ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ಆರೋಪ: ಡೊನಾಲ್ಡ್ ಟ್ರಂಪ್‌ಗೆ ಮತ್ತೆ ಹಿನ್ನಡೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 28: ಈ ಬಾರಿಯ ಅಧ್ಯಕ್ಷೀಯ ಚುನಾವಣೆಯು ನ್ಯಾಯಸಮ್ಮತವಾಗಿರಲಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ನ್ಯಾಯಾಲಯವೊಂದು ತಿರಸ್ಕರಿಸಿದೆ. ನ್ಯಾಯಸಮ್ಮತ ಆಗಿರಲಿಲ್ಲ ಎಂದು ಕರೆದ ಮಾತ್ರಕ್ಕೆ ಅದು ಅನ್ಯಾಯದ್ದಾಗಿರುವುದಿಲ್ಲ ಎಂದು ಕೋರ್ಟ್ ಕಿಡಿಕಾರಿದೆ. ಪ್ರಮುಖ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿ ಜೋ ಬೈಡನ್ ಅವರ ಗೆಲುವನ್ನು ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ ಬಳಿಕ ಕೋರ್ಟ್ ಈ ತೀಕ್ಷ್ಣ ಹೇಳಿಕೆ ನೀಡಿದೆ.

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ನಿರಾಶೆಯಾಗಿತ್ತು. ಚುನಾವಣೆಯಲ್ಲಿ ಮೋಸ ನಡೆದಿದೆ ಎಂಬ ಡೊನಾಲ್ಡ್ ಟ್ರಂಪ್ ಪ್ರಚಾರ ತಂಡದ ಆರೋಪಗಳನ್ನು ಇದುವರೆಗೆ ಮೂರು ಮನವಿ ನ್ಯಾಯಾಲಯಗಳು ಯಾವುದೇ ಪುರಾವೆಗಳಿಲ್ಲದ ಆರೋಪ ಎಂದು ತಿರಸ್ಕರಿಸಿವೆ.

ಬೈಡನ್ ವಿಜಯಿ ಎಂದು ಎಲೆಕ್ಟೊರಲ್ ಕಾಲೇಜ್ ಘೋಷಿಸಿದರೆ ಶ್ವೇತಭವನ ತೊರೆಯುತ್ತೇನೆ: ಟ್ರಂಪ್ಬೈಡನ್ ವಿಜಯಿ ಎಂದು ಎಲೆಕ್ಟೊರಲ್ ಕಾಲೇಜ್ ಘೋಷಿಸಿದರೆ ಶ್ವೇತಭವನ ತೊರೆಯುತ್ತೇನೆ: ಟ್ರಂಪ್

'ಚುನಾವಣೆಯಲ್ಲಿನ ಅನ್ಯಾಯದ ಆರೋಪ ಬಹಳ ಗಂಭೀರ. ಆದರೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಮಾತ್ರಕ್ಕೆ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದಾಗುವುದಿಲ್ಲ' ಎಂದು ಮನವಿ ನ್ಯಾಯಾಲಯವು ಹೇಳಿದೆ.

US Elections: Court Snubs Donald Trumps Claim That The Election Was Unfair

ಫಿಲಿಡೆಲ್ಫಿಯಾ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುವ ಡೊನಾಲ್ಡ್ ಟ್ರಂಪ್ ಪ್ರಚಾರ ತಂಡದ ಇತ್ತೀಚಿನ ಪ್ರಯತ್ನವನ್ನು ಸಹ ಕೋರ್ಟ್ ತಿರಸ್ಕರಿಸಿದೆ. ಕೆಳ ನ್ಯಾಯಾಲಯದ ತೀರ್ಪಿನ ಪರಿಷ್ಕರಣೆ ನಿರರ್ಥಕ ಎಂದು ಕೋರ್ಟ್ ಹೇಳಿದೆ.

ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತ ಪಡೆದ ಬೈಡನ್ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತ ಪಡೆದ ಬೈಡನ್

ಟ್ರಂಪ್ ಪ್ರಚಾರ ತಂಡವು ಮಾಡಿರುವ ಆರೋಪಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕವೂ ಟ್ರಂಪ್ ಅವರ ವಕೀಲರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಲಿಯಾನಿ ಅವರು ವಂಚನೆ ನಡೆದಿರುವ ಕಾರಣ ಲಕ್ಷಾಂತರ ಮತಗಳನ್ನು ಕಿತ್ತು ಎಸೆಯಬೇಕು ಎಂದು ಮಾಡಿದ್ದ ವಾದವನ್ನು ಪೆನ್ಸಿಲ್ವೇನಿಯಾ ನ್ಯಾಯಾಲಯ ಕಳೆದ ವಾರ ತಳ್ಳಿಹಾಕಿತ್ತು.

English summary
US Elections: A Federal appeals court dismissed Donald Trump's claim that the presidential election was unfair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X