ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಹುಡುಕಾಟದಲ್ಲಿ ಬೈಡೆನ್‌ಗಿಂತ ಟ್ರಂಪ್‌ಗೆ ಮುನ್ನಡೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 3: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ಜೋ ಬೈಡೆನ್ ಸಮೀಕ್ಷೆಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಆದರೆ ಅಂತರ್ಜಾಲದ ಹುಡುಕಾಟಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಎದುರಾಳಿ ಬೈಡನ್ ಅವರಿಗಿಂತಲೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಮುನ್ನಡೆ ಹೊಂದಿದ್ದಾರೆ.

ಚುನಾವಣೆಗೂ ಮುನ್ನ ನಡೆದ ಸಮೀಕ್ಷೆಗಳಲ್ಲಿ ಹೆಚ್ಚಿನ ಸಂಸ್ಥೆಗಳು ಬೈಡೆನ್ ಅವರಿಗೆ ಟ್ರಂಪ್ ಎದುರು ಸರಾಸರಿ ಎಂಟು ಅಂಕಗಳ ಮುನ್ನಡೆ ನೀಡಿವೆ. ಗೂಗಲ್ ಹುಡುಕಾಟದ ದತ್ತಾಂಶಗಳನ್ನು ತೆರೆದರೆ ಅಮೆರಿಕದ ಜನತೆಗೆ ಟ್ರಂಪ್ ಕುರಿತಾದ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಡೊನಾಲ್ಡ್‌ ಟ್ರಂಪ್ ಗೆಲುವಿಗಾಗಿ ದೆಹಲಿಯಲ್ಲಿ ಹಿಂದೂ ಸೇನೆ ವಿಶೇಷ ಪೂಜೆಡೊನಾಲ್ಡ್‌ ಟ್ರಂಪ್ ಗೆಲುವಿಗಾಗಿ ದೆಹಲಿಯಲ್ಲಿ ಹಿಂದೂ ಸೇನೆ ವಿಶೇಷ ಪೂಜೆ

ಅಧ್ಯಕ್ಷೀಯ ಚುನಾವಣೆಯ ಹಿಂದಿನ ದಿನ ನೋಡಿದಾಗಲೂ ಗೂಗಲ್ ಹುಡುಕಾಟದಲ್ಲಿ ಟ್ರಂಪ್ ಮತ್ತು ಬೈಡೆನ್ ನಡುವಿನ ಅಂತರ ಸಾಕಷ್ಟು ಹಿರಿದಾಗಿದೆ. ಜೋ ಬೈಡನ್ ಕುರಿತಾದ ಜನರ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಗೂಗಲ್ ದಾಖಲೆಗಳು ಹೇಳಿವೆ. ಟ್ರಂಪ್ ಅವರಿಗಾಗಿ ಸರಾಸರಿ ಶೇ 45ರಷ್ಟು ಮಂದಿ ಹುಡುಕಾಡಿದ್ದರೆ, ಬೈಡೆನ್ ಸರಾಸರಿ ಹುಡುಕಾಟ ಕೇವಲ ಶೇ 23ರಷ್ಟಿದೆ.

US Elections: Donald Trump Leads Joe Biden In Internet Search

ಗೂಗಲ್‌ನಲ್ಲಿ ಟ್ರಂಪ್ ಪರ ಹುಡುಕಾಟಗಳಲ್ಲಿ ನೆಬ್ರಸ್ಕಾ, ವೆರ್ಮಾಂಟ್, ಅರಿಜೋನಾ, ವಾಷಿಂಗ್ಟನ್ ಮತ್ತು ಒರೆಗಾನ್ ಮುಂಚೂಣಿಯಲ್ಲಿವೆ. ಈ ರಾಜ್ಯಗಳಲ್ಲಿ ಕೆಲವು ಡೆಮಾಕ್ರಟಿಕ್ ಪಕ್ಷದ ಪರವಾಗಿದ್ದರೂ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಪರ ಹುಡುಕಾಟ ಹೆಚ್ಚಿರುವುದು ಆಸಕ್ತಿಕರವಾಗಿದೆ. ಟೆಕ್ಸಾಸ್, ಡೆಲಾವೇರ್, ಕೊಲಂಬಿಯಾ, ಓಹಿಯೊ, ಅರ್ಕನ್ಸಾಸ್‌ಗಳಲ್ಲಿ ಸಹ ಬೈಡೆನ್ ಅವರಿಗಿಂತ ಟ್ರಂಪ್ ಮುನ್ನಡೆ ಪಡೆದುಕೊಂಡಿದ್ದಾರೆ.

ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೃತ್ಯ: ವೈರಲ್ ವಿಡಿಯೋಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೃತ್ಯ: ವೈರಲ್ ವಿಡಿಯೋ

ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ದಾಳಿಗಳ ಬಳಿಕ ಟ್ರಂಪ್ ಅವರು ರಾಪ್ಪರ್‌ಗಳಾದ ಲಿಲ್ ವೇಯ್ನ್ ಹಾಗೂ ಇತರರನ್ನು ಭೇಟಿಯಾಗಿದ್ದು, ಟ್ರಂಪ್ ಕುರಿತಾದ ಆಸಕ್ತಿ ಹೆಚ್ಚಲು ಕಾರಣವಾಗಿದೆ. ಚುನಾವಣೆಯಲ್ಲಿ ಜನಾಂಗೀಯ ನಿಂದನೆ ಅತ್ಯಂತ ಪ್ರಮುಖ ಚರ್ಚೆಯ ವಸ್ತುವಾಗಿತ್ತು. ರಾಪ್ಪರ್‌ಗಳು ಟ್ರಂಪ್ ಅವರ ನೀತಿಗಳನ್ನು ಬೆಂಬಲಿಸಿದ್ದು ಆಸಕ್ತಿ ಕೆರಳಿಸಿದೆ.

English summary
US Elections: Donald Trump has a clear lead over Joe Biden in internet search.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X