ ಉದ್ಯಮ ಯೋಜನೆಗಳನ್ನು ನಡೆಸುತ್ತಿರುವುದು ಮತ್ತು ಚೀನಾದ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವುದು ಅವರ ತೆರಿಗೆ ದಾಖಲೆಗಳಿಂದ ಬಹಿರಂಗವಾಗಿದೆ.

ತಮ್ಮ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಚೀನಾದ ಪರ ಮೃದು ಧೋರಣೆ ಹೊಂದಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಇದರಿಂದ ತೀವ್ರ ಹಿನ್ನಡೆಯಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಟ್ರಂಪ್ v/s ಬಿಡೆನ್ ಕಿರಿಕ್, ಡಿಬೆಟ್ ವೇಳೆ ಮೈಕ್ ಮ್ಯೂಟ್

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಈ ಹಿಂದೆ ವರದಿಯಾಗಿರಲಿಲ್ಲ. ಅದು ಕಾರ್ಪೊರೇಟ್ ಹೆಸರಿನಲ್ಲಿ ಇರುವುದರಿಂದ ಅವರ ಸಾರ್ವಜನಿಕ ಹಣಕಾಸು ವಿವರಗಳಲ್ಲಿ ಬಹಿರಂಗವಾಗಿರಲಿಲ್ಲ ಎಂಬುದನ್ನು ಅವರ ತೆರಿಗೆ ದಾಖಲೆಗಳು ತಿಳಿಸಿವೆ. ಬ್ರಿಟನ್ ಮತ್ತು ಐರ್ಲೆಂಡ್‌ಗಳಲ್ಲಿಯೂ ಟ್ರಂಪ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.

ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ಸ್ ಮ್ಯಾನೇಜ್‌ಮೆಂಟ್ ನಿಭಾಯಿಸುತ್ತಿರುವ ಚೀನಾದ ಬ್ಯಾಂಕ್ ಖಾತೆಯಲ್ಲಿ 2013-2015ರ ಅವಧಿಯಲ್ಲಿ 188,561 ಡಾಲರ್‌ಅನ್ನು ತೆರಿಗೆಯಾಗಿ ಪಾವತಿಸಲಾಗಿದೆ. ಟ್ರಂಪ್ ಅವರ ವಿದೇಶಿ ಬ್ಯಾಂಕ್ ಖಾತೆಗಳಿಂದ ಎಷ್ಟು ಹಣ ರವಾನೆಯಾಗಿದೆ ಎಂಬುದನ್ನು ತೆರಿಗೆ ದಾಖಲೆಗಳು ತೋರಿಸಿಲ್ಲ. ಆಂತರಿಕ ಕಂದಾಯ ಸೇವೆಗಳ ಅಡಿಯಲ್ಲಿ ವಿದೇಶಗಳಿಂದ ಬರುವ ಆದಾಯದ ಭಾಗವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಆದರೆ ಚೀನಾದಿಂದ ಕೆಲವೇ ಸಾವಿರ ಡಾಲರ್ ಹಣ ಬಂದಿರುವುದಾಗಿ ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಅವರನ್ನೇ ಮರು ಆಯ್ಕೆ ಮಾಡಿ: ಭಾರತೀಯ ಅಮೆರಿಕನ್ನರು

ಟ್ರಂಪ್ ಅವರ ತೆರಿಗೆ ದಾಖಲೆಗಳು, ಅವರು ಚೀನಾದಲ್ಲಿ ಹಲವು ವರ್ಷಗಳಿಂದ ವಿವಿಧ ಪ್ರಾಜೆಕ್ಟ್‌ಗಳನ್ನು ನಡೆಸಲು ಐದು ಕಂಪೆನಿಗಳಲ್ಲಿ ಕನಿಷ್ಠ 192,000 ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ತೋರಿಸಿವೆ. 2010ರಿಂದ ಕಂಪೆನಿಗು ಕನಿಷ್ಠ 97,400 ಡಾಲರ್ ವೆಚ್ಚವನ್ನು ಪ್ರತಿಪಾದಿಸಿವೆ ಎಂದು ವರದಿ ತಿಳಿಸಿದೆ.

English summary
US Elections: Tax Record Shows US President Donald Trump maintains Chinese Bank accounts and business projects for years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X