ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಅಕ್ರಮ ಎಂದ ಟ್ರಂಪ್: ಸುದ್ದಿಗೋಷ್ಠಿ ಬಹಿಷ್ಕರಿಸಿದ ಮಾಧ್ಯಮಗಳು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 6: ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿವೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನಿರಂತರವಾಗಿ ಆರೋಪ ಮಾಡುತ್ತಿರುವ ಟ್ರಂಪ್ ಅವರ ಸುದ್ದಿಗೋಷ್ಠಿಯನ್ನು ಅನೇಕ ಮಾಧ್ಯಮಗಳು ಬಹಿಷ್ಕರಿಸಿವೆ. ಅನೇಕ ಪ್ರಮುಖ ಮಾಧ್ಯಮಗಳು ಟ್ರಂಪ್ ಸುದ್ದಿಗೋಷ್ಠಿಯ ಪ್ರಸಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದವು.

ಕಾನೂನುಬದ್ಧವಾದ ಮತಗಳನ್ನು ಮಾತ್ರವೇ ಎಣಿಕೆ ಮಾಡಿದರೆ ತಾವು ಸುಲಭವಾಗಿ ಗೆಲ್ಲುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ ಅಕ್ರಮವಾಗಿ ಮತ ಎಣಿಕೆ ನಡೆಯುತ್ತಿದೆ. ಮತಪತ್ರಗಳನ್ನು ಕದ್ದಿದ್ದಾರೆ ಎಂದು ಅವರು ಮತ್ತೆ ಆರೋಪ ಮಾಡಿದ್ದಾರೆ. ಅವರ ಈ ಹೇಳಿಕೆಗಳನ್ನು ಅನೇಕ ರಾಷ್ಟ್ರೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡಿಲ್ಲ.

ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ

ಎಂಎಸ್‌ಬಿಸಿ, ಎನ್‌ಬಿಸಿ, ಸಿಬಿಸಿ ಮತ್ತು ಎಬಿಸಿ ನ್ಯೂಸ್ ಸೇರಿದಂತೆ ಅನೇಕ ವಾಹಿನಿಗಳು ಟ್ರಂಪ್ ಹೇಳಿಕೆ ನೀಡಲು ಆರಂಭಿಸಿದ ಕೆಲವೇ ನಿಮಿಷದಲ್ಲಿ ಅದರ ಪ್ರಸಾರವನ್ನು ಮೊಟಕುಗೊಳಿಸಿದವು. ಆದರೆ ಸಿಎನ್ಎನ್ ಮತ್ತು ಫಾಕ್ಸ್ ನ್ಯೂಸ್ ಟ್ರಂಪ್ ಅವರ ಸಂಪೂರ್ಣ ಹೇಳಿಕೆಗಳನ್ನು ಪ್ರಸಾರ ಮಾಡಿದವು.

US Elections: Donald Trump Claims Easy Win If You Count Legal Votes

ಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂ

ಟ್ರಂಪ್ ಆರೋಪಕ್ಕೆ ಬೈಡನ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. 'ಹೆದರಿಸಿ ಅಥವಾ ಬೆದರಿಸಿ ಜನರನ್ನು ಮೌನವಾಗಿಸಲು ಸಾಧ್ಯವಿಲ್ಲ. ಪ್ರತಿ ಮತಗಳೂ ಎಣಿಕೆಯಾಗಬೇಕು. ನಮ್ಮ ಪ್ರಜಾಪ್ರಭುತ್ವವನ್ನು ನಮ್ಮಿಂದ ಕಸಿಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಈಗ ಮಾತ್ರ ಅಲ್ಲ, ಎಂದಿಗೂ. ಅಮೆರಿಕ ಬಹಳ ದೂರ ಸಾಗಿದೆ. ಅನೇಕ ಯುದ್ಧಗಳಲ್ಲಿ ಹೋರಾಡಿದೆ. ಹಾಗೆಯೇ ಇಂತಹ ಘಟನೆ ನಡೆಯದಂತೆ ತಡೆದಿದೆ' ಎಂದಿದ್ದಾರೆ.

English summary
US Elections: Donal Trump said I easily win if you count legal votes. Media cut away from press conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X