ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪ

|
Google Oneindia Kannada News

ಕೊರೊನಾ ಸೋಂಕಿನಿಂದಾಗಿ ಅಮೆರಿಕನ್ನರು ಪ್ರಾಣಬಿಡುತ್ತಿದ್ದರೆ, ವೈದ್ಯರು ಅದರಿಂದ ದುಡ್ಡು ಮಾಡುತ್ತಿದ್ದಾರೆ ಅಂತಾ ಅಮೆರಿಕ ಅಧ್ಯಕ್ಷ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಅಮೆರಿಕದಲ್ಲೀಗ ಊಹೆಗೂ ಮೀರಿ ಕೊರೊನಾ ಹಬ್ಬುತ್ತಿದ್ದು, ದಿನವೊಂದಕ್ಕೆ ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಕನ್ಫರ್ಮ್ ಆಗುವ ಸಂಭವವಿದೆ. ಮುಂದಿನ 6 ವಾರ ಅಮೆರಿಕದಲ್ಲಿ ನರಕ ಸದೃಶ ವಾತಾವರಣ ನಿರ್ಮಾಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆದರೆ ಈ ಸಂದರ್ಭದಲ್ಲೇ ಟ್ರಂಪ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇನ್ನೇನು ಅಮೆರಿಕ ಚುನಾವಣೆಗೆ ತೆರೆ ಬೀಳಲಿರುವ ಹಿನ್ನೆಲೆ ಚುನಾವಣಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಟ್ರಂಪ್, ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿ

ಕಳೆದ ವಾರ ನಡೆದಿದ್ದ ಎಲೆಕ್ಷನ್ ಡಿಬೆಟ್ ಸಂದರ್ಭದಲ್ಲೂ ಟ್ರಂಪ್ ಇದೇ ರೀತಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಅಮೆರಿಕದ ವೈದ್ಯರನ್ನು ಕೆಣಕುವ ಕೆಲಸಕ್ಕೆ ಟ್ರಂಪ್ ಕೈಹಾಕಿದ್ದು, ಟ್ರಂಪ್ ಹೇಳಿಕೆ ಬಗ್ಗೆ ಅಮೆರಿಕದ ವೈದ್ಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೊರೊನಾ ತೊಲಗುತ್ತಿದೆ.. ತೊಲಗುತ್ತಿದೆ..!

ಕೊರೊನಾ ತೊಲಗುತ್ತಿದೆ.. ತೊಲಗುತ್ತಿದೆ..!

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ 3ನೇ ಡಿಬೆಟ್‌ನಲ್ಲೂ ಟ್ರಂಪ್ ಇದೇ ರೀತಿ ಹೇಳಿಕೆ ನೀಡಿದ್ದರು. ನಾನು ಹೇಳುತ್ತಾ ಬಂದಿದ್ದೀನಿ ಕೊರೊನಾ ತೊಲಗುತ್ತಿದೆ, ಕೊರೊನಾ ತೊಲಗುತ್ತಿದೆ ಅಂತಾ. ಕೊರೊನಾ ಇನ್ನು ಮುಂದೆ ಇರಲು ಸಾಧ್ಯವಿಲ್ಲ ಎಂದು ಟ್ರಂಪ್ ಉದ್ಘರಿಸಿದ್ದರು. ಇದಾದ ಬಳಿಕ, ಅಂದ್ರೆ ಮರುದಿನವೇ ಅಮೆರಿಕ ಕೊರೊನಾ ಸೋಂಕಿತರ ವಿಚಾರದಲ್ಲಿ ಮತ್ತೊಂದು ದಾಖಲೆ ಬರೆದಿತ್ತು. ಒಂದೇ ದಿನದಲ್ಲಿ 83 ಸಾವಿರ ಜನರಿಗೆ ಸೋಂಕು ತಗುಲಿತ್ತು. ಹೀಗೆ ಟ್ರಂಪ್ ಕೊರೊನಾ ನಿಭಾಯಿಸುವ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೆ ಕೊರೊನಾ ಬಗ್ಗೆ ಮಾತನಾಡುವಾಗಲೂ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ.

ಟ್ರಂಪ್ ಕೂಡ ‘ಸೂಪರ್ ಸ್ಪ್ರೆಡ್ಡರ್’..?

ಟ್ರಂಪ್ ಕೂಡ ‘ಸೂಪರ್ ಸ್ಪ್ರೆಡ್ಡರ್’..?

ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡುವುದನ್ನು ಅಳೆದು, ತೂಗಿ 'ಸೂಪರ್ ಸ್ಪ್ರೆಡ್ಡರ್' ಪಟ್ಟ ನೀಡಲಾಗುತ್ತದೆ. ಸೋಂಕಿತ ವ್ಯಕ್ತಿಯೊಬ್ಬ ತನ್ನಿಂದ ಹಲವರಿಗೆ ಸೋಂಕು ಮೆತ್ತಿಸಿದ್ದರೆ ಆತನನ್ನು 'ಸೂಪರ್ ಸ್ಪ್ರೆಡ್ಡರ್' ಎನ್ನಲಾಗುತ್ತದೆ. ಟ್ರಂಪ್‌ಗೂ ಈ ಪಟ್ಟ ಸಿಕ್ಕಿದ್ದು, ವಿಪಕ್ಷವಾದ ಡೆಮಾಕ್ರಟಿಕ್ ನಾಯಕರು ಟ್ರಂಪ್ 'ಸೂಪರ್ ಸ್ಪ್ರೆಡ್ಡರ್' ಎಂದು ಆರೋಪಿಸುತ್ತಿದ್ದಾರೆ. ಸ್ವತಃ ಒಬಾಮಾ ಕೂಡ ಟ್ರಂಪ್ ಒಬ್ಬ 'ಸೂಪರ್ ಸ್ಪ್ರೆಡ್ಡರ್' ಎನ್ನುವ ಧಾಟಿಯಲ್ಲೇ ಮಾತನಾಡಿದ್ದನ್ನ ಸ್ಮರಿಸಬಹುದು. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್‌ಗೆ ಸೋಂಕು ವಕ್ಕರಿಸಿದ ಬಳಿಕ, ವೈಟ್‌ಹೌಸ್‌ನ ಅನೇಕರಿಗೆ ಕೊರೊನಾ ತಗುಲಿತ್ತು. ಟ್ರಂಪ್ ಅವರಿಂದಲೇ ವೈಟ್‌ಹೌಸ್‌ನಲ್ಲಿ ಹಲವರಿಗೆ ಕೊರೊನಾ ತಗುಲಿದೆ ಎಂಬುದು ಬಿಡೆನ್, ಒಬಾಮಾ ಸೇರಿದಂತೆ ಹಲವು ನಾಯಕರು ಗಂಭೀರ ಆರೋಪ ಮಾಡಿದ್ದರು.

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಟ್ರಂಪ್‌ಗೂ ಹಾಗೂ ಕೊರೊನಾ ವಿವಾದಗಳಿಗೂ ಅವಿನಾಭಾವ ಸಂಬಂಧ ಇರುವಂತೆ ಕಾಣುತ್ತಿದೆ. ಏಕೆಂದರೆ ಟ್ರಂಪ್ ಹೀಗೆ ಕೊರೊನಾ ವಿಚಾರವಾಗಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ಕೊರೊನಾ ಕುರಿತು ಟ್ರಂಪ್ ಕೊಟ್ಟ ಹೇಳಿಕೆಗಳು ಭಾರಿ ವಿವಾದ ಸೃಷ್ಟಿ ಮಾಡಿದ್ದವು. ಅದರಲ್ಲೂ ಕ್ರಿಮಿ ನಾಶಕ ವಿಷವನ್ನು ಕೊರೊನಾ ಸೋಂಕಿತರ ದೇಹಕ್ಕೆ ಚುಚ್ಚಬಹುದು ಅಥವಾ ನೇರಳಾತೀತ ಕಿರಣಗಳನ್ನು ಸೋಂಕಿತರ ದೇಹದ ಮೇಲೆ ಬಿಟ್ಟರೆ ಕೊರೊನಾ ಸಾಯುತ್ತೆ ಎಂದಿದ್ದ ಮಿ.ಟ್ರಂಪ್ ಊಹೆಗಳು ಸಂಚಲನ ಸೃಷ್ಟಿಸಿತ್ತು. ಎಲೆಕ್ಷನ್ ಡಿಬೆಟ್ ವೇಳೆ ಅಮೆರಿಕದಲ್ಲಿ ಕೊರೊನಾ ಪ್ರಭಾವದ ಬಗ್ಗೆ ಪ್ರಶ್ನೆ ಎದ್ದಾಗ, ಕೊರೊನಾ ತೊಲಗುತ್ತಿದೆ ಎನ್ನುವ ಮೂಲಕ ಟ್ರಂಪ್ ಆಕ್ರೋಶಕ್ಕೆ ತುತ್ತಾಗಿದ್ದರು.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದರ ಪರಿಣಾಮ ಹೇಗಿರಲಿದೆ..?

ಇದರ ಪರಿಣಾಮ ಹೇಗಿರಲಿದೆ..?

ಅಮೆರಿಕದಲ್ಲಿ ವೈದ್ಯರಿಗೆ ಗೌರವಯುತ ಸ್ಥಾನವಿದೆ. ಅದರಲ್ಲೂ ಅಲ್ಲಿನ ಪ್ರಬುದ್ಧ ಮತದಾರರಿಗೆ ವೈದ್ಯರ ಬಗ್ಗೆ ಸಾಕಷ್ಟು ಕಾಳಜಿ ಇದೆ. ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಅಮೆರಿಕದ ವೈದ್ಯ ಪಡೆ ಕೊರೊನಾ ಸೋಂಕಿತರ ಜೀವ ಉಳಿಸಿದೆ. ಪರಿಸ್ಥಿತಿ ಹೀಗಿರುವಾಗಲೇ ಟ್ರಂಪ್ ವೈದ್ಯರನ್ನು ಬೈದಿದ್ದಾರೆ. ಹೆಣದ ಮೇಲೆ ದುಡ್ಡು ಮಾಡುವವರು ಎಂದಿದ್ದಾರೆ. ಅಷ್ಟಕ್ಕೂ ಇದು ಅಧ್ಯಕ್ಷೀಯ ಚುನಾವಣೆ ಮತ್ತು ಟ್ರಂಪ್ ಮೇಲೆ ಪರಿಣಾಮ ಬೀರುವುದಿಲ್ಲವಾ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿದೆ. ಈಗಾಗಲೇ ಟ್ರಂಪ್ ಕೊರೊನಾ ವಿಚಾರದಲ್ಲಿ ಸಾಕಷ್ಟು ಕೆಟ್ಟ ಹೆಸರು ಗಳಿಸಿದ್ದಾರೆ. ಈಗ ಆ ಪಟ್ಟಿಗೆ ಹೊಸ ಆರೋಪ ಸೇರ್ಪಡೆಯಾಗುತ್ತಿದ್ದು, ಮತ್ತಷ್ಟು ಮತಗಳು ಡೆಮಾಕ್ರಟಿಕ್ ಅಭ್ಯರ್ಥಿ ಬಿಡೆನ್ ಪರವಾಗಿ ಬಿದ್ದರೂ ಆಶ್ಚರ್ಯಪಡಬೇಕಿಲ್ಲ.

English summary
US President Trump is making serious allegations on American doctors that, Americans are dying of coronavirus but doctors are Making money from it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X