ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರು ಅಧಿಕಾರದಲ್ಲಿರುತ್ತಾರೋ ಯಾರಿಗೆ ಗೊತ್ತು?: ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 14: ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಯದೆ ರಾದ್ಧಾಂತವೆಬ್ಬಿಸುವ ಸೂಚನೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊನೆಗೂ ಸೋಲೊಪ್ಪಿಕೊಂಡು ಅಧಿಕಾರ ತ್ಯಜಿಸುವ ಸುಳಿವು ನೀಡಿದ್ದಾರೆ.

ಜಾರ್ಜಿಯಾದಲ್ಲಿ ಜಯಗಳಿಸಿದ್ದ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರಿಗೆ ನಾರ್ತ್ ಕರೊಲಿನಾದಲ್ಲಿಯೂ ಗೆಲುವು ಸಿಕ್ಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಮೂಲಕ ಬೈಡನ್ ಅವರ ಎಲೆಕ್ಟೊರಲ್ ಮತಗಳು 306ಕ್ಕೆ ಏರಿದಂತಾಗಿದೆ. ಅವರ ಎದುರಾಳಿ ಟ್ರಂಪ್ ಮತಗಳು 232ರಲ್ಲಿ ನಿಂತಿವೆ.

ಟ್ರಂಪ್ ಸೋತರೂ ಎರಡನೇ ಅವಧಿ ಸೇವೆಗೆ ಶ್ವೇತಭವನ ತಯಾರಿಟ್ರಂಪ್ ಸೋತರೂ ಎರಡನೇ ಅವಧಿ ಸೇವೆಗೆ ಶ್ವೇತಭವನ ತಯಾರಿ

ಇದುವರೆಗಿನ ಫಲಿತಾಂಶಗಳಲ್ಲಿ ಬೈಡನ್ ಪಡೆದ ಎಲೆಕ್ಟೊರಲ್ ಮತಗಳು, 2016ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಎದುರಾಳಿ ಹಿಲರಿ ಕ್ಲಿಂಟನ್ ವಿರುದ್ಧ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್ ಪಡೆದಿದ್ದ ಮತಗಳಿಗೆ ಸಮನಾಗಿವೆ. 306 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದ ಟ್ರಂಪ್, ತಮ್ಮ ಗೆಲುವನ್ನು ಭಾರಿ ಗೆಲುವು ಎಂದು ಕರೆದುಕೊಂಡಿದ್ದರು.

US Elections: Donald Trump Hints At Leaving White House

ತಾವು ಅಧ್ಯಕ್ಷರಾಗಿ ಉಳಿಯುವರೇ, ಇಲ್ಲವೇ ಎಂಬುದನ್ನು ಕಾಲವೇ ಹೇಳಲಿದೆ ಎಂದು ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಒಂದು ವಾರದಿಂದ ಕ್ಯಾಮೆರಾ ಎದುರು ನಿಂತು ಹೇಳಿಕೆ ನೀಡದೆ ಇದ್ದ ಟ್ರಂಪ್, ತಮ್ಮ ಮೌನ ಮುರಿದಿದ್ದಾರೆ. ರೋಸ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಲಸಿಕೆಯ ಕುರಿತು ಹೇಳಿಕೆ ನೀಡಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣಕ್ಕೆ ಆಡಳಿತವು ಲಾಕ್ ಡೌನ್ ಪರಿಹಾರದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಭವಿಷ್ಯದಲ್ಲಿ ಏನೇ ಆದರೂ- ಯಾರಿಗೆ ಗೊತ್ತು ಆಗ ಯಾವ ಆಡಳಿತವಿರುತ್ತದೆಯೋ? ಕಾಲವೇ ಅದನ್ನು ಹೇಳಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಹೋಗಿ ಸೋಲೊಪ್ಪಿಕೊಳ್ಳಲಿ: ಡೊನಾಲ್ಡ್ ಟ್ರಂಪ್‌ಗೆ ಮಾಜಿ ಪತ್ನಿ ಸಲಹೆಹೋಗಿ ಸೋಲೊಪ್ಪಿಕೊಳ್ಳಲಿ: ಡೊನಾಲ್ಡ್ ಟ್ರಂಪ್‌ಗೆ ಮಾಜಿ ಪತ್ನಿ ಸಲಹೆ

ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ:

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಕಾನೂನು ಸಮರ ನಡೆಸುತ್ತಿರುವ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಪೆನ್ಸಿಲ್ವೇನಿಯಾದಲ್ಲಿ ಚುನಾವಣೆಯ ದಿನದಂದು ಬಂದ 9,300 ಮೇಲ್ ಇನ್ ಮತಪತ್ರಗಳನ್ನು ಅಸಿಂಧುಗೊಳಿಸುವ ಟ್ರಂಪ್ ತಂಡ ಪ್ರಯತ್ನವನ್ನು ಫೆಡರಲ್ ಅಪೀಲ್ಸ್ ಕೋರ್ಟ್ ತಿರಸ್ಕರಿಸಿದೆ. ಅದರ ಬೆನ್ನಲ್ಲೇ ಟ್ರಂಪ್ ಪರ ನ್ಯಾಯಾಲಯಕ್ಕೆ ಹೋಗಿದ್ದ ಕಾನೂನು ತಂಡ ಪ್ರಕರಣದಿಂದ ಹಿಂದೆ ಸರಿದಿದೆ. ಪೆನ್ಸಿಲ್ವೇನಿಯಾ ಒಂದರಲ್ಲೇ ರಿಪಬ್ಲಿಕ್ ಪಕ್ಷ 15 ಕಾನೂನು ಪ್ರಕರಣಗಳನ್ನು ದಾಖಲಿಸಿದೆ.

English summary
US Elections 2020: Donald Trump hinted at leaving White House said, time will tell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X