ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣ್ಣೆ ಸಿಗುತ್ತಿಲ್ಲ, ಅಂಗಡಿ ತೆಗೆದಿಲ್ಲ, ಕುಡುಕರ ಗೋಳು ಕೇಳುವವರಿಲ್ಲ!

|
Google Oneindia Kannada News

ಭಾರತದಲ್ಲಿ ಚುನಾವಣೆಗಳು ನಡೆದಾಗ ಎಣ್ಣೆ ಅಂಗಡಿ ಬಾಗಿಲು ಹಾಕೋದು ಮಾಮೂಲಿ. ಆದರೆ ಇಂತಹದ್ದೇ ಕಾನೂನು ಅಮೆರಿಕದಲ್ಲೂ ಇದೆ ಎಂದರೆ ನಿಮಗೆ ಅಚ್ಚರಿ ಆಗಬಹುದು. ಅಂದರೆ ಕುಡುಕರ ಕುರಿತು ಜಗತ್ತಿನ ಪವರ್‌ ಫುಲ್ ದೇಶಕ್ಕೂ ಭಯ ಇದೆ ಅನ್ನಿ.! ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾನ ಮುಗಿದಿದ್ದು ಮತ ಎಣಿಕೆ ಆರಂಭವಾಗಿದೆ. ಫಲಿತಾಂಶ ಇನ್ನೂ ಬಾಕಿ ಉಳಿದಿದೆ.

ಆದರೆ ಚುನಾವಣೆ ಘೋಷಣೆಯಾದ ಬಳಿಕ ಅಮೆರಿಕದ ಹಲವು ರಾಜ್ಯಗಳಲ್ಲಿ ಲಿಕ್ಕರ್ ಅಂದರೆ ಎಣ್ಣೆ ಬ್ಯಾನ್ ಆಗಿದೆ. ಕುಡುಕರ ಸ್ವರ್ಗಕ್ಕೆ ಬಾಗಿಲು ಹಾಕಿ, ಬೀಗ ಜಡಿದಿದ್ದಾರೆ ಅಮೆರಿಕದ ಅಧಿಕಾರಿಗಳು. ಇಂತಹ ಕಾನೂನನ್ನು ಅಮೆರಿಕ ನೂರಾರು ವರ್ಷಗಳ ಹಿಂದೆಯೇ ಜಾರಿಗೆ ತಂದಿದೆ.

ಆದರೆ ಈ ಬಾರಿ ಕೆಲವು ದೊಡ್ಡ ದೊಡ್ಡ ನಗರಗಳಲ್ಲಿ ಸಾಮಾನ್ಯ ಅಂಗಡಿಗಳನ್ನು ಕೂಡ ಮುಚ್ಚಿಸಲಾಗಿದೆ. ಇದಕ್ಕೆ ಬಲವಾದ ಕಾರಣ ಇದೆ. ಇಷ್ಟುದಿನ ಅಮೆರಿಕದ ಇತಿಹಾಸದಲ್ಲಿ ನಡೆದಿರುವ ಅಧ್ಯಕ್ಷೀಯ ಚುನಾವಣೆಗಳು 2020ರ ಮುಂದೆ ಡಮ್ಮಿ ಎನ್ನಬಹುದು. ಮತದಾನ ಪದ್ಧತಿಯಿಂದ ಹಿಡಿದು, ಮತ ಹಾಕಿ ಬ್ಯಾಲೆಟ್‌ಗಳನ್ನು ಎಣಿಕೆ ಕೇಂದ್ರಕ್ಕೆ ಸಾಗಿಸುವವರೆಗೂ ಕಾಂಟ್ರವರ್ಸಿಗಳೇ ನಡೆದಿವೆ.

ಸರ್ಕಾರದ ಆದೇಶಕ್ಕೆ ಮಣಿದು ''ಕೊರೊನಾ'' ಉತ್ಪಾದನೆ ಬಂದ್ಸರ್ಕಾರದ ಆದೇಶಕ್ಕೆ ಮಣಿದು ''ಕೊರೊನಾ'' ಉತ್ಪಾದನೆ ಬಂದ್

ಇದನ್ನು ಮೊದಲೇ ಅರಿತಿದ್ದ ಅಮೆರಿಕದ ಹಲವು ರಾಜ್ಯಗಳು ಲಿಕ್ಕರ್ ಬ್ಯಾನ್ ಮಾಡಿವೆ. ಹೀಗೆ ಎಣ್ಣೆ ಸಿಗದೆ ಕುಡುಕರು ತಮ್ಮ ತಮ್ಮ ಅಡ್ಡೆಗಳಿಗೆ ಹೋಗಿ, ಬಾರ್ ಬಾಗಿಲು ಬಡಿದು ವಾಪಸ್ ಬರುತ್ತಿದ್ದಾರೆ. ಈ ಸೀನ್ ಇನ್ನಷ್ಟು ದಿನ ಕಾಮನ್ ಆಗಿರಲಿದ್ದು ಅಮೆರಿಕದಲ್ಲಿ ಎಲ್ಲಾ ಶಾಂತವಾಗುವ ತನಕ ಮತ್ತೆ ಬಾರ್‌ಗಳ ಬಾಗಿಲು ತೆರೆಯುವುದಿಲ್ಲ.

ಅಮೆರಿಕದಲ್ಲಿ ರಾಜ್ಯಗಳಿಗೆ ಪರಮಾಧಿಕಾರ

ಅಮೆರಿಕದಲ್ಲಿ ರಾಜ್ಯಗಳಿಗೆ ಪರಮಾಧಿಕಾರ

ಭಾರತ ಕೂಡ ಒಂದು ಗಣರಾಜ್ಯ ಅಂದರೆ ರಾಜ್ಯಗಳಿಂದ ಒಗ್ಗೂಡಿರುವ ದೇಶ. ಅಮೆರಿಕ ಕೂಡ ಅದೇ ರೀತಿ ಗಣರಾಜ್ಯವಾಗಿದೆ. ಆದರೆ ಅಮೆರಿಕದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರದಷ್ಟೇ ಪವರ್ ಇರುತ್ತದೆ. ಭಾರತದಂತೆ ರಾಜ್ಯಗಳು ಪ್ರತಿಯೊಂದಕ್ಕೂ ಕೇಂದ್ರದ ಬಳಿ ಕೇಳಿ ಪಡೆಯಬೇಕಿಲ್ಲ. ತಮಗೆ ಬರಬೇಕಾದ ಅನುದಾನದಿಂದ ಹಿಡಿದು, ತಮಗೆ ಬೇಕಾದ ಕಾನೂನಗಳ ತನಕ ತಮ್ಮಿಷ್ಟದಂತೆ ಬಾಳುತ್ತವೆ. 50 ರಾಜ್ಯಗಳೂ ನೆಮ್ಮದಿಯಾಗಿ, ಸೌಖ್ಯವಾಗಿ ಬದುಕಲು ಇದೂ ಒಂದು ಕಾರಣ.
ಹೀಗಾಗಿಯೇ ಅಮೆರಿಕದ ಕೇಂದ್ರ ಸರ್ಕಾರ ಅಂದರೆ ಈಗ ಟ್ರಂಪ್ ನಡೆಸುತ್ತಿರುವ ಆಡಳಿತ ರಾಜ್ಯಗಳ ವಿಚಾರದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಬರೀ ದೇಶದ ರಕ್ಷಣೆ ಮಾಡುವುದು ಹಾಗೂ ತೆರಿಗೆಯನ್ನು ಸಂಗ್ರಹಿಸುವುದು ಕೇಂದ್ರ ಸರ್ಕಾರದ ಪ್ರಮುಖ ಕೆಲಸ. ರಾಜ್ಯಗಳು ತಮಗೆ ಅನುಗುಣವಾಗಿ ಕಾನೂನುಗಳನ್ನು ರೂಪಿಸುತ್ತವೆ. ಉದಾಹರಣೆಗೆ ಅಮೆರಿಕದಲ್ಲಿ ಹಲವು ರಾಜ್ಯಗಳು ಗಾಂಜಾ ಮೇಲಿದ್ದ ನಿಷೇಧ ತೆಗೆದು ಹಾಕಿವೆ ಹಾಗೂ ಸದ್ಯದ ಚುನಾವಣೆಯಲ್ಲಿ ಲಿಕ್ಕರ್ ಬ್ಯಾನ್ ಮಾಡಿವೆ. ಇದೇ ರೀತಿ ಹಲವು ನಿರ್ಧಾರಗಳನ್ನು ತಮಗೆ ಬೇಕಾದ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳುತ್ತವೆ.

ಗನ್ ಶಾಪ್‌ಗಳಿ ಸರ್ಕಾರಿ ಸೀಲ್..!

ಗನ್ ಶಾಪ್‌ಗಳಿ ಸರ್ಕಾರಿ ಸೀಲ್..!

ಅಮೆರಿಕದಲ್ಲಿ ಬಾರ್‌ಗಳಿಗೆ ಮಾತ್ರ ಬೀಗ ಹಾಕಿಲ್ಲ. ಬದಲಾಗಿ ಮದ್ದು ಗುಂಡು ಮಾರುವ ಅಂಗಡಿಗಳಿಗೂ ಬೀಗ ಜಡಿದಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಗನ್‌ಗಳು ಸೇಲ್ ಆಗಿರುವ ಸಂಗತಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ, ಅಹಿತಕರ ಘಟನೆಗಳ ಭವಿಷ್ಯ ಅರಿತು ಗನ್ ಸೇಲ್ ಬ್ಯಾನ್ ಮಾಡಿವೆ ಹಲವು ರಾಜ್ಯಗಳು. ಪ್ರಮುಖವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಎಲ್ಲವೂ ಸ್ತಬ್ಧವಾಗಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!

ಅಂಗಡಿ ಕಿಟಕಿಗಳಿಗೆ ಹಲಗೆ ಬಡಿದರು..!

ಅಂಗಡಿ ಕಿಟಕಿಗಳಿಗೆ ಹಲಗೆ ಬಡಿದರು..!

ಹೌದು, ಆಫ್ರಿಕನ್-ಅಮೆರಿಕನ್ ಮೇಲೆ ಇತ್ತೀಚೆಗೆ ದಾಳಿಗಳು ನಡೆದ ಸಂದರ್ಭದಲ್ಲಿ ಅಮೆರಿಕದ ಹಲವು ರಾಜ್ಯಗಳು ಹೊತ್ತಿ ಉರಿದಿದ್ದವು. ಆಗ ಹಲವು ಅಂಗಡಿಗಳಲ್ಲಿ ಲೂಟಿ ಕೂಡ ನಡೆದಿತ್ತು. ಹೀಗೆ ಲೂಟಿ ನಡೆದ ಅಂಗಡಿಗಳ ಪೈಕಿ, ಅತಿಹೆಚ್ಚು ಟಾರ್ಗೆಟ್ ಮಾಡಿದ್ದು ಗ್ಲಾಸ್ ಡಿಸೈನ್ ಇರುವ ಶಾಪ್‌ಗಳನ್ನೇ. ಅಮೆರಿಕದ ನಗರಗಳಲ್ಲಿ ಅಂಗಡಿಗಳ ಗ್ಲಾಸ್ ಪುಡಿ ಮಾಡಿ ಕೋಟ್ಯಂತರ ಡಾಲರ್ ಬೆಲೆ ಬಾಳವ ವಸ್ತುಗಳನ್ನು ದರೋಡೆ ಮಾಡಲಾಗಿತ್ತು. ಅದರಲ್ಲೂ ಐಫೋನ್ ಅಂಗಡಿಗಳೇ ದರೋಡೆಕೋರರ ಪ್ರಮುಖ ಟಾರ್ಗೆಟ್ ಆಗಿತ್ತು. ಈಗ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಇಂತಹದ್ದೇ ಹಿಂಸಾಚಾರ ಸಂಭವಿಸುವ ಎಲ್ಲಾ ಸಾಧ್ಯತೆಗಳು ಇದ್ದು, ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್, ಲಾಸ್ ವೇಗಾಸ್ ಸೇರಿದಂತೆ ಅಮೆರಿಕದ ದೊಡ್ಡ ದೊಡ್ಡ ನಗರಗಳಲ್ಲಿ ಗ್ಲಾಸ್ ಡಿಸೈನ್ ಶಾಪ್‌ಗಳಿಗೆ ಹಲಗೆ ಹೊಡೆದು ಲಾಕ್ ಮಾಡಿದ್ದಾರೆ.

ಫ್ರೆಂಚ್ ಫ್ರೈಸ್‌ಗೂ ಪರದಾಟ..!

ಫ್ರೆಂಚ್ ಫ್ರೈಸ್‌ಗೂ ಪರದಾಟ..!

ನಿಮಗೆ ಇದು ಆಶ್ಚರ್ಯ ಎನಿಸಿದರೂ ಸತ್ಯ. ಅಮೆರಿಕದ ಯುವ ಜನಾಂಗದಲ್ಲಿ ಕೆಲವರು ಕುಡುಕರಾಗಿದ್ದರೆ, ಮತ್ತೆ ಕೆಲವರಿಗೆ ಅತಿ ಭಕ್ಷಣೆಯ ದುರಭ್ಯಾಸವಿದೆ. ಅದರಲ್ಲೂ ಫ್ರೆಂಚ್ ಫ್ರೈಸ್ ಎಂದರೆ ಜೀವ ಬಿಡುವುದು ಬಾಕಿ. ಅಷ್ಟು ಪ್ರಮಾಣದಲ್ಲಿ ಫ್ರೆಂಚ್ ಫ್ರೈಸ್‌ ಇಷ್ಟಪಡುವ ಅಮೆರಿಕನ್ನರು ಇದ್ದಾರೆ. ಫಲಿತಾಂಶ ಹೊರಬಿದ್ದ ಬಳಿಕ ಅಥವಾ ಫಲಿತಾಂಶದ ಸಂದರ್ಭ ಹಿಂಸೆ ಭುಗಿಲೇಳುವ ಸಾಧ್ಯತೆ ಇರುವ ಹಿನ್ನೆಲೆ ಲಿಕ್ಕರ್ ಶಾಪ್‌ಗಳ ಜೊತೆ ಹೋಟೆಲ್ ಹಾಗೂ ಫ್ರೆಂಚ್ ಫ್ರೈಸ್ ಮಾರುವ ಫಾಸ್ಟ್‌ಫುಡ್ ಶಾಪ್‌ಗಳಿಗೂ ಬೀಗ ಜಡಿಯಲಾಗಿದೆ. ಪರಿಣಾಮ ಅಮೆರಿಕದ ಯುವ ಜನತೆ ತಮ್ಮ ನೆಚ್ಚಿನ ಫ್ರೆಂಚ್ ಫ್ರೈಸ್‌ಗಾಗಿ ಗೂಗಲ್‌ನಲ್ಲಿ ತಡಕಾಡುತ್ತಿದ್ದಾರೆ. ಹೀಗಾಗಿ ಗೂಗಲ್ ಟ್ರೆಂಡಿಂಗ್‌ನಲ್ಲಿ ಲಿಕ್ಕರ್ ಹಾಗೂ ಫ್ರೆಂಚ್ ಫ್ರೈಸ್ ಮೊದಲ ಸ್ಥಾನ ಪಡೆದಿವೆ. ಹೀಗಾದರೆ ಊಹಿಸಿ ಅಲ್ಲಿನ ಯುವ ಸಮೂಹ ಫಾಸ್ಟ್ ಫುಡ್ ಮತ್ತು ಲಿಕ್ಕರ್‌ಗೆ ಎಷ್ಟು ದಾಸರಾಗಿರಬಹುದು ಎಂಬುದನ್ನು.

Infographics: ಶ್ರೀಮಂತ ರಾಷ್ಟ್ರದಲ್ಲಿ ಅತ್ಯಂತ ದುಬಾರಿ ವೆಚ್ಚದ ಚುನಾವಣೆ..!Infographics: ಶ್ರೀಮಂತ ರಾಷ್ಟ್ರದಲ್ಲಿ ಅತ್ಯಂತ ದುಬಾರಿ ವೆಚ್ಚದ ಚುನಾವಣೆ..!

English summary
US Elections: Many states have banned sale of liquor in the wake of the US presidential election. With alcohol bans in America, young people are struggling for alcohol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X